ಏ.೫,೭ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಸದಾಶಿವಪೇಟೆಯ ಶ್ರೀ ಗುರು ಗದಿಗೇಶ್ವರರ ೪೯೫ ನೇ ಹಾಗು ಶ್ರೀ ಬಸವಣ್ಣೇಂದ್ರ ಸ್ವಾಮೀಜಿ ಯವರ ೪೨೦ ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಏ. ೫ ರಿಂದ ಏ.೭ ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಏ.೫ ಶನಿವಾರ ಪ್ರಾಥ:ಕಾಲ ಜೇಕಿನಕಟ್ಟಿ ಗ್ರಾಮದ ಪ್ರಭಯ್ಯನವರಮಠದ ಸದ್ಭಕ್ತರಿಂದ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿವೆ. ಸಂಜೆ ೭ ಗಂಟೆಗೆ ನಡೆಯಲಿರುವ ಧರ್ಮಸಭೆಯ ಸಾನಿಧ್ಯವನ್ನು ಬಂಕಾಪುರ ದೇಸಾಯಿಮಠದ ಶ್ರೀ ಮಹಾಂತಸ್ವಾಮಿಗಳು ವಹಿಸುವರು. ಸವಣೂರ ಅಡವಿಸ್ವಾಮಿಮಠದ ಶ್ರೀ ಕುಮಾರಮಹಾಸ್ವಾಮಿಗಳು ಉದ್ಘಾಟಿಸುವರು. ಡಾ.ನಾಗರಾಜ ದ್ಯಾಮನಕೊಪ್ಪ ಉಪನ್ಯಾಸ ನೀಡುವರು. ಶರಣಬಸವ ಬಿ.ಕೆ, ಅಧ್ಯಕ್ಷತೆ ವಹಿಸುವರು. ಧರ್ಮ ಸಭೆಯ ನಂತರ ಡಾ.ರಾಜ್ ಗುರು ಮೆಲೋಡಿ ಗಾನ ಕಲಾ ತಂಢದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಏ.೬ ರವಿವಾರ ಪ್ರಾಥ:ಕಾಲ ಹೋತನಹಳ್ಳಿ ಸಿಂಧಗಿಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರಿಂದ ಲಿಂಗದೀಕ್ಷೆ ನಡೆಯಲಿದೆ. ಸಂಜೆ ೪ ಗಂಟೆಗೆ ರಥೋತ್ಸವ ಜರುಗಲಿದೆ. ಸಂಜೆ ೭ ಗಂಟೆಗೆ ನಡೆಯಲಿರುವ ಧರ್ಮಸಭೆಯ ಸಾನಿಧ್ಯವನ್ನು ಸವಣೂರ ದೊಡ್ಡಹುಣಸೆಮಠದ ಶ್ರೀ ಚನ್ನಬಸವ ಸ್ವಾಮಿಜಿ, ಹತ್ತಿಮತ್ತೂರಿನ ಶ್ರೀ ನಿಜಗುಣ ಶಿವಯೋಗಿಗಳು ಆಗಮಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರಸಚಿವ ಪ್ರಲ್ಹಾದ ಜೋಶಿ, ಹೇಸ್ಕಾಂ ಅಧ್ಯಕ್ಷ ಅಜೀಮ್ ಪೀರ ಖಾದ್ರಿ ಸೇರಿದಂತೆ ಇತರರು ಆಗಮಿಸುವರು. ಏ.೭ ಸೋಮವಾರ ಸಂಜೆ ೬ ಗಂಟೆಗೆ ಕಡುಬಿನ ಕಾಳಗ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.