ಬೆಳೆ ವಿಮೆ ತುಂಬಿದ ರೈತರಿಗೆ ಮೋಸ ಶಿಡ್ಲಾಪೂರ…

ಬೆಳೆ ವಿಮೆ ತುಂಬಿದ ರೈತರಿಗೆ ಮೋಸ ಭುವನೇಶ್ವರ ಶಿಡ್ಲಾಪೂರ

ವೀರಮಾರ್ಗ ನ್ಯೂಸ್ : ಹಾವೇರಿ : ಜಿಲ್ಲೆಯಲ್ಲಿ ಪ್ರತಿಶತ ನೂರಕ್ಕೆ ತೊಂಬತ್ತರಷ್ಟು ರೈತರು 2025 /26 ನೇ ಸಾಲಿನ ಹಂಗಾಮಿನಲ್ಲಿ ಫಸಲು ಭೀಮಾ ಯೋಜನೆ ಅಡಿಯಲ್ಲಿ ರೈತರು ಬೆಳೆವಿಮೆ ತುಂಬಿದ್ದು ಸಾವಿರಾರು ಕೋಟಿಗಟ್ಟಲೆ ಹಣವನ್ನು ರೈತರು ತುಂಬಿದ್ದಿರುತ್ತದೆ ಅದಕ್ಕೆ ಈಗ ಸರ್ಕಾರ ಸಾಸಿವೆಕಾಳಿನಷ್ಟು ಮಾತ್ರ ಬೆಳೆ ವಿಮೆ ಜಾರಿಗೊಳಿಸಿದೆ ಒಂದು ತಾಲೂಕಿನಲ್ಲಿ 30ಕ್ಕೂ ಹೆಚ್ಚು ಗಾಮ ಪಂಚಾಯತಿಗಳಿದ್ದು ಅದರಲ್ಲಿ ನಾಲ್ಕು ಐದು ನಾಲ್ಕು ಐದು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಮಾತ್ರ ಹಣ ಬಿಡುಗಡೆ ಮಾಡಿದರೆ ಇನ್ನು ಉಳಿದ 90% ರಷ್ಟು ಶಾರ್ಟ್ ಫಾಲ್ ಫೇಲ್ ಎಂದು ಮಾಡಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಇದರಲ್ಲಿ ರೈತರಿಗೆ ಮಹಾ ಮೋಸವಾಗಿದೆ ಸರ್ಕಾರಕ್ಕೆ ಹಾಗೂ ಇನ್ಸೂರೆನ್ಸ್ ಕಂಪನಿಗೆ ಸಾವಿರಾರು ಕೋಟಿಗಟ್ಟಲೆ ಲಾಭವಾಗಿದೆ ಆದಕಾರಣ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೈತರಿಗೆ ಹೀಗೆ ಮೋಸ ಮಾಡುತ್ತಾ ಹೋದರೆ ಮುಂದೆ ಒಂದು ದಿನ ತಿನ್ನಲು ಅನ್ನವಿಲ್ಲದಂತಾಗುತ್ತದೆ. ರೈತ ದುಡಿಯೋದನ್ನೇ ನಿಲ್ಲಿಸಿ ಬಿಡುತ್ತಾನೆ. ಆದ ಕಾರಣ ಹಿಂದೆ ಹಾವೇರಿ ಜಿಲ್ಲೆಯಲ್ಲಿ ಸಿಎಂ ಉದಾಸಿ ಅವರ ಕಾಲದಲ್ಲಿ ನೂರಕ್ಕೆ ನೂರರಷ್ಟು ಬೆಳೆ ವಿಮೆ ಬರುತ್ತಿತ್ತು ರಾಜ್ಯದಲ್ಲಿಯೇ ಹಾವೇರಿ ಜಿಲ್ಲೆಗೆ ಹೆಚ್ಚು ಬೆಳೆ ವಿಮೆ ಬಂದ ಉದಾರಣೆಗಳಿವೆ ಇವಾಗ ಯಾಕೆ ಬರುತ್ತಿಲ್ಲ ಎಂಬುದು ರೈತರ ಪ್ರಶ್ನೆ. ಜಿಲ್ಲೆ ಎಲ್ಲ ಜನಪ್ರತಿನಿಧಿಗಳು ಪಕ್ಷಭೇದ ಮರೆತು ರೈತರಿಗೆ ಬೆಳೆವಿಮೆ ಪರಿಹಾರ ಕೊಡಿಸಬೇಕೆಂದು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ