ಯುವತಿ ಜೊತೆ ಕಾಂಗ್ರೆಸ್ ಮುಖಂಡನ ಲವ್ವಿಡವ್ವಿ…ಮದುವೆ ನಾಟಕ…ವಿಷ ನೀಡಿ ಕೊಲೆಯತ್ನ…ಸಿದ್ದರಾಮಯ್ಯ,ಯತೀಂದ್ರ ಪರಮಾಪ್ತನ ಕರ್ಮಕಾಂಡ…
ವೀರಮಾರ್ಗ ನ್ಯೂಸ್ : ಟಿ.ನರಸೀಪುರ,,,ಯುವತಿ ಜೊತೆ ಪ್ರೀತಿಸಿದಂತೆ ನಾಟಕವಾಡಿ ದೈಹಿಕ ಸಂಬಂಧ ಬೆಳೆಸಿ ಮತ್ತೋರ್ವಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ವಂಚಿಸಿದ್ದಲ್ಲದೆ ವಿಷಸೇವನೆ ಮಾಡಿಸಿ ಕೊಲೆಗೆ ಯತ್ನಿಸಿದ ಟಿ.ನರಸೀಪುರ ಮಾಜಿ ನಗರಸಭಾಧ್ಯಕ್ಷ ಹಾಗೂ ಹಾಲಿ ಕೌನ್ಸಿಲರ್ ಮದನ್ ರಾಜ್ ವಿರುದ್ದ ಪ್ರಕರಣ ದಾಖಲಾಗಿದೆ.ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ಮದನ್ ರಾಜ್ ಎಸ್ಕೇಪ್ ಆಗಿದ್ದಾನೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಜೊತೆ ನಿಕಟ ಸಂಪರ್ಕ ಹೊಂದಿರುವ ಮದನ್ ರಾಜ್ ಕಾಂಗ್ರೆಸ್ ಮುಖಂಡೆಯೊಬ್ಬರ ಪುತ್ರಿ ಜೊತೆ ಪ್ರೇಮ ಪ್ರೀತಿ ನಾಟಕವಾಡಿದ್ದಾನೆ.ಯುವತಿ ಸರ್ಕಾರಿ ಹುದ್ದೆಯಲ್ಲಿದ್ದು ತೊನ್ನಿನ ಚರ್ಮ ರೋಗ ಇದೆ.ಹೀಗಿದ್ದು ಮದುವೆ ಆಗುವ ನಾಟಕವಾಡಿ ದೈಹಿಕ ಸಂಬಂಧ ಬೆಳೆಸಿದ್ದಾನೆ.
ಮದುವೆಗೆ ಮನೆಯವರ ವಿರೋಧವಿದೆ ಇಬ್ಬರೂ ಆತ್ಮಹತ್ಯೆ ನಾಟಕವಾಡಿದರೆ ಒಪ್ಪಿಕೊಳ್ಳುತ್ತಾರೆ ಎಂದು ಪುಸಲಾಯಿಸಿ ವಿಷ ಸೇವನೆಗೆ ಪ್ರೇರೇಪಣೆ ಮಾಡಿದ್ದಾನೆ.ನಂತರ ಮದನ್ ರಾಜ್ ಬಣ್ಣ ಬಯಲಾಗಿದೆ.ಇದಾದ ಕೆಲವೇ ದಿನಗಳಲ್ಲಿ ಮಹಿಳಾ ಅಧಿಕಾರಿಯೊಬ್ಬರ ಜೊತೆ ಮದನ್ ರಾಜ್ ಗೆ ನಿಶ್ಚಿತಾರ್ಥವಾಗಿದೆ.
ಈ ವಿಚಾರ ಗೊತ್ತಾದ ನಂತರ ತಾನು ಮೋಸ ಹೋಗಿರುವುದಾಗಿ ಖಚಿತಪಡಿಸಿಕೊಂಡ ಯುವತಿ ಮದನ್ ರಾಜ್ ವಿರುದ್ದ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.ಇಬ್ಬರೂ ಐನಾತಿ ಮದನ್ ರಾಜ್ ಜೊತೆ ವಸತಿಗೃಹದಲ್ಲಿ ಸಲುಗೆಯಿಂದ ಇದ್ದ ಸನ್ನಿವೇಶಗಳನ್ನ ಯುವತಿ ತನ್ನ ಮೊಬೈಲ್ ನಲ್ಲಿ ದಾಖಲಿಸಿಕೊಂಡಿದ್ದಾಳೆ.
ವಂಚಿಸಲು ಹುನ್ನಾರ ನಡೆಸಿದ ಮದನ್ ರಾಜ್ ತನ್ನ ಪ್ರೇಯಸಿಯ ಮೊಬೈಲ್ ನ ಸ್ನೇಹಿತರ ನೆರವಿನಿಂದ ಕಸಿದುಕೊಂಡಿದ್ದಾನೆ.ಮದನ್ ರಾಜ್ ಸಂಚು ಅರಿತ ಪ್ರೇಯಸಿ ಇದೀಗ ಟಿ.ನರಸೀಪುರ ಪೊಲೀಸರ ಮೊರೆಹೋಗಿ ವಂಚನೆ ಪ್ರಕರಣ ದಾಖಲಿಸಿದ್ದಾಳೆ.ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡನಾಗಿ ಮುಖ್ಯಮಂತ್ರ ಸಿದ್ದರಾಮಯ್ಯ,ಯತೀಂದ್ರ ಸಿದ್ದರಾಮಯ್ಯ ಜೊತೆ ಫೋಟೋಗಳನ್ನ ಕ್ಲಿಕ್ಕಿಸಿಕೊಂಡಿರುವ ಮದನ್ ರಾಜ್ ಬಣ್ಣ ಬಯಲಾಗಿದೆ…