ವೀರಮಾರ್ಗ ನ್ಯೂಸ್ : ನುಡಿ ನಮನ ಹೆಚ್ ಎಸ್ ವಿ.

ಪದನಿಧಿಯು ತಿರುಪತಿಯು ಪಂಚಭೂತದಿ ಕರಗಿ
ಮರೆಯಾಯ್ತು ಮಾಣಿಕ್ಯ ದೃಶ್ಯದಿಂದ
ಬೃಹದಾಲ ಬರವಣಿಗೆ ಎದುರುಗೊಂಡು ||ಪ||
ಇರದುದಕೆ ಕೈಯಿಡದೆ ಇರುವಷ್ಟೇ ಬದುಕಿದರು
ಕೃತಿಬಿಟ್ಟು ಹೊರಟವರು ವೆಂಕಟೇಶ
ಕೃಷ್ಣರಾಧೆಯರೊಲುಮೆ ಬರೆಸಿದವನವ ಜುಲುಮೆ
ಭಾವಗಳ ಪದಹೊಸೆದ ಶ್ರೀಕವೀಶ 1
ಗಂಭೀರ ಅಂಬುಧಿಯ ದಡಮುಟ್ಟಿ ಹೋದವರು
ನೀವೊಂದು ಸಾಗರವು ಸಾಹಿತ್ಯದಲ್ಲಿ
ಅಗಾಧ ಪ್ರಘಾತಗಳ ಗಣಿಯಿಂದ ಸಂಸ್ಕರಿಸಿ
ಪುಟವಿಟ್ಟ ಅಪ್ಪಟವು ಬರಹದಲ್ಲಿ 2
ಅಂತರಾಳವ ಅರಿತು ನಾಡಿಮಿಡಿತದಿ ಬೆರೆತು
ಲೇಖನಿಯ ಬದಿಗಿಟ್ಟು ಸಾಗಿ ಮುಂದೆ
ಹಾಡುತಿರೊ ಕಂಠದಲಿ ನಿಮ್ಮೆದುಳು ಜೀವಂತ
ಹಾಡಿನಲಿ ಹುಟ್ಟುವಿರಿ ಹಾಡಿದಂದೆ 3

ಮುಂದೆ ಹೋದಿರಿ ನಡೆದು ಹೆದ್ದಾರಿ ತೆರೆಯುತ್ತ
ನಂದಾ ದೀಪವ ಹಚ್ಚಿ ಅಮವಾಸ್ಯೆಗೆ
ಮಾಧವರ ರುಕ್ಮಿಣಿಯ ಬೃಂದಾವನ ರಾಧೆ
ಗೋಕುಲದ ಗೋವುಗಳು ಪಿಳ್ಳಂಗೋವಿಗೆ 4
ಬಾರದೂರಿಗೆ ಪಯಣ ಸೂರ್ಯಸ್ತ್ರ ಕೊನೆನಮನ
ಅವತರಿಸಿ ಹಚ್ಚಿಟ್ಟು ಹೊಸ ಹಣತೆಯ
ಎಲ್ಲರೆದೆ ಕೋಗಿಲೆಯ ಎಚ್ಚರಿಸಿ ಕೂರಿಸುತ
ಮಾಮರವು ನೀ ಗುರುವು ಒಸಗೊರತೆಯ 5
ಬರಹ : ಜೀವರಾಜ ಹ ಛತ್ರದ.