ಯರಗಟ್ಟಿ – ಹಾಕಿದ್ದ ವಾರದಲ್ಲೇ ಹಾರಿಹೊಯ್ತು ಶಾಲೆ ಮೇಲ್ಟಾವಣಿ ; ಮಕ್ಕಳು ಬಚಾವ್‌

ವೀರಮಾರ್ಗ ನ್ಯೂಸ್ : ಬೆಳಗಾವಿ : ಕೇವಲ ಹದಿನೈದು ದಿನಗಳ ಹಿಂದೆ ಶಾಲೆಯ ಮೇಲ್ಟಾವಣಿಗೆ ಅಳವಡಿಸಿದ್ದ ತಗಡಿನ ಶೀಟುಗಳು ನೆಲಕ್ಕೆ ಉರುಳಿದ್ದು ಕಳಪೆ ಕಾಮಗಾರಿ ಆರೋಪ ಕೇಳಿಬಂದಿದೆ.

ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಬೂದಿಗೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾದರಿ ಶಾಲೆಗೆ ಫೆ. 25 ರಂದು ಶೀಟ್ ಅಳವಡಿಸಲಾಗಿತ್ತು. ಕಳಪೆ ಕಾಮಗಾರಿ ಹಿನ್ನಲೆಯಲ್ಲಿ ಅಳವಡಿಕೆ ಮಾಡುದ್ದ ಶೀಟ್ ನೆಲಕ್ಕೆ ಉರುಳಿದೆ.

ಘಟನೆ ನಡೆದ ಸಂದರ್ಭದಲ್ಲಿ ಅದೃಷವಶಾತ್ ಮಕ್ಕಳು ಇರಲಿಲ್ಲ. ಒಂದುವೇಳೆ ಶಾಲೆ ಮಕ್ಕಳು ಇದ್ದಿದ್ದರೆ ದೊಡ್ಡ ದುರಂತವೇ ನಡೆದುಹೋಗುತ್ತಿತ್ತು.

Leave a Reply

Your email address will not be published. Required fields are marked *