ವೀರಮಾರ್ಗ ನ್ಯೂಸ್ : ಬೆಂಗಳೂರು : ಝೀ ವಾಹಿನಿಯ ಕಾಮಿಡಿ ಕಿಲಾಡಿ ಸೀಸನ್-3ರ ವಿಜೇತ, ಪ್ರತಿಭಾನ್ವಿತ ಕಲಾವಿದ ರಾಕೇಶ್ ಪೂಜಾರಿ ಅವರು ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದೆ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು.
ಚಿಕಿತ್ಸೆ ಫಲಕಾರಿ ಆಗದೆ ಸಾವಣಪ್ಪಿದ್ದಾರೆ. ತುಳು ನಾಟಕದ ಮೂಲಕ ರಂಗಭೂಮಿಗೆ ಬಂದಿದ್ದ ರಾಕೇಶ್ ಅವರು ತಮ್ಮ ನಟನೆ ಮೂಲಕ ನಾಡಿನಾದ್ಯಂತ ಅಭಿಮಾನಿ ಬಳಗ ಹೊಂದಿದ್ದರು.

ಕಳೆದ ಮೇ. 11 ರಂದು ಆಪ್ತರ ಮದುವೆಯ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಕೇಶ್, ಎಂದಿನಂತೆ ತಮ್ಮ ಉತ್ಸಾಹದಿಂದ ಡ್ಯಾನ್ಸ್ ಮಾಡಿ, ಎಲ್ಲರ ಜೊತೆ ಸಂತೋಷದ ಕ್ಷಣಗಳನ್ನು ಕಳೆದಿದ್ದರು.
ಆದರೆ, ಕಾರ್ಯಕ್ರಮದ ಬಳಿಕ ರಾಕೇಶ್ ಅವರಿಗೆ ಆಕಸ್ಮಿಕವಾಗಿ ರಕ್ತದೊತ್ತಡ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು ಎಂದುವೈದ್ಯರು ದೃಢಪಡಿಸಿದ್ದಾರೆ. ರಾಕೇಶ್ ಪೂಜಾರಿ ಅವರು ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆಮಾತಾಗಿದ್ದರು. ಕಾರ್ಯಕ್ರಮದ ಸೀಸನ್-3ರಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ವಿಜೇತರಾಗಿ ಹೊರಹೊಮ್ಮಿದ್ದ ರಾಕೇಶ್, ಕಿರುತೆರೆಯ ಜೊತೆಗೆ ತುಳು ರಂಗಭೂಮಿಯಲ್ಲೂ ತಮ್ಮದೇ ಛಾಪು ಮೂಡಿಸಿದ್ದರು.
