ಎಬಿವಿಪಿ, ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು, ಖಾಸಗಿ ಆಸ್ಪತ್ರೆ ನರ್ಸ್ ಪ್ರತಿಭಟನೆ
ವೀರಮಾರ್ಗ ನ್ಯೂಸ್ : ರಾಣೇಬೆನ್ನೂರು : ಲವ್ ಜಿಹಾದ್ ಕಾರಣಕ್ಕಾಗಿ ರಟ್ಟೀಹಳ್ಳಿ ತಾಲ್ಲೂಕಿನ ಮಾಸೂರ ಗ್ರಾಮದ ಸ್ವಾತಿ ರಮೇಶ ಬ್ಯಾಡಗಿ ಹತ್ಯೆಯನ್ನು ಖಂಡಿಸಿ, ಸೋಮವಾರ ಎಬಿವಿಪಿ ವಿದ್ಯಾರ್ಥಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು ಮತ್ತು ಖಾಸಗಿ ಆಸ್ಪತ್ರೆಯ ನರ್ಸ್ ಸಿಬ್ಬಂದಿ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು.
ನಂತರ ತಹಶೀಲ್ದಾರ್ ಅರುಣಕುಮಾರ ಕಾರಗಿ ಅವರಿಗೆ ಮನವಿ ಸಲ್ಲಿಸಿದರು. ನಗರದ ಖನ್ನೂರ ನರ್ಸಿಂಗ್ ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನಗರದ ಬಸ್ ನಿಲ್ದಾಣದ ಎದುರಿಗೆ ನಂತರ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ, ಆರೋಪಿಗಳ ಪ್ರತಿಕೃತಿ ದಹನ ಮಾಡಿದರು.
ಅಭಾವಿಪ ಧಾರವಾಡ ವಿಭಾಗ ಸಂಘಟನಾ ಕಾರ್ಯದರ್ಶಿ ಮಣಿಕಂಠ ಕಳಸ ಮಾತನಾಡಿ, “ಸ್ವಾತಿಯನ್ನು ಮಾಸೂರಿನ ಮುಸ್ಲಿಂ ಯುವಕ ನಯಾಜ್ ಪ್ರೀತಿಸಿ ಮದುವೆಯಾಗಿ ನಂಬಿಸಿ, ಈಚೆಗೆ ಬೇರೊಂದು ಹುಡುಗಿಯೊಂದಿಗೆ ಮದುವೆ ನಿಶ್ಚಯವನ್ನು ಮಾಡಿಕೊಂಡಿದ್ದ. ಇದರ ನಡುವೆ ಯುವತಿಯು ಕಾಣೆಯಾಗಿ ೭
ದಿನಗಳ ನಂತರ ಶವ ಪತ್ತೆ ಆಗಿದ್ದಾಳೆ. ಪೊಲೀಸ್ ಇಲಾಖೆಯವರು ಪೋಷಕರಿಗೆ ತಿಳಿಸದೇ ಅಂತ್ಯಕ್ರಿಯೆ ನಡೆಸಿದ್ದಾರೆ. ಇದೀಗ ನಯಾಜ್ ಕೊಲೆ ಮಾಡಿರುವ ಶಂಕೆಯಲ್ಲಿ ಪೊಲೀಸರು ಬಂಧಿಸಿದ್ದಾರೆ’ ಎಂದರು.

ಈ ಕೊಲೆಯ ಸುತ್ತ ಲವ್ ಜಿಹಾದ್ ಪ್ರಯತ್ನ ಎದ್ದು ತೋರುತ್ತಿದ್ದೂ ತನಿಖೆಯಲ್ಲೂ ಪೊಲೀಸರು ಹಲವಾರು ರೀತಿಯ ಲೋಪವನ್ನು ಎಸಗುತ್ತಿರುವುದು, ತಾರಾತುರಿಯಲ್ಲಿ ಶವ ಯಾರ ದೇಹವೆಂದು ಸರಿಯಾಗಿ ಗುರುತಿಸುವ ಮುನ್ನವೇ ಅಂತ್ಯಕ್ರಿಯೆ ನಡೆದಿರುವುದು ಬಹಳಷ್ಟು ಅನುಮಾನಕ್ಕೆ ಕಾರಣವಾಗಿದೆ’ ಎಂದು ಆರೋಪಿಸಿದರು.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ನೇಹಾ ಹಿರೇಮಠ ಹತ್ಯೆ ಮಾಸುವ ಮುನ್ನವೇ ಮತ್ತೊಂದು ಯುವತಿ ಲವ್ ಜಿಹಾದ್‌ಗೆ ಬಲಿಯಾಗಿದ್ದಾಳೆ.
ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಸೂಕ್ತ ತನಿಖೆಯನ್ನು ನಡೆಸಬೇಕು. ಈ ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಸರ್ಕಾರ ಮಾಡಕೂಡದು ಸ್ವಾತಿ ಬ್ಯಾಡಗಿ ಹತ್ಯೆಗೆ ನ್ಯಾಯವನ್ನು ದೊರಕಿಸಿ ಕೊಡಬೇಕು. ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿದರು.
ರಾಜ್ಯ ಸಹಕಾರ್ಯದರ್ಶಿ ಅಭಿಷೇಕ್ ದೊಡ್ಡಮನಿ, ರಾಜ್ಯ ಕಾರ್ಯಕಾರಣಿ ಸದಸ್ಯ ಅಭಿಲಾಷ ಬಾದಾಮಿ, ನಗರ ಕಾರ್ಯದರ್ಶಿ ಪವನ ಇಟಗಿ, ಯಲ್ಲಮ್ಮ ಆರ್ .ಎಂ. ಸಂಚಾಲಕ ನವೀನ ಜಿ ಕೆ, ವಿಜಯಲಕ್ಷ್ಮೀ ಪರಸಪ್ಪನವರ ನಾಗರಾಜ್
ಪುರವಂತಿಗೌಡ್ರ, ಮಾರುತಿ ಕಲಾಲ, ಶೃತಿ ಎಂ, ಮೈತ್ರಾ ಹದಡಿ, ಸಂಜೀವ ನೀರಲಗಿ ಸೇರಿದಂತೆ ವಿವಿಧ ಶಾಲಾ ಕಾಲೇಜು ಮತ್ತು ಖಾಸಗಿ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.