
ಕಾಲಡಿಯಲ್ಲಿನ ಮಣ್ಣುಲೋಕದಲ್ಲಿ ವಿಸ್ಮಯಗೊಳಿಸುವ ಮಹಾನುಜೀವಿಗಳು
ವೀರಮಾರ್ಗ ನ್ಯೂಸ್ : AGRICULTURE ನಮ್ಮ ಕಾಲಡಿಯಲ್ಲಿನ ಮಣ್ಣುಲೋಕದಲ್ಲಿ ವಿಸ್ಮಯಗೊಳಿಸುವ ಮಹಾನುಜೀವಿಗಳು ಮಣ್ಣು ಮೇಲಣ ಜೀವಜಗತ್ತಿನ ಬದುಕು ಮೊದಲಿನಿಂದಲೂ ಅವಲಂಬಿಸಿರುವುದು ಒಂದು ಶಕ್ತಿಯ ಮೇಲೆ. ಆ ಶಕ್ತಿಯೇ ಸಜೀವಿ ಮಣ್ಣು. ಅಂದರೆ ವಿವಿಧ ಬಗೆಯ ಕೋಟ್ಯಾಂತರ ಜೀವಿಗಳಿರುವ ಮಣ್ಣು. ಈ ಜೀವಿಗಳು ಮಣ್ಣಲ್ಲಿರುವುದರಿಂದಲೇ, ಮಣ್ಣಿಗೊಂದು ಬೆಲೆ. ಸಜೀವಿ ಮಣ್ಣೊಂದಿಗೆ, ಅಂದರೆ ಮಣ್ಣಲ್ಲಿರುವ ಜೀವಿಗಳ ಜೊತೆ ಸೌಹಾರ್ದತೆಯಿಂದ ಇರುವವರು ಕಣ್ಣಳತೆಯಲ್ಲೇ ತಮ್ಮ ಮಣ್ಣಲ್ಲಿನ ತಾಕತ್ತು ಏನೆಂಬುದನ್ನು ಕಂಡುಕೊಳ್ಳುತ್ತಾರೆ. ಅದಕ್ಕಾಗಿ ಅವರು ಮಾಡುವುದಿಷ್ಟೆ. ಮಣ್ಣನ್ನು ಮುಷ್ಟಿಯಲ್ಲಿ ಹಿಡಿದು ಪರೀಕ್ಷಿಸುವುದು, ಮಣ್ಣಿನ…