ಗೋಸಾವಿ ಸಮಾಜದ ಮಹಿಳೆಯರು ಯುವಕರು ಸ್ವಯಂ ಪ್ರೇರಣೆಯಿಂದ ಚರಂಡಿಗಳ ಸ್ವಚ್ಛತೆ
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಪಟ್ಟಣದ ೧೫ನೇ ವಾರ್ಡಿನ ಗೋಸಾವಿ ಸಮಾಜದ ಮಹಿಳೆಯರು ಯುವಕರು ಸ್ವತಹ ಚರಂಡಿ ಸ್ವಚ್ಛತೆಗೆ ಮುಂದಾದ ಘಟನೆ ಜರುಗಿತು.
ಕಳೆದ ೬೦ವರ್ಷದಿಂದ ಪಟ್ಟಣದ ಮದ್ಯಬಾಗದಲ್ಲಿ ವಾಸಿಸುತ್ತಿರುವ ಗೋಸಾವಿ ಸಮಾಜದ ೩೦ಕುಟುಂಬಗಳು ೧೫೦ಜನ ಇರೋ ಪ್ರದೇಶಕ್ಕೆ ಕನಿಷ್ಠ ಪಕ್ಷ ಒಂದು ಶೌಚಾಲಯ ವಿಲ್ಲ, ೧೫೦ಜನಕ್ಕೆ ಕೇವಲ ಒಂದೆ ನಳ, ಬೆಳಿಗ್ಗೆ ಜನ ಏಳೋದಕ್ಕೆ ಮುಂಚೆನೆ ಪಕ್ಕದಲ್ಲಿ ಇರುವ ಚರಂಡಿಯಲ್ಲಿ ಬಯಲು ಶೌಚಾಲಯ ಇಷ್ಟೇಲ್ಲ ಸಮಸ್ಯೆ ಸುಳಿಯಲ್ಲಿ ಇದ್ದರು ವಾರ್ಡಿನ ಸದಸ್ಯ ಸಮಸ್ಯೆಯನ್ನು ಆಲಿಸಿಲ್ಲ ಎಂದು ನಿವಾಸಿ ಗಳು ಆಕ್ರೋಶ ವ್ಯಕ್ತ ಪಡಿಸಿದರು,
ವಾರ್ಡಿನ ಸದಸ್ಯ ಹಾಗೂ ಪುರಸಭೆ ಅಧಿಕಾರಿಗಳಿಗೆ ಛೀಮಾರಿ ಹಾಕಿದ ಇಲ್ಲಿನ ನಿವಾಸಿಗಳು ಚರಂಡಿ ಅವ್ಯವಸ್ಥೆ ಹಾಗೂ ತ್ಯಾಜ್ಯದಿಂದ ಗಬ್ಬುನಾರುತ್ತಿದ್ದ ತಮ್ಮ ಕಾಲನಿಯನ್ನು ತಾವೇ ಸ್ವಚ್ಛಗೊಳಿಸಿದರು,
ಅನುದಾನ ಇಲ್ಲ. ಹಣ ಬಂದ ನಂತರ ಸಮಸ್ಯೆ ನಿವಾರಣೆ ಮಾಡಲಾಗುವುದು ಎಂದು ಇಲ್ಲಿನ ಅಧಿಕಾರಿಗಳು ಸಬೂಬು ಹೇಳುವುದು ಸಾಮಾನ್ಯವಾಗಿದೆ ಎಂದು ನಿವಾಸಿಗಳು ದೂರುತ್ತಾರೆ.
ಬಾಕ್ಸ್ ಮಾಡಿ
ಒಂದೊಂದು ರೂಪಾಯಿ ಕೂಡಿಸಿ ಭಿಕ್ಷೆಬೇಡಿ ಹಣ ಸಂಗ್ರಹಿಸಿ ಗಟಾರ್ ಶೌಚಾಲಯ ನಿರ್ಮಿಸಕೊಳ್ಳುತ್ತೇವೆ ಅದಕ್ಕೆ ಪುರಸಭೆ ಅನುಮತಿ ಕೊಡಲಿ, ನಮ್ಮ ಕಷ್ಟ ಕೇಳೋರಿಲ್ಲ ಎಂದು ನಿವಾಸಿ ಬಿಲಾಬಾಯಿ ಗೋಸಾವಿ ಅಳುತ್ತ ತಮ್ಮ ಆಕ್ರೋಶ ಅಳಲನ್ನು ತೋಡಿ ಕೊಂಡಳು,
ಬಾಕ್ಸ್ ಮಾಡಿ
ಪುರಸಭೆ ಅಧಿಕಾರಿಗಳಿಗೆ ವಾರ್ಡಿನ ಸದಸ್ಯನಿಗೆ ಕಳೆದ ೧೫ವರ್ಷದಿಂದ ಮನವಿ ಕೊಡುತ್ತ ಬಂದರು ಕ್ಯಾರೆ ಅಂದಿಲ್ಲ ಪುರಸಭೆಯಿಂದ ಶೌಚಾಲಯ ಬಂದರು ಕಟ್ಟಿಸಿ ಕೊಟ್ಟಿಲ್ಲ, ನಿವೇಶನ ಕೊಡಲು ಹಿಂದೇಟು ಹಾಕುತ್ತಿದ್ದಾರೆ ನಿವೇಶನಕ್ಕೆ ನಮ್ಮಿಂದ ಹಣತೆಗೆದುಕೊಂಡಿದ್ದಾರೆ, ಅದರ ಬಗ್ಗೆ ದಾಖಲೆ ಇವೆ ಎಂದು ಸ್ಥಳೀಯ ನಿವಾಸಿ ಹರೀಶಗೋಸಾವಿ ಆರೋಪಿಸಿದರು.
ಈ ಕುರಿತು ಮುಖ್ಯಾಧಿಕಾರಿ ಮಹೇಶ ಹಡಪದ ಅವರನ್ನು ಸಂಪರ್ಕಿಸಲಾಗಿ, ಗೋಸಾವಿ ಸಮಾಜವರು ಚರಂಡಿ ನಿರ್ಮಾಣಕ್ಕೆ ಕೊಟ್ಟ ಮನವಿಯನ್ವಯ ಸ್ಥಳ ಪರಿಶೀಲಿಸಿ ಚರಂಡಿ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಿದ್ದಪಡಿಸಿದ್ದು ಅನುದಾನದ ಲಭ್ಯತೆಯನ್ವಯ ಚರಂಡಿ ನಿರ್ಮಿಸಲಾಗುವುದು. ಪೌರ ಕಾರ್ಮಿಕರ ಕೊರತೆಯಿಂದ ಸ್ವಚ್ಚತೆ ವಿಳಂಭವಾಗಿದೆ.. ಸ್ವಚ್ಛತೆ ಮತ್ತು ಬೇಡಿಕೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಾಳಪ್ಪ ಗೋಸಾವಿ, ರಾಮ ಗೋಸಾವಿ, ನಿಖಿಲ ಗೋಸಾವಿ, ಶಿವರಾಜ ಗೋಸಾವಿ ಗೋವಿಂದ ಗೋಸಾವಿ, ಬೇಬಿ ಗೋಸಾವಿ, ಜ್ಯೋತಿ ಗೋಸಾವಿ ಸೇರಿದಂತೆ ನಿವಾಸಿಗಳು ಇದ್ದರು.
ಗೋಸಾವಿ ಸಮಾಜದ ಮಹಿಳೆಯರು ಯುವಕರು ಸ್ವಯಂ ಪ್ರೇರಣೆಯಿಂದ ಚರಂಡಿಗಳ ಸ್ವಚ್ಛತೆ
