ಇಂದು ವೀರಕೇಸರಿ ಸೇವಾ ಸಮಿತಿಯಿಂದ ರಾಮನವಮಿ, ಹನುಮ ಜಯಂತಿ
ವೀರಮಾರ್ಗ ನ್ಯೂಸ್ ಶಿಗ್ಗಾವಿ: ಪಟ್ಟಣದ ವೀರಕೇಶರಿ ಸೇವಾ ಸಮಿತಿ ಆಶ್ರಯದಲ್ಲಿ ೧೩ ನೇ ವರ್ಷದ ಶ್ರೀ ರಾಮನವಮಿ ಹಾಗು ಹನುಮಜಯಂತಿ ಅಂಗವಾಗಿ ಏ.೧೨ ಶನಿವಾರ ಪ್ರಾಥ:ಕಾಲ ಶ್ರೀ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಮಧ್ಯಾಹ್ನ ಅನ್ನಪ್ರಸಾದ ಸೇವೆ ನಡೆಯಲಿದೆ. ಏ.೧೩ ರವಿವಾರ ಸಂಜೆ ೪ ಗಂಟೆಗೆ ಹನುಮಜಯಂತಿ ನಿಮಿತ್ಯ ಶ್ರೀ ರಾಮನ ನೂತನ ಮೂರ್ತಿಯ ಮೇರವಣಿಗೆಗೆ ಶಾಸಕ ಯಾಸೀರಹಮ್ಮದ ಖಾನ ಪಠಾಣ, ಗಂಜೀಗಟ್ಟಿ ಶ್ರೀ ವೈಜನಾಥ ಶಿವಲಿಂಗ ಶಿವಾಚಾರ್ಯರು ಶಿಗ್ಗಾವಿ ವೀರಕ್ತಮಠದ ಶ್ರೀ ಸಂಗನಬಸವ ಸ್ವಾಮಿಗಳು ಚಾಲನೆ ನೀಡುವರು. ಮೇರವಣಿಗೆ ಶ್ರೀ ನೇರದೃಷ್ಠಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಸಕಲ ವಾಧ್ಯ ವೈಭವಗಳೋಂದಿಗೆ ಪ್ರಾರಂಭಗೋಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕಾರ್ ಸ್ಟ್ಯಾಂಡ ಹತ್ತಿರವಿರುವ ಶ್ರೀ ಆಂಜನೇಯ ದೇವಸ್ಥಾನಕ್ಕೆ ತಲುಪಿ ಸಮಾರೋಪ ಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇಂದು ವೀರಕೇಸರಿ ಸೇವಾ ಸಮಿತಿಯಿಂದ ರಾಮನವಮಿ, ಹನುಮ ಜಯಂತಿ
