ಕ್ಷತ್ರಿಯ,ಸಂಸ್ಕೃತಿ&ಸ್ವಾವಲಂಬನೆಯ ಮೂಲಕ ಅಭಿವೃದ್ಧಿಗೆ ನೀಡುತ್ತಿದೆ’
ದಾವಣಗೆರೆ : ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಎಸ್.ಎಸ್.ಕೆ) ಸಮಾಜವು ರಾಜ್ಯದ 175 ತಾಲೂಕುಗಳಲ್ಲಿ ವ್ಯಾಪಿಸಿದ್ದು, ಸಂಸ್ಕೃತಿ ಮತ್ತು ಸ್ವಾವಲಂಬನೆಯ ಮೂಲಕ ನಾಡಿನ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ’ ಎಂದು ಸಮಾಜದ ರಾಜ್ಯಾಧ್ಯಕ್ಷ ಡಾ||.ಶಶಿಕುಮಾರ್ ಮೆಹರ್ವಾಡೆ ಹೇಳಿದರು. ಮಂಗಳವಾರ ನಗರದ ಶಂಕರ್ ವಿಹಾರ ಬಡಾವಣೆಯಲ್ಲಿರುವ ಶ್ರೀ ಅಂಬಾಭವಾನಿ ದೇವಸ್ಥಾನ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. “ನಮ್ಮ ಸಮಾಜದ ಜನ ಸ್ವಾಭಿಮಾನಿಗಳು ಮತ್ತು ಹೆಚ್ಚು ಸ್ವಯಂ ಉದ್ಯೋಗಿಗಳು. ದಾವಣಗೆರೆಯಂತಹ ನಗರಗಳಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದರೂ,…