ಮಹಾರಥೋತ್ಸವಕ್ಕೆ ಶ್ರೀ ಶಂಭುಲಿಂಗ ಶಿವಾಚಾರ್ಯರಿಂದ ಚಾಲನೆ

ಮಹಾರಥೋತ್ಸವಕ್ಕೆ ಶ್ರೀ ಶಂಭುಲಿಂಗ ಶಿವಾಚಾರ್ಯರಿಂದ ಚಾಲನೆ
ವೀರಮಾರ್ಗ ನ್ಯೂಸ್
ಶಿಗ್ಗಾವಿ : ತಾಲೂಕಿನ ಹೋತನಹಳ್ಳಿ ಗ್ರಾಮದ ಶ್ರೀ ಸಿಂಧಗಿ ಲಿಂ.ಶಾಂತವೀರೇಶ್ವರರ 45ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ, ಲಿಂ.ಶಾಂತವೀರೇಶ್ವರರ ಉತ್ಸವಮೂರ್ತಿ ಮೇರವಣಿಗೆಗೆ ಶ್ರೀ ಮಠದ ಪೀಠಾಧಿಪತಿ ಶ್ರೀ ಶಂಭುಲಿಂಗ ಶಿವಾಚಾರ್ಯರು ಪೂಜೆಸಲ್ಲಿಸುವಮೂಲಕ ಚಾಲನೆ ನೀಡಿದರು.

ರಥೋತ್ಸವ ಭಕ್ತಜನಸಾಗರಮಧ್ಯ ಸಕಲ ವಾಧ್ಯ ವೈಭವಗಳೊಂದಿಗೆ ಶ್ರೀ ಮಠದ ಆವರಣದಿಂದ ಪ್ರಾರಂಭಗೋಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿಬಂದಿತು. ಭಕ್ತಸಮೂಹ ರಥೋತ್ಸವವನ್ನು ಗ್ರಾಮದತುಂಬೇಲ್ಲಾ ತಳಿರು, ತೋರಣ ಕಟ್ಟಿ, ಬಣ್ಣ, ಬಣ್ಣದ ರಂಗೋಲಿ ಹಾಕಿ ಭಕ್ತಿಯಿಂದ ಬರಮಾಡಿಕೊಂಡು, ತೇರಿನ ಕಳಸಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿನಮನ ಸಲ್ಲಿಸಿದರು. ರಥೋತ್ಸವ ಗ್ರಾಮದ ಮುಖ್ಯ ಬೀದಿಗಳಲ್ಲಿ ಸಾಗಿ ಪುನ: ಶ್ರೀ ಮಠದ ಆವರಣಕ್ಕೆ ಬಂದು ತಲುಪಿ ಸಂಫನ್ನಗೋಂಡಿತು.


ವೀರಯ್ಯ ವೆಂಕಟಾಪುರಮಠ, ಸಿದ್ಧನಗೌಡ್ರು ಪಾಟೀಲ, ಶಿವರಾಜ ಮತ್ತಿಕಟ್ಟಿ, ಹನಂತಪ್ಪ ಯು.ವಿ, ಚಂದ್ರಣ್ಣ ಬೆಳವತ್ತಿ, ದ್ಯಾಮಣ್ಣ ಸವಣೂರ, ಚಂದ್ರು ಗೂಳಣ್ಣವರ, ಶಂಕ್ರಪ್ಪ ಬಳ್ಳಾರಿ, ಮಹದೇವಪ್ಪ ಸವಣೂರ, ರಾಜಣ್ಣ ಕುಲಕರ್ಣಿ, ಬಸವರಾಜ ಕೆಮ್ಮಣ್ಣಕೇರಿ, ಮಹಾನಿಂಗಪ್ಪ ಅಕ್ಕಿ ಸೇರಿದಂತೆ ಗ್ರಾಮಸ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *