ಅಂತೂ ಇಂತು BJP ಗೇ ಎಚ್ಚರವಾಗಿದೆ, ದೇಶಕ್ಕೆ ಮಾದರಿ ಮಾಡಲು ನಿಂತಿದೆ..

ಅಂತೂ ಇಂತು BJP ನಿದ್ದೆ ಇಂದ ಎದ್ದು ಭಾರತ ದೇಶಕ್ಕೆ ಮಾದರಿ ಮಾಡಲು ನಿಂತಿದೆ..

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 1 ವರ್ಷಗಳಿಂದ ಭಾರತ ವಿವಿಧ ಕ್ಷೇತ್ರಗಳಲ್ಲಿ ಅಗಾಧವಾದ ಪ್ರಗತಿ ಸಾದಿಸಿದ್ದು, ವಿಶ್ವಕ್ಕೆ ಮಾದರಿಯಾಗಿದೆ. ವಿವಿಧ ವಲಯಗಳ ಅಭಿವೃದ್ಧಿಯಲ್ಲಿ ಭಾರತ ದೇಶ ಸುವರ್ಣಯುಗ ಕಂಡಿದೆ. ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಹೆಮ್ಮೆಯಿಂದ ಹೇಳಿದರು.

ಮಂಡಳಗಳಿಗೆ ನೂತನ ಅಧ್ಯಕ್ಷರ ನೇಮಕ..

1) ರಟ್ಟಿಹಳ್ಳಿ ತಾಲೂಕಿಗೆ ದೇವರಾಜ ನಾಗಣ್ಣನವರ,
2) ಸವಣೂರ ತಾಲೂಕಿಗೆ ಶಿವಪುತ್ರಪ್ಪ ಕಲಕೋಟಿ,
3) ಹಿರೇಕೆರೂರ ತಾಲೂಕಿಗೆ ಸಂಜೀವಯ್ಯ ಕಬ್ಬಿಣಕಂತಿಮಠ,
4) ಬ್ಯಾಡಗಿ ತಾಲೂಕಿಗೆ ನಿಂಗಪ್ಪ ಬಟ್ಟಲಕಟ್ಟಿ,
5) ಶಿಗ್ಗಾವಿ ತಾಲೂಕಿಗೆ ವಿಶ್ವನಾಥ ಹರವಿ,
6) ರಾಣೇಬೆನ್ನೂರ ನಗರ ಮಂಜುನಾಥ ಕಾಟೆ ಹಾಗೂ ರಾಣೇಬೆನ್ನೂರ ಗ್ರಾಮಾಂತರ ಅಧ್ಯಕ್ಷರನ್ನಾಗಿ ಸುಭಾಸ ಶಿರಗೇರಿ ನೇಮಕ ಮಾಡಲಾಗಿದೆ.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 140 ಕೋಟಿ ಭಾರತೀಯರ ಆಶೀರ್ವಾದ ಮತ್ತು ಸಾಮೂಹಿಕ ಭಾಗವಹಿಸುವಿಕೆಯಿಂದ ಭಾರತವು ವೈವಿದ್ಯಮಯ ಕ್ಷೇತ್ರಗಳಲ್ಲಿ ತ್ವರಿತ ಪರಿವರ್ತನೆಗಳಿಗೆ ಸಾಕ್ಷಿಯಾಗಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಐದನೇ ಸ್ಥಾನದಲ್ಲಿದ್ದ ಭಾರತ ಇಂದು ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ. ಭಾರತದ ಬೆಳವಣಿಗೆ ಕಂಡು ಈಡೀ ಜಗತ್ತೇ ನಿಬ್ಬೆರಗಾಗಿ ನೋಡುತ್ತಿದೆ. ಮುಂದಿನ ದಿನಗಳಲ್ಲಿ ವಿಶ್ವಗುರುವಾಗಲಿದ್ದಾರೆ ನಮ್ಮ ಹೆಮ್ಮೆಯ ಪ್ರಧಾನಿ ಎಂದರು.

ಹಾವೇರಿ ಜಿಲ್ಲಾ ಬಿಜೆಪಿ ಸಹ ಚುನಾವಣಾಧಿಕಾರಿ ಎನ್.ಎಂ. ಈಟೇರ ಮಾತನಾಡಿ, ರಾಜ್ಯಾದ್ಯಂತ ಸಂಘಟನಾ ಪರ್ವದ ಭಾಗವಾಗಿ ಪಕ್ಷದ ಸಾಂಸ್ಥಿಕ ಚುನಾವಣೆಗಳಲ್ಲೊಂದಾದ ಮಂಡಲ ಅಧ್ಯಕರ ಚುನಾವಣೆಯನ್ನು ಬಿಜೆಪಿ ಪಕ್ಷದ ಸಂವಿಧಾನದ ಅಡಿಯಲ್ಲಿ ಜರುಗಿಸಲಾಗಿದೆ. ಜಿಲ್ಲೆಯ 10 ಮಂಡಲಗಳ ಪೈಕಿ ಏಳು ಮಂಡಳಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಹಾವೇರಿ ನಗರ, ಹಾವೇರಿ ಗ್ರಾಮಾಂತರ ಹಾಗೂ ಹಾನಗಲ್ಲ ತಾಲೂಕಿನ ಅಧ್ಯಕ್ಷರ ನೇಮಕವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೆಲಗಾರ ಮಾತನಾಡಿದರು. ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಭಾರತಿ ಜಂಬಗಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಕೆ. ಶಿವಲಿಂಗಪ್ಪ, ಮಂಜುನಾಥ ಗಾಣಿಗೇರ, ಗಿರೀಶ ತುಪ್ಪದ, ನಂಜುಂಡೇಶ ಕಳ್ಳೇರ ಸೇರಿದಂತೆ ಇತರರು ಅನೇಕರು ಇದ್ದರು.