ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರ್ ಜೀವನದ ಮುಖ್ಯ ದ್ಯಯವಾಗಿತ್ತು. ಡಾ.ರವೀಂದ್ರ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ತುಳಿತಕ್ಕೋಳಗಾದ ಸಮಾಜದಲ್ಲಿ ಜನಿಸಿ, ಅಡೆ, ತಡೆಗಳನ್ನು ಮೇಟ್ಟಿನಿಂತು ೩೨ ವಿಷಯಗಳಲ್ಲಿ ಪದವಿ ಪಡೆದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಸಲ್ಲುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾ.ರವೀಂದ್ರ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಶ್ರೀ ಫಕ್ಕೀರೇಶ್ವರ ಸಭಾಭವನದಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಆಶ್ರಯದಲ್ಲಿ ನಡೆದ ಅಂಬೇಡ್ಕರ್ ರವರ ೧೩೪ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು, ಅಂಬೇಡ್ಕರ್ ರವರು ಪುಸ್ತಕ ಪ್ರೇಮಿ ಯಾಗಿದ್ದರು. ಅವರ ಬಳಿ ೫೦ ಸಾವಿರ ಪುಸ್ತಕ ಸಂಗ್ರಹವಿತ್ತು. ಪ್ರವಾಸ ಕೈಗೋಳ್ಳುವಾಗ ಅವರು ಬಟ್ಟೆಗೆ ಪ್ರಾಶಸ್ತ್ಯ ನೀಡುವ ಬದಲು, ಪುಸ್ತಕಗಳನ್ನು ಬ್ಯಾಗಿನಲ್ಲಿ ತುಂಬಿಕೊಂಡು ತೆರಳುತ್ತಿದ್ದರು. ಶಿಕ್ಷಣ, ಸಂಘಟನೆ, ಹೋರಾಟ ಅವರ ಜೀವನದ ಮುಖ್ಯ ಗುರಿಗಳಲ್ಲೋಂದಾಗಿತ್ತು ಎಂದು ಹೇಳಿದರು.
ಅಂಬೇಡ್ಕರ್ ರವರ ಬಗ್ಗೆ ಪರಿಪೂರ್ಣ ಅಧ್ಯಯನ ಮಾಡುವ ಅವಸ್ಯಕತೆಯಿದ್ದು, ಬಾಯಿ ಚಪಲಕ್ಕೆ ಇಲ್ಲದನ್ನು ಮಾತನಾಡಿ ಸಮಾಜದಲ್ಲಿ ಗೊಂದಲ ಸೃಷ್ಠಿಸಬಾರದು. ೧೮೯೧ ಏಪ್ರೀಲ್ ೧೪ ರಂದು ದಲಿತ ಸಮೂದಾಯದಲ್ಲಿ ಜನಿದ ಅವರು, ಜಾತಿ ಶ್ರೇಣಿಯನ್ನು ತಿರಸ್ಕರಿಸಲು ೧೯೫೬ ರಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಅವರು, ಸಂವಿಧಾನ ರಚಿಸಿದ ಮುಖ್ಯ ಶಿಲ್ಫಿಯಾಗಿ, ಹಿಂದೂಳಿದ ಸಮೂದಾಯವನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದವರಾಗಿದ್ದರು ಎಂದು ಹೇಳಿದರು.
ಡಾ.ಶಿವಕುಮಾರ ಮೂಲಿಮಠ, ಹನಮಂತ ಹೊಸಮನಿ, ಗಂಗಾಧರ ಮಾ.ಪ.ಶೇಟ್ಟರ, ಸೋಮಶೇಖರ ಗೌರಿಮಠ, ನಾರಾಯಣಸಿಂಘ ಕಲಘಟಗಿ, ಶಿವಾಜಿ ಪುಜಾರ, ಆಂಜನೇಯ ಹೊಸಮನಿ, ಮಂಜುನಾಥ ಸಣ್ಣಪ್ಪನವರ, ಚಂದ್ರು ಕಮಡೊಳ್ಳಿ, ಈರಪ್ಪ ಬಳಿಗಾರ, ಮಂಜುನಾಥ ಗುಡಿಗೇರಿ, ಎಂ.ಎನ್.ಹೊನಕೇರಿ, ಸುರೇಶ ಉಥಳೆಕರ, ರವಿ ನರೇಗಲ್, ಲಲಿತಾ ಹಂಜಗಿ, ಮಂಜುನಾಥ ಕೂಲಿ ಸೇರಿದಂತೆ ಇತರರು ಇದ್ದರು.
ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರ್ ಜೀವನದ ಮುಖ್ಯ ದ್ಯಯವಾಗಿತ್ತು. ಡಾ.ರವೀಂದ್ರ
