ಅಕ್ರಮ ಮರಳು ದಂಧೆಗೆ ಟ್ರಾನ್ಸ್ಪೋರ್ಟ್ ಸಮಿತಿ ಮೌನ..
ಹಾವೇರಿ : ರಾಜ್ಯದಲ್ಲಿ ಬೇಸಿಗೆಕಾಲ ಬಂದರೆ ಸಾಕು ಅತಿ ಹೆಚ್ಚು ಸುದ್ದಿಯಲ್ಲಿರುವುದು ಅಕ್ರಮ ಮರಳು ಗಣಿಗಾರಿಕೆ. ತುಂಗಭದ್ರ & ವರದಾ ನದಿ ತೀರದ ಪಾತ್ರದಲ್ಲಿ ಅಕ್ರಮ ಮರಗಳು ಗಣಿಗಾರಿಕೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಆದರೆ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸರಕಾರ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಮೌನ ವಹಿಸಿರುವುದು ಕೆಲವು ಅನುಮಾನಗಳಿಗೆ ಕಾರಣವಾಗಿದೆ. ರಟ್ಟಿಹಳ್ಳಿ ತಾಲೂಕಿನ ಹಳ್ಳೂರಿನಿಂದ ಹಿಡಿದು ಹಾವೇರಿ ತಾಲೂಕಿನ ಮೇವುಂಡಿ ತೆರೆದಹಳ್ಳಿಯವರಿಗೂ ತುಂಗಭದ್ರಾ…