ಶಿವಯೋಗ ಮಂದಿರವನ್ನು ಸ್ಥಾಪಿಸಿದ ಕೀರ್ತಿ ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ: ಚನ್ನಬಸವಶ್ರೀ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ಸಿಂಧಗಿ ಶಾಂತವೀರ ಮಹಾಸ್ವಾಮಿಗಳು, ಹಾನಗಲ್ ಶ್ರೀ ಗುರು ಕುಮಾರ ಶಿವಯೋಗಿಗಳು ನಾಡಿನಾಧ್ಯಂತ ಸಂಚರಿಸಿ ಧರ್ಮಭೋದನೆ ಮಾಡುವಮೂಲಕ ಭಕ್ತಸಮೂಹವನ್ನು ಧರ್ಮದ ದಾರಿಯಲ್ಲಿ ನಡೆಯುವಂತೆ ಮಾಡಿದ್ದಾರೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಚನ್ನಬಸವ ಮಹಾಸ್ವಾಮಿಗಳು ನುಡಿದರು.ತಾಲೂಕಿನ ಹೋತನಹಳ್ಳಿ ಗ್ರಾಮದ ಸಿಂಧಗಿಮಠದಲ್ಲಿ ನಡೆದ ಲಿಂ.ಶಾಂತವೀರ ಮಹಾಸ್ವಾಮಿಗಳವರ 45ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನುದ್ದೇಸಿಸಿ ಆಶೀರ್ವಚನ ನೀಡಿದ ಶ್ರೀಗಳು, ಮುಲ್ಕಿ ಪರೀಕ್ಷೆಯಲ್ಲಿ ಪೇಲಾದ ಶ್ರೀ ಕುಮಾರ ಶಿವಯೋಗಿಗಳು, ಸಿದ್ಧಾರೂಢರ ಮಠದಲ್ಲಿ ಬೆಳೆದು, ಹಾನಗಲ್ ಮಠದ ಪೀಠಾಧಿಪತಿಗಳಾಗಿ 1904ರಲ್ಲಿ…