ವರ್ಷಾಂತ್ಯಕ್ಕೆ ಶೇ.೧೦೦ರಷ್ಟು ಲೆವಲ್ ಕ್ರಾಸಿಂಗ್ ಗುರಿ

ವರ್ಷಾಂತ್ಯಕ್ಕೆ ಶೇ.೧೦೦ರಷ್ಟು ಲೆವಲ್ ಕ್ರಾಸಿಂಗ್ ಗುರಿ : ೩ ಜಿಲ್ಲೆಗಳಲ್ಲಿ
ವಂದೇಭಾರತ ರೈಲು ಆರಂಭಕ್ಕೆ ಶೀಘ್ರ ಚಾಲನೆ: ಕೇಂದ್ರ ಸಚಿವ ವಿ. ಸೋಮಣ್ಣ ಭರವಸೆ
ವೀರಮಾರ್ಗ ನ್ಯೂಸ್ ಹಾವೇರಿ :
ದೇಶದಲ್ಲಿ ಸದ್ಯ ೧೦೪ ಸ್ಥಳಗಳಿಂದ ವಂದೇಭಾರತ ರೈಲು ಓಡಾಡುತ್ತಿದ್ದು, ಈ ಪೈಕಿ ರಾಜ್ಯದಲ್ಲೇ ನಾಲ್ಕು ಸ್ಮಗಳಿಂದ ಓಡಾಡುತ್ತಿವೆ. ಶೀಘ್ರದಲ್ಲೇ ಹೊಸದಾಗಿ ರಾಜ್ಯದ ಮೂರು ಜಿಲ್ಲೆಗಳಿಂದ ವಂದೇಭಾರತ ರೈಲು ಓಡಾಟಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ರೈಲು ನಿಲ್ದಾಣದಲ್ಲಿ ಶುಕ್ರವಾರ ಧಾರವಾಡ- ಕೆ.ಎಸ್.ಆರ್ ಬೆಂಗಳೂರು ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು ೨೦೨೫ರ ಅಂತ್ಯದೊಳಗೆ ದೇಶದಲ್ಲಿ ನೂರಕ್ಕೆ ನೂರರಷ್ಟು ಲೆವಲ್ ಕ್ರಾಸಿಂಗ್ ಮಾಡುವ ಉದ್ದೇಶ ಹೊಂದಲಾಗಿದೆ. ಅಪಘಾತ ತಡೆಗೆ ಸ್ವದೇಶಿ ನಿರ್ಮಿತ ಕವಚ ಅಳವಡಿಕೆ ಆರಂಭಿಸಲಾಗಿದೆ ಎಂದರು.
ಭಾರತೀಯ ರೈಲ್ವೆ ಈ ದೇಶದ ಅಭಿವೃದ್ಧಿ ಇಂಜಿನ್ ಇದ್ದ ಹಾಗೆ ದೇಶ ಬೆಳೆದಂತೆ ರೈಲ್ವೆ ಬೆಳೆಸಬೇಕಾಗಿದೆ. ೨೦೪೭ರವರೆಗೆ ರಾಷ್ಟ್ರ ವಿಕಸಿತ ಭಾರತ ಆಗಬೇಕು ಎನ್ನುವುದು ಮಾನ್ಯ ಪ್ರಧಾನಮಂತ್ರಿಗಳ ಕನಸಾಗಿದೆ. ಭಾರತದ ಸಾರ್ವಭೌತ್ವದ ಜತೆಗೆ ಉನ್ನತೀಕರಣದತ್ತ ಕೊಂಡಯ್ಯಲು ಸಾವಿರಾರು ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದರು.
ಕಳೆದ ೬೫ ವರ್ಷಗಳಲ್ಲಿ ಮಾಡದ ಅಭಿವೃದ್ಧಿಯನ್ನು ೧೦ ವರ್ಷಗಳಲ್ಲಿ ಮಾಡಲಾಗಿದೆ. ದೇಶದ ಅಭಿವೃದ್ಧಿ ಜತೆಗೆ ರಾಜ್ಯದ ಅಭಿವೃದ್ಧಿಯಾಗಬೇಕು ಎನ್ನುವುದು ಪ್ರಧಾನಮಂತ್ರಿ ಮೋದಿಜಿಯವರ ಆಶಯವಾಗಿದೆ. ಹಾಗಾಗಿಮ ರಾಜ್ಯಕ್ಕ ೭,೬೦೦ ಕೋಟಿ ರೂ. ನೀಡಲಾಗಿದೆ. ೨೦೨೫-೨೬ನೇ ಸಾಲಿನಲ್ಲಿ ರಾಜ್ಯದ ೬೧ ರೈಲು ನಿಲ್ದಾಣಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಹತ್ತಾರು ರೈಲುಗಳನ್ನು ನೀಡಲಾಗಿದೆ ಜನರ ಬೇಡಿಕೆ ಮೇರೆಗೆ ಕಡಿಮೆ ದರದಲ್ಲಿ ಸ್ಟ್ರೀಪರ್ ಸೌಲಭ್ಯಕ್ಕೆ ಅಮೃತ ಭಾರತ ರೈಲು ಆರಂಭಕ್ಕೆ ಚಿಂತನೆ ಮಾಡಲಾಗಿದೆ ಎಂದರು.


ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಜಿಲ್ಲೆಯಲ್ಲಿ ನಿತ್ಯವೂ ಸರಾಸರಿ ೧೦ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಈ ಭಾಗದ ಜನರ ಬಹುದಿನಗಳ ಬೇಡಿಕೆ ಹಿನ್ನಲೆಯಲ್ಲಿ ವಂದೇಭಾರತ ಎಕ್ಸ್‌ಪ್ರೆಸ್ ನಿಲುಗಡೆಗೆ ಕ್ರಮವಹಿಸಲಾಗಿದೆ ವಂದೇ ಭಾರತ ರೈಲು ನಿಲುಗಡೆಗೆ ಸಹಕರಿಸಿದ ಸಚಿವ ಸೋಮಣ್ಣ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಟ್ಯವ ಅವರಿಗೆ ಅಭಿನಂದಿಸುತ್ತೇನೆ ಎಂದರು.
ವಿದೇಶಗಳಲ್ಲಿ ಇಂತಹ ರೈಲುಗಳನ್ನು ನೋಡಲಾಗುತ್ತಿತ್ತು, ಆದರೆ ಪ್ರಧಾನಿಯವರ ಇಚ್ಛಾಶಕ್ತಿಯಿಂದ ಇಂತಹ ರೈಲುಗಳನ್ನು ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸಂಚರಿಸುತ್ತಿವೆ ರೈಲು ಮಾರ್ಗಗಳ ವಿಸ್ತರಣೆ, ರೈಲುಗಳ ವಿದ್ಯುದ್ದೀಕರಣ, ಸಿಗ್ನಲ್‌ಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ ಮೂಲಕ ಅಪಘಾತ ಹಾಗೂ ಅನಾಹುತಗಳನ್ನು ತಪ್ಪಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ನಗರಸಭೆ ಅಧ್ಯಕ್ಷ ಶಶಿಕಲಾ ಮಾಳಗಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಎಸ್‌ಪಿ ಅಂಶುಕುಮಾರ, ರೈಲ್ವೆ ಇಲಾಖೆಯ ಡಿ.ಆರ್.ಎಂ. ಮುದಿತ್ ಮಿತ್ತಲ್, ಚೀಫ್ ಕಮರ್ಷಿಯಲ್ ಮ್ಯಾನೇಜರ್ ಅನೂಪ ಸಾಧು, ದಯಾನಂದ, ನೈಋತ್ಯ ರೈಲ್ವೆ ಬಳಕೆದಾರರ ಸಂಘದ ಸದಸ್ಯೆ ಮಹೇಂದ್ರ ಸಿಂಘಿ, ಇತರರು ಉಪಸ್ಥಿತರಿದ್ದರು.
ಹಾವೇರಿ ನಿಲ್ದಾಣಕ್ಕೆ ೨೪ ಕೋಟಿ ರೂ. : ಹಾವೇರಿ ರೈಲು ನಿಲ್ದಾಣ ಅಭಿವೃದ್ಧಿಗೆ ೨೪ ಕೋಟಿ ರೂ. ನೀಡಲಾಗಿದೆ ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ೫ ಆರ್‌ಒಬಿ ಹಾಗೂ ಒಂದು ಆರ್‌ಯುಬಿ ಮಾಡಲಾಗಿದೆ. ಹಾವೇರಿ ನಿಲ್ದಾಣಕ್ಕೆ ಸಂಸದರ ಬೇಡಿಕ ಅನುಸಾರ ಶೀಘ್ರದಲ್ಲೇ ಎಸ್ನಿಲೆಟರ್ ಅಳವಡಿಕೆಗೆ ಕ್ರಮವಹಿಸಲಾಗುವುದು ರಾಣೆಬೆನ್ನೂರ ಹಾಗೂ ಬ್ಯಾಡಗಿ ರೈಲು ನಿಲ್ದಾಣಗಳಲ್ಲಿ
ಗೂಡ್‌ಶೆಡ್ ನಿರ್ಮಾಣ, ಕರ್ಜಗಿ ಲೆವಲ್ ಕ್ರಾಸಿಂಗ್ ಸೇರಿದಂತೆ ಹಾವೇರಿ ಲೋಕಸಭಾ ಕ್ಷೇತ್ರದ ವಿವಿಧ ಬೇಡಿಕೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಸೋಮಣ್ಣ ಭರವಸೆ ನೀಡಿದರು.


ಹಾವೇರಿ- ಗದಗಕ್ಕೆ ೧೦೦ ಕೋಟಿ ರೂ. ಬೇಡಿಕೆ : ಹಾವೇರಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಎಸ್ಕಿಲೆಟರ್ ಅಳವಡಿಕೆ, ರಾಣೆಬೆನ್ನೂರ, ಬ್ಯಾಡಗಿ ನಿಲ್ದಾಣಗಳಲ್ಲಿ ಗೂಡ್ ಶೆಡ್ ನಿರ್ಮಾಣ, ಯಲವಿಗಿ-ಗದಗ ಮಾರ್ಗ, ರಾಣೆಬೆನ್ನೂರ-ಶಿಕಾರಿಪುರ ಮಾರ್ಗ, ಯಲವಿಗಿ ಮೇಲೆ ತುವೆ, ನಾಗೇಂದ್ರಮಟ್ಟಿ ಆರ್‌ಒಬಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಆರ್‌ಒಬಿ ಹಾಗೂ ಆರ್‌ಯುಬಿ ಮಾಡಲು ಹಾಗೂ ವಿವಿಧ ಯೋಜನೆಗಳಿಗೆ ಹಾವೇರಿ ಜಿಲ್ಲೆಗೆ ೬೦ ಕೋಟಿ ರೂ ಹಾಗೂ ಗದಗ ಜಿಲ್ಲೆಗೆ ೪೦ ಕೋಟಿ ರೂ ಸೇರಿ ರೂ. ೧೦೦ ಕೋಟಿ ರೂ. ಮಂಜೂರಿಗೆ ಸಂಸದ ಬೊಮ್ಮಾಯಿ ಸಚಿವ ಸೋಮಣರಿಗೆ ಬೇಡಿಕೆ ಸಲ್ಲಿಸಿದರು.

Leave a Reply

Your email address will not be published. Required fields are marked *