ಮೂವರು ಅಧಿಕಾರಿಗಳಿಗೆ ಲೋಕಾಯುಕ್ತ ಬಿಗ್ ಶಾಕ್; ಮನೆಗಳಲ್ಲಿ ದಾಖಲೆಗಳ ಶೋಧ, ಚಿನ್ನ-ನಗದು ಪತ್ತೆ! ಲೋಕಾಯುಕ್ತ ಬಲೆ ಬೀಳುತ್ತಿದ್ದಂತೆಯೇ ಬೆಚ್ಚಿಬಿದ್ದ ಅಧಿಕಾರಿಗಳು..!
ಜಿಮ್ ಮಿಗಿಸಿಕೊಂಡು ಬಂದ ಬಾಡಿ ಬಿಲ್ಡರ್ ಗೆ ಹೃದಯಾಘಾತ..!
ವೀರಮಾರ್ಗ ನ್ಯೂಸ್ : ಮನೆ ಮುಂದೆ ಕುಸಿದು ಬಿದ್ದು ಸಾವನ್ನಪ್ಪಿದ ಬಾಡಿ ಬಿಲ್ಡರ್ . ಸುಶೀಲಕುಮಾರ (26)ಹೃದಯಾಘಾತ ದಿಂದ ಸಾವನ್ನಪ್ಪಿದ ಬಾಡಿ ಬಿಲ್ಡರ್.ಬಾಡಿ ಬಿಲ್ಡಿಂಗ್ ನಲ್ಲಿ ಹತ್ತಾರು ಕಡೆ ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದ ಬಾಡಿ ಬಿಲ್ಡರ್.ಜಿಮ್ ನಿಂದ ಮನೆಗೆ ವಾಪಸ್ಸಾಗಿ ಮನೆಯ ಪ್ರವೇಶ ಮಾಡುವಾಗ ಘಟನೆ.ದಾವಣಗೆರೆಯ ಕೆಟಿಜೆ ನಗರದ ನಿವಾಸಿ ಸುಶೀಲಕುಮಾರ್.ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದ ಸಂಬಂಧಿಕರು.
ಸಾವನ್ನಪ್ಪಿದನ್ನ ಖಚಿತ ಪಡಿಸಿದ ವೈದ್ಯರು.
ಸ್ನೇಹಿತರಿಗೆ ಅಚ್ಚರಿ ಮೂಡಿಸಿದ ಬಾಡಿ ಬಿಲ್ಡರ್ ಸಾವು.ಮುಗಿಲು ಮುಟ್ಟಿದ ಕುಟುಂಬ ಸದಸ್ಯರ ಅಕ್ರಂದನ.
ಮೂವರು ಅಧಿಕಾರಿಗಳಿಗೆ ಲೋಕಾಯುಕ್ತ ಬಿಗ್ ಶಾಕ್; ಮನೆಗಳಲ್ಲಿ ದಾಖಲೆಗಳ ಶೋಧ, ಚಿನ್ನ-ನಗದು ಪತ್ತೆ! ಲೋಕಾಯುಕ್ತ ಬಲೆ ಬೀಳುತ್ತಿದ್ದಂತೆಯೇ ಬೆಚ್ಚಿಬಿದ್ದ ಅಧಿಕಾರಿಗಳು..!
ಮೂವರು ಸರ್ಕಾರಿ ಅಧಿಕಾರಿಗಳ ಮನೆ-ಕಚೇರಿಗಳ ಮೇಲೆ ದಾಳಿ; NWKRTC ಇಂಜಿನಿಯರ್ ಮನೆಯಲ್ಲಿ ಲಕ್ಷಾಂತರ ನಗದು, ಚಿನ್ನ ಪತ್ತೆ!
ದಾವಣಗೆರೆಯಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂವರು ಹಿರಿಯ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಕೃಷ್ಣಾ ನಾಯ್ಕ್, ಉತ್ತರ ಪಶ್ಚಿಮ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮುಖ್ಯ ಯಾಂತ್ರಿಕ ಮೆಕ್ಯಾನಿಕಲ್ ಇಂಜಿನಿಯರ್ ಸಿದ್ದೇಶ್ವರ ಹಾಗೂ ಕೆಆರ್ಐಡಿಎಲ್ ಅಧೀಕ್ಷಕ ಇಂಜಿನಿಯರ್ ಕೆಂಚಪ್ಪ ಅವರಿಗೆ ಸೇರಿದ ನಿವಾಸಗಳು ಮತ್ತು ಕಚೇರಿಗಳಲ್ಲಿ ದಾಖಲೆಗಳ ತಪಾಸಣೆ ನಡೆದಿದೆ.
ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ ಹಾಗೂ ವಿಜಯನಗರ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ 12ಕ್ಕೂ ಹೆಚ್ಚು ತಂಡಗಳು ದಾಳಿ ನಡೆಸಿದ್ದು, ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
ನಿವಾಸದಲ್ಲಿ ಲಕ್ಷಾಂತರ ರೂಪಾಯಿ ನಗದು, ಚಿನ್ನ ಹಾಗೂ ಬೆಳ್ಳಿ ಆಭರಣಗಳು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದ್ದು, ಅಧಿಕಾರಿಗಳು ಆಸ್ತಿ ದಾಖಲೆಗಳು, ಬ್ಯಾಂಕ್ ವ್ಯವಹಾರಗಳು ಮತ್ತು ಆದಾಯ ಮೂಲಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ದಾಳಿಯ ಬಳಿಕ ಇನ್ನಷ್ಟು ಅಕ್ರಮ ಆಸ್ತಿ ವಿವರಗಳು ಬಹಿರಂಗವಾಗುವ ಸಾಧ್ಯತೆ ಇದ್ದು, ಪ್ರಕರಣ ರಾಜ್ಯಾದ್ಯಂತ ಗಮನ ಸೆಳೆದಿದೆ.