ವೀರಮಾರ್ಗ ನ್ಯೂಸ್ : ವಿಜಯನಗರ್ ಜಿಲ್ಲಾ : ಡಾ.ರಾಮಮನೋಹರ ಲೋಹಿಯಾ ಜಯಂತಿಯ ಅಂಗವಾಗಿ ಬೆಂಗಳೂರಿನ ಚಿತ್ರಕಲಾ ಪರಿಷತನಲ್ಲಿ ಭಾರತ ಯಾತ್ರಾ ಕೇಂದ್ರ , ಎಂಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ , ಲೋಹಿಯಾ ಜೆಪಿ ವಿಚಾರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಾಮಾಜಿಕ ಹೋರಾಟಗಾರರು ಹಾಗೂ ರಾಜಕೀಯ ಚಿಂತಕರಾದ ಮಾನ್ಯ ಶ್ರೀ ಯೋಗೇಂದ್ರ ಯಾದವ್ ಅವರಿಗೆ ಡಾ.ರಾಮಮನೋಹರ್ ಲೋಹಿಯಾ ಪ್ರಶಸ್ತಿ ಪ್ರದಾನ ಸಮ್ಮಾನ ಮಾಡಿ ಗೌರವಿಸಲಾಯಿತು.
ಈ ಶುಭ ಸಂದರ್ಭದಲ್ಲಿ ಶ್ರೀ ರಾಜೀವ್ ರಾಯ್, ಸಂಸತ್ ಸದಸ್ಯರು ಉತ್ತರ ಪ್ರದೇಶ, ಡಾ. ಬಿ.ಎಲ್.ಶಂಕರ್ ಭಾರತ ಯಾತ್ರಾ ಕೇಂದ್ರ,ಮಾಜಿ ಶ್ರೀ ಬಿ.ಆರ್.ಪಾಟೀಲ್ ಉಪಾಧ್ಯಕ್ಷರು, ರಾಜ್ಯ ಯೋಜನಾ ಆಯೋಗ, ಶ್ರೀ ಮೋಹನ ಕೊಂಡಜ್ಜಿ,ಮಾಜಿ ವಿಧಾನ ಪರಿಷತ್ ಸದಸ್ಯರು, ಶ್ರೀ ನಾಗರಾಜ್ ಮೂರ್ತಿ, ಅಧ್ಯಕ್ಷರು ಕರ್ನಾಟಕ ನಾಟಕ ಅಕಾಡೆಮಿಯ, ಶ್ರೀಮತಿ ಎಂ.ಪಿ.ವೀಣಾ ಮಹಾಂತೇಶ್, ಅಧ್ಯಕ್ಷರು ಶ್ರೀ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್, ಶ್ರೀಮತಿ ಎಂ.ಪಿ.ಸುಮ ವಿಜಯ್, ಅಧ್ಯಕ್ಷರು ರಂಗಭಾರತಿ, ಡಾ.ಮಹಾಂತೇಶ್ ಚರಂತಿಮಠ, ಶ್ರೀ ವಿಜಯ್ ಹಿರೇಮಠ್ ಹಾಗೂ ಅನೇಕ ರಾಜಕೀಯ ಮುಖಂಡರು , ಸಾಹಿತಿಗಳು , ರೈತ ಮುಖಂಡರು , ಕಲಾವಿದರು , ಲೇಖಕರು , ವಿವಿಧ ಕ್ಷೇತ್ರದ ಸಾಧಕರು, ಚಿಂತರು, ಶ್ರೀ ಎಂ.ಪಿ. ಪ್ರಕಾಶ್ ಅವರು ಅಭಿಮಾನಿಗಳು ಈ ಕಾಯ೯ಕ್ರಮದಲ್ಲಿ ಉಪಸ್ಥಿತರಿದು.