ಪಾಂಡಿಚ್ಚೆರಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ –

ವೀರಮಾರ್ಗ ನ್ಯೂಸ್ : ಪಾಂಡಿಚ್ಚೆರಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ – ತಡಸಿನಕೊಪ್ಪದ ಇಂದ್ರು ಮಾದೇವ ದುರಗಣ್ಣವರ್ ಸಾಧನೆ


ಧಾರವಾಡ : ಇತ್ತೀಚೆಗೆ ಪಾಂಡಿಚ್ಚೆರಿಯಲ್ಲಿ ನಡೆದ 15 ವರ್ಷದೊಳಗಿನ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಧಾರವಾಡ ಜಿಲ್ಲೆಯ ತಡಸಿನಕೊಪ್ಪ ಗ್ರಾಮದ ಪ್ರತಿಭಾವಂತ ಕ್ರೀಡಾಪಟು ಇಂದ್ರು ಮಾದೇವ ದುರಗಣ್ಣವರ್ ಅವರು ರಾಜ್ಯದ ಪರವಾಗಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಚಿಕ್ಕ ವಯಸ್ಸಿನಿಂದಲೇ ಕುಸ್ತಿ ಕ್ರೀಡೆಗೆ ಅಪಾರ ಆಸಕ್ತಿ ಹೊಂದಿದ್ದ ಇಂದ್ರು, ಧಾರವಾಡದ ಮಾರುತಿ ತಾಲೀಮ್‌ನಲ್ಲಿ ತಮ್ಮ ಕುಸ್ತಿ ತರಬೇತಿಯನ್ನು ಆರಂಭಿಸಿದ್ದರು. ನಂತರ ತಮ್ಮ ಕಠಿಣ ಪರಿಶ್ರಮ, ಶಿಸ್ತು ಹಾಗೂ ಅಚಲ ಸಂಕಲ್ಪದೊಂದಿಗೆ ಪ್ರಸ್ತುತ ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತುದಾರರಾದ ರಾಮ ಬಡ್ಕಿ ಹಾಗೂ ಶಂಕ್ರಯ್ಯ ಪೂಜಾರ ಅವರ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ನಡೆಸುತ್ತಿದ್ದಾರೆ.
ಪಾಂಡಿಚ್ಚೆರಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಇಂದ್ರು ಮಾದೇವ ದುರಗಣ್ಣವರ್ ಅವರು ತಮ್ಮ ಅಸಾಧಾರಣ ಪ್ರತಿಭೆ, ಶ್ರಮ ಹಾಗೂ ಆತ್ಮವಿಶ್ವಾಸದಿಂದ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡು ರಾಜ್ಯದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಅವರ ಈ ಸಾಧನೆ ಕ್ರೀಡಾ ವಲಯದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದು, ಜಿಲ್ಲೆಯ ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿದಾಯಕವಾಗಿದೆ.


ಇಂದ್ರು ಅವರ ಈ ಅಮೋಘ ಸಾಧನೆಗೆ ತಡಸಿನಕೊಪ್ಪ ಗ್ರಾಮದ ಗ್ರಾಮಸ್ಥರು, ಕ್ರೀಡಾಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಗಣ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮತ್ತಷ್ಟು ಸಾಧನೆ ಮಾಡಿ ದೇಶದ ಕೀರ್ತಿ ಹೆಚ್ಚಿಸಲಿ ಎಂದು ಶುಭ ಹಾರೈಸಿದ್ದಾರೆ.

ಕಾನೂನು ಅರಿಯದ ಸರ್ಕಾರಿ ಅಧಿಕಾರಿಗಳು….

ಮಕ್ಕಳಿಗೆ ಪಾಠ ಮಾಡುವವರೇ….?

ಸಾರ್ವಜನಿಕ ಪ್ರಾಧಿಕಾರಗಳಿಗೆ ನಾಗರೀಕರು ಸಲ್ಲಿಸುವ ಮಾಹಿತಿ ಹಕ್ಕು ಜೊತೆಗಿನ ಇಂಡಿಯನ್ ಪೋಸ್ಟಲ್ ಆರ್ಡರ್ 10 ರೂಪಾಯಿ ಮೌಲ್ಯದ ನಗದೀಕರಣ ಅವಧಿ ಎಷ್ಟು ಎಂದು ಈಗಷ್ಟೇ ಪ್ರಶ್ನೆ ಕೇಳಿ ಅರ್ಜಿದಾರರು ಫೋನ್ ಮಾಡಿದ್ದರು. ಪೋಸ್ಟಲ್ ಆರ್ಡರ್ ಹಿಂಬದಿಯರಿಗೆ ಈ ಬಗ್ಗೆ ಇಂಗ್ಲೀಷಿನಲ್ಲಿ ಸ್ಪಷ್ಟವಾಗಿ ದಾಖಲಿಸಿದ್ದು ಅದರ ವಿವರ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಹೀಗಿದೆ :-

This document is an Indian Postal Order.This specific form is used as a secure method to send money via the post.It is subject to the rules and conditions stipulated in the Indian Postal Order rules.The validity of the order is generally 24 months from the last day of the month of issue.

ಈ ದಾಖಲೆಯು ಭಾರತೀಯ ಅಂಚೆ ಆದೇಶವಾಗಿದೆ. ಈ ನಿರ್ದಿಷ್ಟ ನಮೂನೆಯನ್ನು ಅಂಚೆ ಮೂಲಕ ಹಣವನ್ನು ಕಳುಹಿಸಲು ಸುರಕ್ಷಿತ ವಿಧಾನವಾಗಿ ಬಳಸಲಾಗುತ್ತದೆ. ಇದು ಭಾರತೀಯ ಅಂಚೆ ಆದೇಶ ನಿಯಮಗಳಲ್ಲಿ ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಆದೇಶದ ಸಿಂಧುತ್ವವು ಸಾಮಾನ್ಯವಾಗಿ ವಿತರಣೆಯ ತಿಂಗಳ ಕೊನೆಯ ದಿನದಿಂದ 24 ತಿಂಗಳುಗಳಾಗಿರುತ್ತದೆ.