ಬೆಟ್ಟದಹೊಸೂರು ಗ್ರಾಮದಲ್ಲಿ ಶಮಿವೃಕ್ಷಕ್ಕೆ ವಿಶೇಷ ಪೂಜೆ.
ವೀರಮಾರ್ಗ ನ್ಯೂಸ್ : ಮಂಡ್ಯ ಜಿಲ್ಲಾ : ಕೃಷ್ಣರಾಜಪೇಟೆ :ಬೆಟ್ಟದಹೊಸೂರು ಗ್ರಾಮದಲ್ಲಿ ಶಮಿವೃಕ್ಷಕ್ಕೆ ವಿಶೇಷ ಪೂಜೆ. ಗವಿರಂಗನಾಥಸ್ವಾಮಿ ವಿಜಯದಶಮಿ ಮಂಟಪ ಹಾಗೂ ಶಮಿ ವೃಕ್ಷಕ್ಕೆ ಕಟ್ಟಿರುವ ಕಟ್ಟೆಯ ಲೋಕಾರ್ಪಣೆ.. ಹರಿದು ಬಂದ ಭಕ್ತಸಾಗರ. ದುಷ್ಟಶಕ್ತಿಯ ಸಂಹಾರವಾಗಿ ಲೋಕದಲ್ಲಿ ಶಾಂತಿ ಸಮೃದ್ಧಿ ನೆಲೆಸಿದ ಸಂಕೇತವೇ ವಿಜಯದಶಮಿಯ ಸಂದೇಶವಾಗಿರುವ ಭಾವೈಕ್ಯತೆಯ ನಾಡಹಬ್ಬ ದಸರಾ ಆಗಿದೆ .. ಸಮಾಜ ಸೇವಾಕರ್ತ ಕರಿಬೆಟ್ಟೇಗೌಡ. ಶರನ್ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ತಾಯಿ ಚಾಮುಂಡೇಶ್ವರಿಯು ಲೋಕ ಕಂಟಕನಾದ ದುಷ್ಟ ಮಹಿಷಾಸುರನನ್ನು ಸಂಹಾರ ಮಾಡಿ ಗೆಲುವು ಸಾಧಿಸಿದ…