ಅಂಗನವಾಡಿ ಶಾಲೆ ಕಟ್ಟಡ,ಗ್ರಾಮಸ್ಥರೊಂದಿಗೆ ಭೂಮಿ ಪೂಜೆ.

ವೀರಮಾರ್ಗ ನ್ಯೂಸ್ : ರಾಣೇಬೆನ್ನೂರ : ತಾಲೂಕ ಹುಲಿಕಟ್ಟಿ ಗ್ರಾಮದಲ್ಲಿ ಮಾನ್ಯ ಜನಪ್ರಿಯ ಶಾಸಕರು ಶ್ರೀ ಪ್ರಕಾಶ ಕೋಳಿವಾಡ ಅವರನ್ನು ಶಾಲಾ ಮಕ್ಕಳು ಗುಲಾಬಿ ಹೂವು ಕೊಡುವದರ ಮೂಲಕ ಸ್ವಾಗತ ಮಾಡಿಕೊಂಡು ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಹಾವೇರಿ ತಾಲೂಕು ಪಂಚಾಯಿತಿ ರಾಣೆಬೆನ್ನೂರು ಗ್ರಾಮ ಪಂಚಾಯಿತಿ ನದಿಹರಳಹಳ್ಳಿಗೆ ಸಂಬಂಧ ಪಟ್ಟ ಹುಲಿಕಟ್ಟಿ ಗ್ರಾಮದ 2023-2024 ನೇ ಸಾಲಿನ ಒಂದನೇ ಅಂಗನವಾಡಿ ಶಾಲೆ ಕಟ್ಟಡ ಹೊಸದಾಗಿ ಪ್ರಾರಂಭಿಸಲು ಗ್ರಾಮಸ್ಥರೊಂದಿಗೆ ಭೂಮಿ ಪೂಜೆ ನೆರವೇರಿಸಿ ಗುದ್ದಲಿಯಲ್ಲಿ ಅಗೆಯುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೊತೆ.

ನಂತರ ಪ್ರಕಾಶ ಕೋಳಿವಾಡ ಅವರು ಈ ಒಂದು ಅಂಗನವಾಡಿ ಶಾಲೆ ಕಟ್ಟಡಕ್ಕೆ ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 12 ಲಕ್ಷ ರೂಪಾಯಿ ಹಾಗೂ ನದಿಹರಳಹಳ್ಳಿ ಗ್ರಾಮ ಪಂಚಾಯಿತಿ ನೆರೇಗಾ ಯೋಜನೆ ವತಿಯಿಂದ 8 ಲಕ್ಷ ರೂಪಾಯಿ ಒಟ್ಟು 20 ಲಕ್ಷ ರೂಪಾಯಿ ಈ ಕಟ್ಟಡ ಪ್ರಾರಂಭಿಸಲು ಹಣ ಬಿಡುಗಡೆ ಮಾಡಲಾಗಿದೆ ಈ ಒಂದು ಕಟ್ಟಡ ಸೂಚರ್ಜಿತ ವಾಗಿ ಕಟ್ಟಡವಾಗಿ ನಿರ್ಮಾಣವಾಗಲಿ ಇದಕ್ಕೆ ಗ್ರಾಮಸ್ಥರು ಸಹ ಕಟ್ಟಡ ಮಾಡುವಾಗ ಕಾಮಗಾರಿ ವೀಕ್ಷಣೆ ಮಾಡುತ್ತೀರಬೇಕು ಗ್ರಾಮಸ್ಥರು ಸಹ ಸಹಕಾರ ನೀಡಬೇಕು ಎಂದು ತಿಳಿಸಿದರು ನಂತರ ಗ್ರಾಮಸ್ಥರು ನೀಡುವ ವಿವಿಧ ಬೇಡಿಕೆಯ ಮನವಿ ಪತ್ರ ಸ್ವೀಕರಿಸಿ ನಿಮ್ಮ ಮನವಿ ಪತ್ರದ ಬೇಡಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು ನಂತರ ಶಾಸಕರಿಗೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸವಿತಾ ಬಜಾರಿ ಉಪಾಧ್ಯಕ್ಷರಾದ ಶಶಿಕಲಾ ಕೋಟೆಗೌಡ್ರು ಗ್ರಾಮ ಪಂಚಾಯಿತಿ ಅಭಿರುದ್ದಿ ಅಧಿಕಾರಿಗಳು ಗೀತಾ ಟಿ ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಸದಸ್ಯರಾದ ಭೀಮಪ್ಪ ಕುಡಪಲಿ ಕರಿಯಪ್ಪ ಮಸಲಾಡದ ಚಂದ್ರಪ್ಪ ಅಕ್ಕಿ ಶಿಲ್ಪಾ ಭಟ್ಟಂಗಿ ಹನುಮಂತಪ್ಪ ಪವಾರ ಬಸವರಾಜಪ್ಪ ಮೆಗಳಗೇರಿ ಸ್ವಾಕರವೇ ತಾಲೂಕ ಅಧ್ಯಕ್ಷರು ಚಂದ್ರಪ್ಪ ಬಣಕಾರ ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಶಾಲಾ ಕಾರ್ಯಕರ್ತರು ಮುದ್ದು ಮಕ್ಕಳು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.