ಮಹಿಳೆ ಮೃತಪಟ್ಟು ಒಂದೂವರೆ ವರ್ಷವಾದ್ರೂ ಯಾರಿಗೂ ಗೊತ್ತಾಗಲಿಲ್ವಾ?

ವೀರಮಾರ್ಗ ನ್ಯೂಸ್ : ಬೆಂಗಳೂರು : ಟಿ.ದಾಸರಹಳ್ಳಿಯ (Dasarahalli) ಬಾಗಲಗುಂಟೆ ಹಾವನೂರು ಬಡಾವಣೆಯಲ್ಲಿರೋ ಒಂದು ಮನೆಯಲ್ಲಿ ಮಹಿಳೆಯೊಬ್ಬರ ಅಸ್ಥಿಪಂಜರ ಪತ್ತೆಯಾಗಿದ್ದು, ಅಕ್ಕಪಕ್ಕದ ನಿವಾಸಿಗಳು ಗಾಬರಿಗೊಂಡಿದ್ದಾರೆ. ಅಸ್ಥಿಪಂಜರ 50 ವರ್ಷ ವಯಸ್ಸಿನ ದಾಕ್ಷಾಯಿಣಿ ಅವರದ್ದು ಎಂದು ಗುರುತಿಸಲಾಗಿದೆ.

ಮಹಿಳೆ (Women) ಮೃತಪಟ್ಟು ಒಂದೂವರೆ ವರ್ಷವಾದ್ರೂ ಯಾರಿಗೂ ಗೊತ್ತಾಗಲಿಲ್ವಾ? ಏನಿದು ಮಹಿಳೆ ಸಾವಿನ ಸೀಕ್ರೆಟ್,,?

ಒಂಟಿಯಾಗಿದ್ದ ದಾಕ್ಷಾಯಿಣಿ.

ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ದಾಕ್ಷಾಯಿಣಿ ಎಂಬ ಮಹಿಳೆ ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಒಂದೂವರೆ ವರ್ಷದ ಹಿಂದೆಯೇ ದಾಕ್ಷಾಯಿಣಿ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ರಾತ್ರಿ ಮನೆಯ ಬಾಗಿಲು ತೆರೆದಿರುವುದನ್ನ ಕಂಡು ಸ್ಥಳೀಯರು ಗಮನಿಸಿದಾಗ ಅಸ್ಥಿಪಂಜರ ಕಾಣಿಸಿಕೊಂಡಿದೆ.

ಗಂಡ-ಮಗ ಸಾವು.

10 ವರ್ಷಗಳ ಹಿಂದೆ ಗಂಡ ಉಮೇಶ್‌ ಮೃತಪಟ್ಟಿದ್ದರು. ಮಗನೂ ಕೂಡಾ ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದ. ಬಳಿಕ ದಾಕ್ಷಾಯಿಣಿ ಅವರು ಒಬ್ಬರೇ ವಾಸವಾಗಿದ್ದರು. ಒಂದು ವರ್ಷದಿಂದ ಮನೆ ಬಾಗಿಲು ಬಂದ್ ಆಗಿತ್ತು. ಹಾಗೇ ಇತ್ತಂತೆ.

ಕ್ಲೋಸ್ ಆಗಿದ್ದ ಮನೆಯ ಡೋರ್ ಓಪನ್.

ರಾತ್ರಿ 8 ಗಂಟೆ ಸುಮಾರಿಗೆ ಮನೆ ಡೋರ್ ಓಪನ್ ಆಗಿರೋದನ್ನ ನೋಡಿ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆಗೆ ಯಾರೋ ಕಳ್ಳತನ ಮಾಡಲು ಬಂದಿರಬಹುದು ಎಂದು ಕರೆ ಮಾಡಿದ್ದರು. ಪೊಲೀಸರು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ಅಸ್ಥಿಪಂಜರವನ್ನು ಪೊಲೀಸರು ಹಾಗೂ ಸೋಕೋ ಟೀಮ್ ಕಲೆಹಾಕಿದೆ.

ಬಾತ್ ರೂಂನಲ್ಲಿ ಅಸ್ಥಿಪಂಜರ.

ಈ ಮನೆಯ ಬಾತ್ ರೂಂನಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ. ಒಂದೂವರೆ ವರ್ಷದ ಹಿಂದೆ ಮಹಿಳೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳ ಪರಿಶೀಲಿಸಿದ ಬಾಗಲಗುಂಟೆ ಪೊಲೀಸರು, ಅಸ್ಥಿಪಂಜರವನ್ನ ಎಫ್‌ಎಸ್‌ಎಲ್‌ಗೆ ರವಾನಿಸಿದ್ದಾರೆ

ವರದಿ: ಚನ್ನೇಶ್ ಕೆ ಎಂ
ಬೆಂಗಳೂರು