ನಿಧಾನಕ್ಕೆ ಯೋಚಿಸಿ
ಕಾವ್ಯರಾಣಿಯನ್ನು,ಅಸಿಸ್ಟೆಂಟ್_ಕಮಿಷನರ್ ಮಾಡಲು ಆಕೆಯ ಅಪ್ಪ ಅಮ್ಮ ಎಷ್ಟು ಖರ್ಚು ಮಾಡಿರಬಹುದು?
- ಮೊದಲು ಓದಿಸಲು
- #KPSC ಎಕ್ಸಾಮ್ ತಯಾರಿಗೆ
- ಸೆಲೆಕ್ಟ್ ಮಾಡಿಸಲು 80 ಲಕ್ಷದಿಂದ ಒಂದು ಕೋಟಿ
- ಒಳ್ಳೇ ಸ್ಥಾನಕ್ಕೆ ಮತ್ತು ಸ್ಥಳಕ್ಕೆ ಪೋಸ್ಟಿಂಗ್ ಗೆ ಮಂತ್ರಿಗೆ 50 ರಿಂದ 60 ಲಕ್ಷ
- ಬಂದ ಲಂಚದಲ್ಲಿ ಸಹಕಾರಿಗಳಿಗೆ ಪಾಲು
- ಮೇಲಿನ ಅಧಿಕಾರಿಗಳಿಗೆ ಪಾಲು.
- ಹುದ್ದೆಗೆ ಬರಲು ಖರ್ಚು ಮಾಡಿರುವ ಸುಮಾರು 2 ಕೋಟಿ ಬಂಡವಾಳ ಸಂಪಾದಿಸಬೇಕಲ್ಲವೇ?
- ಸಾಲ ಮಾಡಿ ಕೊಟ್ಟಿದ್ದರೆ ಬಡ್ಡಿ ಸಮೇತ ಹಿಂತಿರುಗಿಸಬೇಕಲ್ಲವೇ?
- ಮುಂದಿನ ಪೋಸ್ಟಿಂಗ್ ಗೆ ಲಂಚ ಕೊಡಲೂ ಹಣ ಮಾಡಬೇಕು ಅಲ್ಲವೇ?
- ಇಷ್ಟಾದ ಮೇಲೆ ಅಂತಸ್ತು ಕಾಪಾಡಿಕೊಳ್ಳಲು ಒಂದು ಒಳ್ಳೆಯ ಬಂಗಲೆ, 2 ಅಥವಾ 3 ಕಮರ್ಶಿಯಲ್ ಕಾಂಪ್ಲೆಕ್ಸ್, ಹತ್ತಾರು ಎಕರೆ ಜಮೀನು ಒಂದು 5-6 ಕೆಜಿ ಬಂಗಾರ 10-20 ಕೆಜಿ ಬೆಳ್ಳಿ ಇಟ್ಟುಕೊಳ್ಳಬೇಕಲ್ಲವೇ?
- ನಾಳೆ ಮಕ್ಕಳನ್ನು ಓಡಿಸಬೇಕು ಅವರನ್ನು #KPSC ಪಾಸು ಮಾಡಿಸಿ ಅಧಿಕಾರಿ ಮಾಡಬೇಕಲ್ಲವೇ?
- ಈಗ #ಲೋಕಾಯುಕ್ತ ದಿಂದ #ಬಿರಿಪೋರ್ಟ್ ಪಡೆಯಲೂ ಹಣ ಖರ್ಚು ಮಾಡಬೇಕು ಅಲ್ಲವೇ?
- ಮತ್ತೆ ಪೋಸ್ಟಿಂಗ್ ಗೆ ಒತ್ತಡ ಹೇರಲು ಕಾವ್ಯಾರಾಣಿ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿ, ಜಾತಿ ಮೇಲಿನ ವೈಷಮ್ಯಕ್ಕಾಗಿ ಈ ಕೇಸು ಎಂದು ಸ್ವಜಾತಿ ಭಾಂಧವರಿಂದ ಮಠ ಮಾನ್ಯ ಗಳಿಂದ ಹೇಳಿಸಲು ಹಣ ಖರ್ಚು ಮಾಡಬೇಕು ಅಲ್ಲವೇ?
- ಇಷ್ಟೆಲ್ಲಾ ಖರ್ಚುಗಳಿರುವಾಗ ಪಾಪ ಓದಿರುವ ಹೆಣ್ಣುಮಕ್ಕಳು ಮಗಳು 5-10 ಲಕ್ಷ ಕೇಳಿ ಪಡೆದದ್ದು ತಪ್ಪೇ?
ನೀವೇ ಅವಳ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಯೋಚಿಸಿ, ಸಂಪಾದನೆ ಮಾಡುವ ಮಗಳು ಜೈಲಿಗೆ ಹೋದರೆ ಗತಿಯಾರು?
ಮೇಲಿನ ಎಲ್ಲಕ್ಕೂ #ಸಮಾಜ ಹಾಗೂ #ಭ್ರಷ್ಟವ್ಯವಸ್ಥೆ ಕಾರಣ ಅಲ್ಲವೇ
ಹಾಗಾದ್ರೆ #ಕಾವ್ಯಾರಾಣಿ ಒಬ್ಬಳೇ ತಪ್ಪಿತಸ್ಥಲೇ?
ಸಮಾಜದ ನಾವೂ ನೀವೂ #ತಪ್ಪಿತಸ್ಥ ರಲ್ಲವೇ?
ಇದರಲ್ಲಿ ನಮ್ಮ ಪಾಲೂ ಇದೇ ಅಲ್ಲವೇ.
ಆದ್ದರಿಂದ #ಭ್ರಷ್ಟಾಚಾರ ಸಮಾಜಕ್ಕೆ ಅಂಟಿರುವ ಪಿಡುಗು, ಬುಡಸಮೇತ ಕಿತ್ತೊಗೆಯಬೇಕಾಗಿದೆ. ಕಾವ್ಯಾರಾಣಿ ಅದರ ಕಾಣುವ ಮುಖ ಅಷ್ಟೇ.
ಪಿಡುಗಿನ ರೋಗದ ವಿರುದ್ಧ ಹೋರಾಡಬೇಕು ಹೊರತು ರೋಗಿಯ ವಿರುದ್ಧ / ರೋಗದ ಗುರುತಿನ ವಿರುದ್ಧ ಅಲ್ಲ.
ಸ್ಟೋರಿ : ಫೇಸ್ ಬುಕ್ ಪರಿಚಯ.