ಮಾಕನೂರುಕ್ರಾಸ್ ಗೆ ಕೋರಿಕೆಯ ಬಸ್ ನಿಲುಗಡೆ ಕೊಡಿ..

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ತಾಲೂಕ : ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಧ್ಯಕ್ಷರಾದ ಶ್ರೀ ನಿತ್ಯಾನಂದ ಜಿ ಕುಂದಾಪುರ ಇವರ ನೇತೃತ್ವದಲ್ಲಿ ಪದಾಧಿಕಾರಿಗಳು ಸಮ್ಮುಖದೊಂದಿಗೆ ಹಾವೇರಿ ಜಿಲ್ಲೆಯ ಎನ್ ಡಬ್ಲು ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ವಿಭಾಗಿಯ ನಿಯಂತ್ರಣಾಧಿಕಾರಿಗಳು ಶ್ರೀ ವಿಜಯಕುಮಾರ ಬಿ ಇ ಅವರಿಗೆ ರಾಣೇಬೆನ್ನೂರು ತಾಲೂಕಿಗೆ ಸಂಬಂಧ ಪಟ್ಟ ಮಾಕನೂರು ಕ್ರಾಸ್ ಗೆ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಕೋರಿಕೆಯ ಬಸ್ ನಿಲುಗಡೆ ಹಾಗೂ ಸ್ಟೇಜ್ ಪಾಯಿಂಟ್ ಮಾಡುವ ಬಗ್ಗೆ ಹಾಗೂ ಸ್ಥಳೀಯ ಸಮಸ್ಯಗಳ ಬಗ್ಗೆ ಚರ್ಚಿಸಿ ಮನವಿ ಪತ್ರ ನೀಡಲಾಯಿತು.ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಕುಂದಾಪುರ ಮಾತನಾಡಿ ರಾಣೆಬೆನ್ನೂರು ತಾಲೂಕು ಮಾಕನೂರು ಕ್ರಾಸ್ ಗೆ ಸ್ಟೇಜ್ ಪಾಯಿಂಟ್ ಹಾಗೂ ಬಸ್ ನಿಲುಗಡೆ ಬಗ್ಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಮೊನ್ನೆ ನಡೆದ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಮಹಿಳೆಯರು ಪ್ರಯಾಣಿಸುತ್ತಿದ್ದಾಗ ಬಸ್ ಎಲುಗಡೆ ಮಾಡದೇ ಅವರನ್ನು ಕುಮಾರಪಟ್ಟಣದಲ್ಲಿ ಇಳಿಸಿರುವುದನ್ನು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ ಕರ್ನಾಟಕ ಸರ್ಕಾರ ಸ್ತ್ರೀಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಅನುಕೂಲವಾಗಲೆಂದು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಉಚಿತ ಬಸ್ ಪ್ರಯಾಣ ಮಾಡಿರುವುದು ಒಳ್ಳೆಯ ವಿಚಾರವಾಗಿದೆ ಆದರೆ ಕೆಲವು ಕೆ ಎಸ್ ಆರ್ ಟಿ ಸಿ ಡಿಪೋ ಮ್ಯಾನೇಜರ್ ಅಥವಾ ಇಲಾಖೆಯ ಅಧಿಕಾರಿಗಳು ಗಮನಕ್ಕೆ ಬಾರದೆ ಕಂಡಕ್ಟರ್ ತಮ್ಮ ದರ್ಪದ ಮೇಲೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಮೊನ್ನೆ ಸುಮಾರು 8 ರಿಂದ 10 ಜನ ಮಹಿಳೆಯರು ಮಾಕನೂರ ಕ್ರಾಸ್ ಅಲ್ಲಿ ಇಳಿಯಬೇಕೆಂದು ಕಂಡಕ್ಷರಿಗೆ ಮನವಿ ಮಾಡಿಕೊಂಡರು ಬಸ್ ನಿಲ್ಲಿಸದೆ ಮಹಿಳೆಯರನ್ನು ಕುಮಾರಪಟ್ಟಣಕ್ಕೆ ಬಸ್ ನಿಲ್ಲಿಸಿ ಇಳಿಸಿದರು ಹಾಗೂ ಗಂಡು ಮಕ್ಕಳು ದುಡ್ಡು ಕೊಟ್ಟು ಟಿಕೇಟ್ ತೆಗೆದುಕೊಂಡ ಗಂಡು ಮಕ್ಕಳನ್ನು ಮಾತ್ರ ಮಾಕನೂರು ಕ್ರಾಸ್ ಗೆ ಇಳಿಸುತ್ತಾರೆ ಮಹಿಳೆಯರು ಇದರ ಬಗ್ಗೆ ಪ್ರಶ್ನೆ ಕೇಳಿದರೆ ಕಂಡಕ್ಟರ್ ದುಡ್ಡು ಕೊಟ್ಟರೆ ಮಾತ್ರ ಮಾಕನೂರು ಕ್ರಾಸ್ ಅಲ್ಲಿ ಇಳಿಯುವ ಅವಕಾಶ ಇದೆ ಇಲ್ಲ ಅಂದ್ರೆ ಕುಮಾರಪಟ್ಟಣಕ್ಕೆ ಇಳಿಸಲಾಗುವುದು ಎಂದು ಹರಕೆ ಉತ್ತರ ನೀಡಿದ್ದಾರೆ ಮಹಿಳೆಯರು ಪ್ರಶ್ನೆ ಮಾಡಿದರೆ ಹೆಚ್ಚಿಗೆ ಮಾತನಾಡಬೇಡಿ ಏನೇ ಕೇಳುವದಿದ್ದರೂ ಡಿಪೋ ಮ್ಯಾನೇಜರ್ ಕೇಳಿಕೊಳ್ಳಿ ನಾವು ಮಾತ್ರ ಮಹಿಳೆಯರನ್ನು ಕುಮಾರಪಟ್ಟಣಕ್ಕೆ ಇಳಿಸುವುದು ಎಂದು ಮಹಿಳೆಯರನ್ನು ಅಲ್ಲಿಗೆ ಇಳಿಸಿರುತ್ತಾರೆ ಇದರ ಬಗ್ಗೆ ಡಿಪೋ ಮ್ಯಾನೇಜರ್ ಹಾಗೂ ರಾಣೇಬೆನ್ನೂರು ಸ್ಥಳೀಯ ಶಾಸಕರಿಗೆ ತಾಲೂಕ ಆಡಳಿತ ಅಧಿಕಾರಿಗಳು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಕೊಟ್ಟರು ಇದುವರೆಗೂ ಯಾವದೇ ರೀತಿ ಕ್ರಮ ತೆಗೆದುಕೊಂಡಿರುವದಿಲ್ಲ ಉತ್ತರ ಕರ್ನಾಟಕ ಹೆಬ್ಬಾಗಿಲು ಆದ ಈ ಭಾಗದಲ್ಲಿ ಹಲವಾರು ಪುಣ್ಯ ಕ್ಷೇತ್ರಗಳು ಹುಲಿಕಟ್ಟಿ ಐರಣಿ ಮೆಡ್ಲೇರಿ ಇನ್ನೂ ಹಲವಾರು ಈ ಒಂದು ಪುಣ್ಯ ಕ್ಷೇತ್ರಗಳಿಗೆ ಹೋಗಲು ಮಾಕನೂರು ಕ್ರಾಸ್ ಗೆ ಇಳಿದು ಮತ್ತೆ ಬೇರೆ ಬಸಗಳಿಗೆ ಹತ್ತಲು ಮಾಕನೂರು ಕ್ರಾಸ್ ಗೆ ಇಳಿಯಲು ಬಸ್ ಕಂಡಕ್ಟರ್ ಸ್ಟಾಫ್ ಕೇಳಿದರೆ ಇಲ್ಲಿಗೆ ಸ್ಟಾಪ್ ಇರುವದಿಲ್ಲ ಇಲ್ಲಿಗೆ ಸ್ಟೇಜ್ ಪಾಂಟ್ ಸಹ ಇರುವದಿಲ್ಲ ಎಂದು ಕುಮಾರಪಟ್ಟಣಕ್ಕೆ ಇಳಿಸುತ್ತಾರೆ ಮತ್ತೆ ಅಲ್ಲಿಂದ ಮಾಕನೂರು ಕ್ರಾಸ್ ಗೆ 15 ರಿಂದ ಇಪ್ಪತ್ತು ರೂಪಾಯಿ ಕೊಟ್ಟು ಆಟೋಗೆ ಬರಬೇಕಾದ ಪರಿಸ್ಥಿತಿ ಪ್ರಯಾಣಿಕರದ್ದು ಆಗಿದೆ ಹೆಣ್ಣುಮಕ್ಕಳಿಗೆ ಸ್ಟಾಪ್ ಇಲ್ಲ ಗಂಡು ಮಕ್ಕಳಿಗೆ ಸ್ಟಾಪ್ ಇದೆ ಅಂತ ಸಾರ್ವಜನಿಕವಾಗಿ ಹೇಳಿದ್ದಾರೆ ಗಂಡು ಮಕ್ಕಳಿಗೆ ಒಂದು ನ್ಯಾಯ ಹೆಣ್ಣು ಮಕ್ಕಳಿಗೆ ಒಂದು ನ್ಯಾಯ ಇನನ್ನು ಹೇಳೋರೋ ಕೇಳೋರು ಯಾರು ಇಲ್ಲವೊ ಎಂದು ಮಹಿಳೆಯರು ಸರ್ಕಾರಕ್ಕೆ ಇಡಿ ಶ್ಯಾಗ ಹಾಕತೊಡಗಿದ್ದಾರೆ.

ತಾಲೂಕ ಅಧ್ಯಕ್ಷರು ಚಂದ್ರಪ್ಪ ಬಣಕಾರ ಮಾತನಾಡಿ ಮಾಕನೂರು ಕ್ರಾಸ್ ಇವತ್ತು ಸುಮಾರು 15 ಹಳ್ಳಿಯ ಸಂಪರ್ಕ ಹೊಂದಿರುವ ಸ್ಥಳವಾಗಿದೆ ಈ ಭಾಗದಿಂದ ದಾವಣಗೆರೆ ಚಿಗಟೇರಿ ಆಸ್ಪತ್ರೆ ಶಿವಮೊಗ್ಗ ಮಂಗಳೂರು ಮಣಿಪಾಲ್ ಆಸ್ಪತ್ರೆ ಹಾಗೂ ಸರ್ಕಾರಿ ಕಚೇರಿಗೆ ಹೋಗುವವರು ವಿದ್ಯಾರ್ಥಿಗಳು ಸ್ಕೂಲ್ ಕಾಲೇಜ್ ಮಾರುಕಟ್ಟೆಗೆ ಹೋಗುವ ರೈತರು ಕೂಲಿ ಕಾರ್ಮಿಕರು ಸರ್ಕಾರಿ ಕಚೇರಿಗೆ ಹೋಗುವ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗೆ ತೆರಳುವ ಸೂಕ್ತ ಜಾಗವಾಗಿದೆ ಹಾಗೂ ಈ ಭಾಗವದ ರಾಣೇಬೆನ್ನೂರ ಹಾವೇರಿ ಹುಬ್ಬಳ್ಳಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಸರಕಾರಿ ಕಚೇರಿಗೆ ವಿದ್ಯಾರ್ಥಿಗಳು ಸ್ಕೂಲ್ ಕಾಲೇಜ್ ಕೋರ್ಟ್ ಕಛೇರಿಗೆ ತೆರಳಲು ಸಾಕಷ್ಟು ಪ್ರಯಾಣಿಕರು ಕೂಲಿ ಕಾರ್ಮಿಕರು ರೈತರು ಮಾರುಕಟ್ಟೆಗೆ ತೆರಳುವ ಸೂಕ್ತ ಜಾಗ ವಾಗಿರುವದರಿಂದ ಮಹಿಳೆಯರು ಮಕ್ಕಳು ವಯಸ್ಸಾದ ವೃದ್ಧರು ವಿಶೇಷಚೇತನರಿಗೆ ಬಸ್ ಗೆ ಹೋಗಲು ತುಂಬಾ ತೊಂದರೆ ಯಾಗುತ್ತಿದೆ ಆದ ಕಾರಣ ಡಿಪೋ ಮ್ಯಾನೇಜರ್ ದಯವಿಟ್ಟು ಮಾಕನೂರು ಕ್ರಾಸ್ ಗೆ ಬರುವಂತ ರಾಣೇಬೆನ್ನೂರು ಡಿಪೋ ಹಾವೇರಿ ಡಿಪೋ ಹುಬ್ಬಳ್ಳಿ ಡಿಪೋ ಮತ್ತು ದಾವಣಗೆರೆ ಡಿಪೋ ಹರಿಹರ ಡಿಪೋದಿಂದ ಬರುವಂತಹ ಬಸ್ಸುಗಳಿಗೆ ಮಾಕನೂರು ಕ್ರಾಸ್ ಗೆ ನಿಲ್ಲಿಸಲು ಸೂಚನೆ ನೀಡಿ ಈ ಒಂದು ಕ್ರಾಸ್ ಗೆ ಕೋರಿಕೆಯ ನಿಲುಗಡೆ ಎಂದು ನಾಮಫಲಕ ಹಾಕಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇವೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಂಡರು.1) ರಾಣೇಬೆನ್ನೂರಿನಿಂದ ಹಿರೇಬಿದರಿ ಗ್ರಾಮಕ್ಕೆ ಯಚ್ಚುವರಿ ಬಸ್ ಬಿಡುವ ಕುರಿತು
2) ತಿಮ್ಮನಕಟ್ಟಿ ಗ್ರಾಮದ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮಾಡುವ ಕುರಿತು ಹೊಸದಾದ ಶೌಚಾಲಯ ಮಾಡುವ ಕುರಿತು ಕುಡಿಯುವ ನೀರಿನ ಸಮಸ್ಯ ಕುರಿತು
3)ದೇವರಗುಡ್ಡದ ರಾಜ್ಯ ಹೆದ್ದಾರಿಯಲ್ಲಿ ಬಸ್ ತುಂಗದಾಣ ಮಾಡುವ ಕುರಿತು
4) ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಶೌಚಾಲಯ ಸ್ವಚ್ಛತೆ ಕುರಿತು ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಶೌಚಾಲಯ ನೋಡಿಕೊಳ್ಳುವ ಸಿಬ್ಬಂದಿಗಳು ಹೆಚ್ಚು ಹಣ ಪಡೆಯುತ್ತಿದ್ದಾರೆ ಅಂತವರ ಮೇಲೆ ಕ್ರಮ ತೆಗೆದುಕೊಳ್ಳುವ ಕುರಿತು ಇನ್ನು ಹೆಚ್ಚು ವಿಷಯಗಳ ಕುರಿತು ಚರ್ಚಿಸಲಾಯಿತುಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರು ಸಿದ್ದರೋಡ ಗುರುo ರಾಜ್ಯ ಸಂಚಾಲಕರು ಮಲ್ಲಿಕಾರ್ಜುನ ಸಾವಕ್ಕಳವರ ಜಿಲ್ಲಾ ಅಧ್ಯಕ್ಷರು ಪರಶುರಾಮ ಕುರುವತ್ತಿ ರಾಜ್ಯ ಯುವ ಘಟಕದ ಉಪಾಧ್ಯಕ್ಷರು ಆನಂದ ಲಮಾಣಿ ಉಪಸ್ಥಿತರಿದ್ದರು.