ವಿದ್ಯಾರ್ಥಿಗಳ ಬಳಗದ ಹಳೆಯ ನೆನಪುಗಳು…

ನನ್ನ ಶಾಲೆ ನನ್ನ ಹೆಮ್ಮೆ ಶಾಲೆಯ ಹೆಮ್ಮೆಯ ವಿದ್ಯಾರ್ಥಿ,

ಹಾವೇರಿ ಜಿಲ್ಲೆಯ : ರಾಣೆಬೆನ್ನೂರು ತಾಲೂಕಿನ : ಕವಲೆತ್ತು ಗ್ರಾಮದಲ್ಲಿರುವ ದಿ||ಎಂ.ಎಸ್. ಪಾಟೀಲ್ ಪ್ರೌಢಶಾಲೆಯ 1996-97 ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳಿಂದ “ಗುರುವಂದನ ಮತ್ತು ಸ್ನೇಹ ಸಮ್ಮಿಲನ” ಕಾರ್ಯಕ್ರಮ ಇದೇ ಜೂನ್ 13, 2026ರ ಶನಿವಾರದಂದು ಬಹಳ ಅದ್ದೂರಿಯಾಗಿ ನೆರವೇರಿತು. ತಾವುಗಳೇ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ 30 ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಾಜಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಹಾಗೂ ಅಂದು ವಿದ್ಯೆ ಕಲಿಸಿದಂತಹ ಗುರುಗಳು ಮತ್ತು ಗುರು ಮಾತೆಯರು ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಅತೀ ಉತ್ಸಾಹದಿಂದ ಭಾಗವಹಿಸಿದ್ದು ತುಂಬಾ ವಿಶೇಷವಾಗಿತ್ತು ಈ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿಗಳಾದ “ಶ್ರೀಯುತ ಅನಿಲ್ ಕುಮಾರ್ ಚವ್ಹಾಣ”. ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಈ ಶಾಲೆಯ ಮಾಜಿ ವಿದ್ಯಾರ್ಥಿ ಮತ್ತು ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಅರುಣ್ ಕುಮಾರ್ ಪೂಜಾರ ಭಾಗವಹಿಸಿದ್ದರು.

ಹಳೆಯ ವಿದ್ಯಾರ್ಥಿಗಳು ಮತ್ತು ಹಳೆಯ ಗುರುಗಳು ಈ ಕಾರ್ಯಕ್ರಮದಲ್ಲಿ ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ 30 ವರ್ಷಗಳ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಎಲ್ಲರೂ ಭಾವುಕರಾದರು. ವಿದ್ಯೆ ಕಲಿಸಿಕೊಟ್ಟ ಪ್ರತಿಯೊಬ್ಬ ಗುರುಗಳಿಗೂ ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಿ, ಗೌರವಿಸಿ ಅತ್ಯಂತ ಭಕ್ತಿಯಿಂದ ಗುರುವಂದನೆಯನ್ನು ಸಮರ್ಪಿಸಲಾಯಿತು. ಶಾಲೆಯಲ್ಲಿರುವ ಎಲ್ಲಾ ಮಕ್ಕಳಿಗೂ ಸೇರಿದಂತೆ ಎಲ್ಲರಿಗೂ ಹೋಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು, ಪ್ರೌಢಶಾಲೆಯ ಪ್ರಸ್ತುತ ಮುಖ್ಯೋಪಾಧ್ಯಾಯರಾದ ಶ್ರೀಯುತ ಹನುಮಂತಪ್ಪ.ಜಿ ಆರ್. ಹಿರಿಯ ಶಿಕ್ಷಕರಾದ ಶ್ರೀಯುತ ವೆಂಕಟೇಶ್ ಲಮಾಣಿ, ಶ್ರೀ ಕೃಷ್ಣಪ್ಪ ಚವ್ಹಾಣ. ಶ್ರೀ ಮುತ್ತಪ್ಪ ತಳವಾರ ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಕಾರ್ಯಕ್ರಮದ ನಿರೂಪಣೆಯನ್ನು ಹಳೆಯ ವಿದ್ಯಾರ್ಥಿನಿಯಾದ ಶ್ರೀಮತಿ ಜಯಶೀಲ ಓಲೆಕಾರ್ ಇವರು ನಡೆಸಿಕೊಟ್ಟರು, ಹಳೆಯ ವಿದ್ಯಾರ್ಥಿಯಾದ ಶ್ರೀ ವಿಜಯಕುಮಾರ್ ಹಿತ್ತಲಮನಿ ಇವರು ಸ್ವಾಗತಿಸಿದರು, ಮತ್ತು ಹಳೆಯ ವಿದ್ಯಾರ್ಥಿನಿಯಾದ ಶ್ರೀಮತಿ ರೇಣುಕಾ ಸಾಲಕಟ್ಟಿ ಇವರು ವಂದಿಸಿದರು.