ಪೋಲಿಸರ್ ಮೇಲೆ ಅನುಮಾನ ವ್ಯಕ್ತಪಡಿಸಿದ ಸ್ವಾತಿ ಸಂಬಂಧಿ,,,!
ನ್ಯಾಯ ಸಮ್ಮತವಾಗಿ ಸಿಗುತ್ತೇ ಅನ್ನುವುದೇ ಅನುಮಾನ ಎಂದರು,,,,,
ಹಾವೇರಿ ಜಿಲ್ಲಾ : ರಾಣೆಬೆನ್ನೂರು ಆಸ್ಪತ್ರೆಯೊಂದರ ಶುಶೂಷಕಿ ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣದ ಆರೋಪಿ ನಯಾಜ್‌ಗೆ ಹಲಗೇರಿ ಠಾಣೆಯ ಸೆಲ್‌ನಲ್ಲಿ ಅವಕಾಶ ನೀಡಲಾಗಿದ್ದು, ಪೊಲೀಸರ ಈ ವರ್ತನೆಗೆ ನ್ಯಾಯ ಸಮ್ಮತವಾಗಿ ಸಿಗುತ್ತೇ ಅನ್ನುವುದೇ ಅನುಮಾನ ಎಂದರು,,,,,ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾತಿ ದೊಡ್ಡಪ್ಪ ಅವರು ಹಲಗೇರಿ ಠಾಣೆಗೆ 12ರಂದು ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ನಯಾಜ್ ಸೆಲ್‌ನಲ್ಲಿಯೇ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಅದನ್ನು ಗಮನಿಸಿದ್ದ ದೊಡ್ಡಪ್ಪ, ಪೊಲೀಸರನ್ನು ಪ್ರಶ್ನಿಸಿದ್ದರು. ಅದಕ್ಕೆ ಪೊಲೀಸರು ಸರಿಯಾಗಿ ಸ್ಪಂದಿಸಿಲ್ಲ.
ಈ ಬಗ್ಗೆ ಪ್ರಜಾವಾಣಿ ಜೊತೆ ಮಾತನಾಡಿದ ರಾಜಪ್ಪ ಬ್ಯಾಡಗಿ, ‘ನನ್ನ ಮಗಳು ಸ್ವಾತಿ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಸರಿಯಾಗಿ ಮಾಡುತ್ತಿಲ್ಲ. ಅವರ ತನಿಖೆ ಮೇಲೆ ಅನುಮಾನವಿದೆ. ಸ್ವಾತಿ ಸಾವಿಗೆ ನ್ಯಾಯ ಸಿಗಬೇಕು. ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರಿನಲ್ಲಿರುವ ಸ್ವಾತಿ ಮನೆಗೆ ಶುಕ್ರವಾರ ಭೇಟಿ ನೀಡಿದ್ದಾರೆ. ಅವರ ಬಳಿಯೂ ಸಂಬಂಧಿಕರು, ಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.