ಗಗನ ಯಾತ್ರಿ ಸುನಿತಾ ಮರಳಿ ಭೂತಾಯಿ ಮಡಿಲಿಗೆ, ವಿದ್ಯಾರ್ಥಿಗಳಿಂದ ಸಂಭ್ರಮ
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಪಟ್ಟಣದ ಸ್ಕೂಲ್ ಚಂದನದ ವಿದ್ಯಾರ್ಥಿಗಳು ಬುಧವಾರ ಶಾಲಾ ಅಂಗಳದಲ್ಲಿ ಸೇರಿ ಗಗನಯಾತ್ರಿಗಳು ಸುರಕ್ಷಿತವಾಗಿ ಭೂತಾಯಿ ಮಡಿಲಿಗೆ ಆಗಮಿಸಿದ್ದಕ್ಕೆ ಸಂಭ್ರಮ ವ್ಯಕ್ತಪಡಿಸಿದರು. ನೂರಾರು ಮಕ್ಕಳು ಸುನೀತಾ ಹಾಗೂ ಅವರ ಸಂಗಡಿಗ ಯಾತ್ರಿಗಳಿಗೆ ಶುಭಕೋರುವ ನಿಟ್ಟಿನಲ್ಲಿ ಪರಸ್ಪರ ಅಭಿನಂದಿಸಿ ಸುನೀತಾ ಅವರ ಹೆಸರಿನಲ್ಲಿ ಜಯಘೋಷಗಳನ್ನು ಮೊಳಗಿಸಿದರು.ಶಾಲಾ ವಿದ್ಯಾರ್ಥಿಗಳು ೯ ತಿಂಗಳ ನಂತರ ಬಾಹ್ಯಾಕಾಶ ಗರ್ಭದಿಂದ ಭೂತಾಯಿಯ ಮಡಿಲಿಗೆ ಸೇರಿದ ಗಗನಯಾತ್ರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿ, ಸುನಿತಾ ಅವರು ಭೂಮಿಗೆ ಬರುತ್ತಿದ್ದಂತೆ, ಅವರು ಭೂಮಿಗೆ ಮರಳಿ ಬರುವಲ್ಲಿ…