
ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡೆಸಿಕೊಳ್ಳಿ : ಅರ್ಷಾದ
ವೀರಮಾರ್ಗ ನ್ಯೂಜ್ ಶಿಗ್ಗಾವಿ : ವಿದ್ಯಾರ್ಥಿಗಳು ತಾವು ಪಡೆದ ಕೌಶಲ್ಯವನ್ನೇ ಸದುಪಯೋಗ ಪಡೆಸಿಕೊಂಡು ಉದ್ಯಮಿಯಾಗಿ, ಉದ್ಯೋಗ ನೀಡಿ, ನಿರೂದ್ಯೋಗ ಸಮಸ್ಯಯನ್ನು ಹೋಗಲಾಡಿಸುವಂತೆ ಸಂಪನ್ಮೂಲ ವ್ಯಕ್ತಿ ಮಹಮ್ಮದ ಅರ್ಷಾದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ತಾಲೂಕಿನ ಗುಡ್ಡದಚೆನ್ನಾಪುರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು, ಸ್ವಯಂ ಉದ್ಯೋಗ ಪ್ರಾರಂಭಿಸಲು ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಸಬ್ಸಿಡಿ ನೀಡುವುದರಮೂಲಕ ದನಸಹಾಯ ಕಲ್ಪಿಸಲಾಗುತ್ತಿದೆ. ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡೆಸಿಕೊಂಡು ಸ್ವಯಂ ಉದ್ಯೋಗ ಪ್ರಾರಂಭಿಸಿ ಉದ್ಯಮಿ ಯಾಗಿ, ಯುವಸಮೂಹಕ್ಕೆ ಉದ್ಯೋಗ ಅವಕಾಶ…