ಎರಡನೇ ದಿನಕ್ಕೆ ಕಾಲಿಟ್ಟ ಲಾರಿ ಮುಷ್ಕರ

ಎರಡನೇ ದಿನಕ್ಕೆ ಕಾಲಿಟ್ಟ ಲಾರಿ ಮುಷ್ಕರ
ವೀರಮಾರ್ಗ ನ್ಯೂಸ್ ಬೆಂಗಳೂರು :
ಲಾರಿ ಚಾಲಕರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಸಾರಿಗೆ ಸಚಿವರು ಹಾಗೂ ಸಿಎಂ ಜೊತೆ ನಡೆದ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರೆಸಲು ಲಾರಿ ಮಾಲೀಕರು ತೀರ್ಮಾನಿಸಿದ್ದಾರೆ.
ನಿನ್ನೆ ನಡೆದ ಸಭೆಯಲ್ಲಿ ಸಾರಿಗೆ ಸಚಿವರು ಆರ್‌ಟಿಒ ಚೆಕ್ ಪೋಸ್ಟ್ ಬಗ್ಗೆ ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳ ಬಗ್ಗೆ ಅಧ್ಯಯನ ಮಾಡ್ತವೆ ಅಂದಿದ್ದರು. ಸಿಎಂ ಜೊತೆ ಸಭೆಯಲ್ಲಿ ಡಿಸೇಲ್ ಹಾಗೂ ಟೋಲ್ ಬಗ್ಗೆ ಮನವಿ ಮಾಡಿದ್ದರೂ ಅವರು ಯಾವುದೇ ಭರವಸೆ ನೀಡದ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರೆಸಲು ತೀರ್ಮಾನಿಸಿದ್ದೇವೆ ಎಂದು ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಖಪ್ಪ ತಿಳಿಸಿದ್ದಾರೆ.
ನಾವು ಹೋರಾಟದಿಂದ ಹಿಂದೆ ಹೋಗಲ್ಲ, ನಮ್ಮ ಹೋರಾಟ ಮುಂದುವರೆಯುತ್ತದೆ. ಆಟೋರಿಕ್ಷಾದಂತೆ ಲಾರಿ ಮಾಲೀಕರಿಗೆ ಬಾಡಿಗೆ ದರ ಫಿಕ್ಸ್ ಮಾಡಿ. ಡಿಸೇಲ್ ದರ ಎಷ್ಟಾದ್ರೂ ಏರಿಸಿ ಎಂದು ಷಣ್ಮುಖಪ್ಪ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಚಾಲಕರ ಈ ಪಟ್ಟಿನಿಂದ ಪೆಟ್ರೋಲ್, ಡಿಸೇಲ್ ಟ್ಯಾಂಕರ್ಗಳ ಸಂಚಾರ ಸ್ಥಗಿತವಾಗುವ ಸಾಧ್ಯತೆಗಳಿವೆ. ಹೊರ ರಾಜ್ಯಗಳಿಂದ ತರಕಾರಿ, ಸೊಪ್ಪು ಸೇರಿದಂತೆ ಅನೇಕ ದಿನನಿತ್ಯ ಬಳಕೆ ಪದಾರ್ಥಗಳು ಬರುವುದು ನಿಂತಿದೆ. ಇತ್ತ ಪೆಟ್ರೋಲ್ ಬಂಕ್‌ಗಳಲ್ಲಿ ನಾಳೆಯಿಂದ ಪೆಟ್ರೋಲ್ ಸಿಗೋದು ಡೌಟಾಗಿದೆ.
ಇನ್ನೂ ರೈತರು ಬೆಳೆದ ತರಕಾರಿಗಳು, ಹಣ್ಣು, ಹೂಗಳು ಸರಕು ಸಾಗಣೆ ವಾಹನ ಇಲ್ಲೆ ಹಳ್ಳಿಗಳಲ್ಲಿ ಕೊಳಿತ್ತಿದೆ. ಈಗಾಗಲೇ ರಾಜ್ಯದಲ್ಲಿ ಅಕಾಲಿಕ ಮಳೆ ಇದರಿಂದ ತರಕಾರಿ, ಹೂ, ಹಣ್ಣುಗಳ ಬೆಳೆ ನಾಶವಾಗುತ್ತಿದೆ. ಇತ್ತ ಬೆಳೆದ ಬೆಳೆ ಮಾರಾಟ ಮಾಡಲು ಟ್ರಾನ್ಸ್‌ಪೋಟ್ ೯ ಮುಷ್ಕರ ಮುಂದುವರೆದಿರುವುದು ರೈತರನ್ನು ಕಂಗೆಡಿಸಿದೆ.

Leave a Reply

Your email address will not be published. Required fields are marked *