ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಕೆಆರ್ಎಸ್ ಪಕ್ಷದ ಅಭ್ಯರ್ಥಿ ನಿಶಾಂತ್ ಬಂಕಾಪುರ ಸ್ಪರ್ಧೆ.
ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಮತಯಾಚನೆ.
ವೀರಮಾರ್ಗ ನ್ಯೂಸ್ : ರಾಜ್ಯ ವಿಧಾನಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ವತಿಯಿಂದ ಸ್ನಾತಕೋತ್ತರ ಕೃಷಿ ಪದವೀಧರರಾದ ನಿಶಾಂತ್ ಶಂಕರ ಬಂಕಾಪೂರ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಹಿರೇಕೆರೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಬಳಿಕ ಹಿರೇಕೆರೂರಿನ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ,ಅಲ್ಲಿನ ಪದವೀಧರ ಅಧಿಕಾರಿಗಳು ಹಾಗೂ ನೌಕರರನ್ನು ಸಂಪರ್ಕಿಸಿ ಚುನಾವಣೆಯಲ್ಲಿ ತಮ್ಮ ಬೆಂಬಲ ನೀಡುವಂತೆ ಮತ್ತು ಪ್ರಥಮ ಪ್ರಾಶಸ್ತ್ಯದ ಮತವನ್ನು ಚಲಾಯಿಸುವಂತೆ ಮನವಿ ಮಾಡಲಾಯಿತು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಮುಖಂಡ ನಿರುಪಾದಿ ಕೆ ಗೋಮರ್ಸಿ ಅವರು
ಪಶ್ಚಿಮ ಪದವೀಧರರ ಕ್ಷೇತ್ರವು ಉತ್ತರ ಕನ್ನಡ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳನ್ನು ಒಳಗೊಂಡಿದ್ದು, ಈ ನಾಲ್ಕು ಜಿಲ್ಲೆಗಳ ಪದವೀಧರ ಮತದಾರರು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.ಅಭ್ಯರ್ಥಿಯ ಶೈಕ್ಷಣಿಕ ಹಿನ್ನೆಲೆ, ಪದವೀಧರರ ಸಮಸ್ಯೆಗಳ ಕುರಿತು ಅವರ ನಿಲುವುಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳನ್ನು ಪರಿಗಣಿಸಿ ಮತದಾನದ ನಿರ್ಧಾರ ಕೈಗೊಳ್ಳುವಂತೆ ಹಾಗೂ
ಪದವೀಧರರ ಸಮಸ್ಯೆಗಳು, ಉದ್ಯೋಗಾವಕಾಶಗಳು, ಶಿಕ್ಷಣ ಕ್ಷೇತ್ರದ ಸವಾಲುಗಳು ಹಾಗೂ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳು ಈ ಚುನಾವಣೆಯಲ್ಲಿ ಮಹತ್ವ ಪಡೆದಿವೆ. ಆದ್ದರಿಂದ ಈ ಚುನಾವಣೆ ಕೇವಲ ಪದವೀಧರರ ವಿಚಾರ ಮಾತ್ರವಲ್ಲ; ರಾಜ್ಯದ ಜನರ ಹಿತಾಸಕ್ತಿಗೂ ಸಂಬಂಧಿಸಿದ ಮಹತ್ವದ ಚುನಾವಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ನಂತರ ತಾಲೂಕಿನ ತಾಲೂಕ ಕಚೇರಿ,ನ್ಯಾಯಾಲಯ ,ತಾಲೂಕು ಪಂಚಾಯಿತಿ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ,ಕೃಷಿ ಇಲಾಖೆ, ಪೊಲೀಸ್ ಠಾಣೆ, ವಲಯ ಅರಣ್ಯ ಇಲಾಖೆ, ಡಿಗ್ರಿ ಕಾಲೇಜ್ ಸೇರಿದಂತೆ ಅನೇಕ ಕಚೇರಿಗಳಿಗೆ ಭೇಟಿ ನೀಡಿ ಪದವೀಧರ ಮತದಾರರು ಮತ್ತು ಸರ್ಕಾರಿ ನೌಕರರು ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸಿ,ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಅಶೋಕ್ ಗೌರಕ್ಕನವರ್, ಉಪಾಧ್ಯಕ್ಷರಾದ ಪ್ರಕಾಶ್ ಬೂದೆರ್, ಕಾರ್ಯದರ್ಶಿಗಳಾದ ಮಂಜಪ್ಪ,ಗುಡ್ಡಪ್ಪ, ನಿಂಗಪ್ಪ,ಕುಮಾರ್ ,ವಸಿಂ ಸೇರಿದಂತೆ ಅನೇಕರು ಭಾಗವಹಿಸಿದ್ದರು.