ಇಂದಿನಿಂದ ಶ್ರೀ ಹೊಂಡದ ದುರ್ಗಾದೇವಿ ಜಾತ್ರಾಮಹೋತ್ಸವ

ಇಂದಿನಿಂದ ಶ್ರೀ ಹೊಂಡದ ದುರ್ಗಾದೇವಿ ಜಾತ್ರಾಮಹೋತ್ಸವ
ವೀರಮಾರ್ಗ ನ್ಯೂಸ್ ಶಿಗ್ಗಾವಿ :
ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಶ್ರೀ ಹೊಂಡದ ದುರ್ಗಾದೇವಿ ಜಾತ್ರಾಮಹೋತ್ಸವ, ಧರ್ಮಸಭೆ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ಏ.1 ರಿಂದ ಏ.4 ರ ವರೆಗೆ ನಡೆಯಲಿವೆ.


ಏ.೧ ಮಂಗಳವಾರ ಪ್ರಾಥ:ಕಾಲ ಶ್ರೀ ದೇವಿಗೆ ಉಡಿತುಂಬುವ ಕಾರ್ಯಕ್ರಮ, ಫಲ್ಲಕ್ಕಿ ಮಹೋತ್ಸವ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ನೂತನ ಶ್ರೀ ದುರ್ಗಾದೇವಿ ಉತ್ಸವ ಮೂರ್ತಿಯ ಮೇರವಣಿಗೆ ಅರಳೆಲೆಮಠದ ರೇವಣಸಿದ್ದೇಶ್ವರ ಶ್ರೀಗಳು ಕೆಂಡದಮಠದ ಶ್ರೀ ಶಿವಪುತ್ರಯ್ಯ ಸ್ವಾಮಿಜಿ ಚಾಲನೆ ನೀಡುವರು. ಏ.೨ ಬುಧವಾರ ಸಂಜೆ 6 ಗಂಟೆಗೆ ನಡೆಯಲಿರುವ ಧರ್ಮ ಸಭೆಯ ಸಾನಿಧ್ಯವನ್ನು ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಜಿ ಶಿಗ್ಗಾವಿ ವೀರಕ್ತಮಠದ ಶ್ರೀ ಸಂಗನಬಸವ ಸ್ವಾಮಿಜಿ, ಕೆಂಡದಮಠ ಶ್ರೀ ಸಿದ್ಧಯ್ಯ ಸ್ವಾಮಿಜಿ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಯಾಸೀರಹಮ್ಮದ ಖಾನ ಪಠಾಣ, ಹುಬ್ಬಳ್ಳಿ ವಿಭಾಗದ ಹೇಸ್ಕಾಂ ಅಧ್ಯಕ್ಷ ಅಜೀಮ್‌ಫೀರ ಖಾದ್ರಿ ಆಗಮಿಸುವರು.

ನಂತರ ತಡಕೋಡದ ಚೈತನ್ಯ ಸಾಂಸ್ಕೃತಿಕ ಕಲಾತಂಡದವರಿಂದ ನೃತ್ಯ, ರಸಮಂಜರಿ ಕಾರ್ಯಕ್ರಮ ನಡೆಯಲಿವೆ. ಏ 3 ಗುರುವಾರ ಹಾಗು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ರಾಜ್ಯಮಟ್ಟದ ಭಾರಿ ಜಂಗೀ ಬಯಲು ಕುಸ್ತಿಗಳು ನಡೆಯಲಿವೆ. ಗುರುವಾರ ಸಂಜೆ 6 ಗಂಟೆಗೆ ನಡೆಯಲಿರುವ ಧರ್ಮಸಭೆಯ ಧಿವ್ಯ ಸಾನಿಧ್ಯವನ್ನು ದೇಸಾಯಿಮಠದ ಶ್ರೀ ಮಹಾಂತಸ್ವಾಮಿಗಳು ಹಾವೇರಿ ಸಿಂಧಗಿಮಠದ ಶ್ರೀ ಶಿವಾನಂದ ಸ್ವಾಮಿಜಿ, ಹತ್ತಿಮತ್ತೂರಿನ ಶ್ರೀ ನಿಜಗುಣ ಶಿವಯೋಗಿಗಳು ವಹಿಸುವರು. ನಂತರ ಚಿತ್ತರಗಿಯ ಶ್ರೀ ಕುಮಾರ ವಿಜಯ ನಾಟಕ ಸಂಘದವರಿಂದ ಸಂದಿಮನಿ ಸಂಗವ್ವ ನಾಟಕ ಪ್ರದರ್ಶನ ವಾಗಲಿದೆ. ಏ.4 ಶುಕ್ರವಾರ ಸಂಜೆ ನಡೆಯಲಿರುವ ಧರ್ಮಸಭೆಯ ಸಾನಿಧ್ಯವನ್ನು ಕಾಗಿನೆಲೆ ಸೂ ಕ್ಷೇತ್ರದ ಶ್ರೀ ನಿರಂಜನಾನಂದಪುರಿ ಸ್ವಾಮಿಜಿ ವಹಿಸುವರು. ಭೂದಾನಿ ಮಹದೇವಿ ಹರವಿ ಅಧ್ಯಕ್ಷತೆ ವಹಿಸಿವರು. ಹಾವೇರಿ ಲೋಕಸಭೆ ಸದಸ್ಯ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯಮಾನ್ಯ ಪ್ರತಿಷ್ಠಿತರು ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *