
ಮನುಷ್ಯ ಪರಿಸರದ ಶಿಶು : ಡಾ. ತೋಂಟದ ಸಿದ್ಧರಾಮಶ್ರೀಗಳು
ವೀರಮಾರ್ಗ ನ್ಯೂಸ್ ಗದಗ: ಪರಿಸರ ಜನಜೀವನದ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ಪರಿಸರ ಕಲುಷಿತಗೊಂಡರೆ, ಮನುಷ್ಯನ ಮನುಸ್ಸು ಕಲುಷಿತವಾಗುವುದು. ಮನುಷ್ಯ ಪರಿಸರದ ಶಿಶು ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.ಲಿಂಗಾಯತ ಪ್ರಗತಿಶೀಲ ಸಂಘದ 2738 ನೆಯ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನೀರು ಜೀವಜಲ. ಜೀವನಾಧಾರ. ಪ್ರಸ್ತುತ ನೀರು ಮಲಿನವಾಗುತ್ತಿದೆ. ಮಲಿನವಾದ ನೀರು ಹೊಳೆ ಹಳ್ಳಗಳಿಗೆ ಸೇರುತ್ತಿದೆ. ಇದಕ್ಕೆಲ್ಲಾ ಕಾರ್ಖಾನೆಗಳು ಕಾರಣ. ಉದ್ದಿಮೆದಾರರು ಮಲಿನವಾದ ನೀರನ್ನು ಸಂಸ್ಕರಿಸಿ ನದಿಗಳಿಗೆ ಬಿಡಬೇಕು. ಆದರೆ ಅದು ಆಗುತ್ತಿಲ್ಲ….