ಖಾಸಗಿ ಬಸ್ ಹಾಗೂ ಟಿಪ್ಪರ್ ಮುಖಾಮುಖಿ
ತಪ್ಪಿದ ಭಾರಿ ಅನಾಹುತ, ಗದಗ ಜಿಮ್ಸ್‌ಗೆ ಗಾಯಾಳುಗಳು ದಾಖಲು

ಲಕ್ಷ್ಮೇಶ್ವರ : ಮರಳು ಖಾಲಿ ಮಾಡಿಕೊಂಡು ಸವಣೂರ ಕಡೆಯಿಂದ ಲಕ್ಷ್ಮೇಶ್ವರ ಬರುತ್ತಿದ್ದ ಟಿಪ್ಪರ ಹಾಗೂ ಗದಗ ದಿಂದ ಬೆಂಗಳೂರು ಕಡೆ ಹೊರಟಿದ್ದ ಖಾಸಗಿ ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕೆಲವರು ತೀವ್ರ ಗಾಯಗೊಂಡಿರುವ ಘಟನೆ ಜರುಗಿದೆ.
ಜೂ.13, 2025ರ ರಾತ್ರಿ 10.30ರ ಸುಮಾರಿಗೆ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಟಿಪ್ಪರ ಚಾಲಕ ಹಾಗೂ ಬಸ್ ಚಾಲಕಹಾಗೂ ಇಬ್ಬರು ಪ್ರಯಾಣಿಕರಿಗೆ ಪಟ್ಟಣದ ಸರಕಾರಿ ಆಸ್ಪತ್ರೆ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆ ಗದಗ ಜಿಮ್ಸ್ ದಾಖಲಾಗಿದ್ದಾರೆ.
ರಾತ್ರಿಯ ವೇಳೆಯಲ್ಲಿ ಈ ಘಟನೆ ನಡೆದಿದ್ದು, ಪಟ್ಟಣದ ಅಗಡಿ ಇಂಜನೀಯರಿoಗ್ ಕಾಲೇಜ್ ಹತ್ತಿರ ಈ ಮುಖಾಮುಖಿ ಸಂಭವಿಸಿದ್ದು, ಖಾಸಗಿ ಬಸ್ ಮುಂದೆ ಕಾರ್ ಒಂದು ಹೋಗುತ್ತಿದ್ದು, ಈ ವೇಳೆ ಲಕ್ಷ್ಮೇಶ್ವರ ಕಡೆ ವೇಗವಾಗಿ ಬರುತ್ತಿದ್ದ ಬಂದ ಟಿಪ್ಪರ ಚಾಲಕನು ಕಾರ್‌ಗೆ ಡಿಕ್ಕಿ ಹೊಡೆಯುವದನ್ನು ಸ್ವಲ್ಪದರಲ್ಲಿಯೇ ತಪ್ಪಿದ್ದು, ಎದುರಿಗೆ ಬಂದ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಬಸಕ್ಕೆ ಟಿಪ್ಪರ ಕಂದಕಕ್ಕೆ ಬಿದಿದ್ದು, ಬಸ್ ಮೇಲಿನ ಸ್ಲೀಪರ್ ಕೋಚ ಕಿಟಗಿ ಗ್ಲಾಸ್‌ಗಳು ಹೊಡೆದಿದ್ದು ಬಸ್ ಬಲಬಾಗ ನುಜ್ಜು ಗುಜ್ಜಾಗಿದೆ.

ಟಿಪ್ಪರ ಚಾಲಕ ಕುಳಿತು ಕೊಳ್ಳುವ ಜಾಗ ಡಿಕ್ಕಿಯ ಹಿನ್ನಲೆಯಲ್ಲಿ ನುಜ್ಜು ಗುಜ್ಜಾಗಿದ್ದು, ಟಿಪ್ಪರ ಚಾಲಕ ಬಸಾಪೂರ ಗ್ರಾಮದ ಸದ್ಯ ಆದರಳ್ಳಿಯಲ್ಲಿ ವಾಸವಾಗಿರುವ ಸಂತೋಷ ಲಕ್ಷಣ ಪೂಜಾರ(೨೪) ಎಂದು ತಿಳಿದು ಬಂದಿದೆ. ಈತನಿಗೆ ಬಲ ಗಾಲು ಮುರಿದಿದ್ದು, ಮೊಣಕಾಲು ಮೆಲ್ಬಾಗ, ಎದೆಗೆ ಪೆಟ್ಟು ಬಿದ್ದಿದ್ದೆ, ಅದರಂತೆ ಖಾಸಗಿ ಬಸ್ ಚಾಲಕ ಸುರೇಶ ರಾಮಚಂದ್ರಪ್ಪ ಈತನಿಗೂ ಪಕ್ಕಡಿಗೆ ಹಾಗೂ ಮುಖಕ್ಕೆ ಗ್ಲಾಸ್ ಸಿಡಿದು ಗಾಯಗಳಾಗಿವೆ. ಬಸ್‌ಲಲ್ಲಿ ೩೫ ಕ್ಕೂ ಅಧಿಕ ಪ್ರಯಾಣಿಕರಿದ್ದು ಅದರಲ್ಲಿ ಇಬ್ಬರು ಪ್ರಯಾಣಿಕರಾದ ಅಮಿತ ರಾಜಣ್ಣ ದೇವರ ಅಂಗಡಿಗೆ ಬಲಗೈ ಮುರಿದಿದ್ದು, ಹಣೆಗೆ ಬಲ ಗಲ್ಲಕ್ಕೆ ಹಾಗೂ ಕಣ್ಣಿನ ಹತ್ತಿರ ಗಾಯವಾಗಿದೆ, ಶಶಿಧರ ಶರಣಯ್ಯ ಶಿರೂರಮಠ, ಬಲಗೈ ಮೊಣಕೈ ಬಗಲು ಮೇಲೆ ಗಾಯವಾಗಿದ್ದು, ಬಲಕಾಲಿಗೆ ಪೆಟ್ಟಬಿದ್ದಿದೆ ಯಾವುದೆ ಪ್ರಾಣಹಾನಿಯಾಗಿಲ್ಲ. ಬೆಂಗಳೂರು ಹೊರಟ್ಟಿದ್ದ್ ಬಸ್ ಪ್ರಯಾಣಿಕರನ್ನು ಬೇರೆ ಬಸ್ ಮೂಲಕ ಬೆಂಗಳೂರು ಕಳಿಸಿ ಕೊಡಲಾಯಿತು, ಪಟ್ಟಣದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
