ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಮನೆಯಲ್ಲಿ ಆಗಾಗ ತಲೆದೋರು ತ್ತಿರುವ ಆರ್ಥಿಕ ಸಮಸ್ಯೆಗೆ ಪೂಜೆಯ ಮೂಲಕ ಪರಿಹರಿ ಸುತ್ತೇವೆ ಎಂದು ಆರ್ಥಿಕ ಸಂಕಷ್ಟದಿಂದ ನರಳುತ್ತಿ ರುವವರ ಮನೆಗೆ ಪೂಜಾರ್ಥಿಗಳ ವೇಷದಲ್ಲಿ ಬಂದು ಮನೆಯಲ್ಲಿ ಪೂಜೆ ನಡೆಸುವ ನೆಪದಲ್ಲಿ ಪೂಜೆಗಿಟ್ಟಿದ್ದ ಚಿನ್ನದ ಆಭರಣಗಳನ್ನು ದೋಚಿದ್ದ ಕಳ್ಳರನ್ನು ಬಂಧಿಸಿಸುವಲ್ಲಿ ಇಲ್ಲಿನ ಗ್ರಾಮಾಂತರ ಠಾಣೆಯ ಪೋಲಿಸರು ಯಶಸ್ವಿ ಯಾಗಿದ್ದಾರೆ,
ಇಸ್ಮಾಯಿಲ್ ಜಬಿವುಲ್ಲಾ(30), ಓಡಿಸ್ಸಾ ರಾಜ್ಯದ ಜಗತ್ ಸಿಂಗ್ ಪುರದ ನಿವಾಸಿ ಟೈಲರ್ ಕೆಲಸ ಮಾಡುವ ರುಕ್ಸಾನ ಬೇಗಂ (30)ಬಂಧಿತ ಆರೋಪಿಗಳು. ಕಳೆದ 4 ದಿನಗಳ ಹಿಂದೆ ಫೆ.11ರಂದು ತಾಲೂಕಿನ ಬನ್ನಿಕೊಡು ಗ್ರಾಮದ ಶಶಿಕಲಾ ರಮೇಶ್ ಎಂಬುವವರ ಮನೆಗೆ ಸಂಜೆ-ಯ ಸಮಯದಲ್ಲಿ ಈ ಇಬ್ಬರು ಆರೋಪಿಗಳು, ನಿಮ್ಮ ಮನೆಯಲ್ಲಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಿ, ನಿಮ್ಮ ಆರ್ಥಿಕ ಸಮಸ್ಯೆಗೆ ನಾವು ಪರಿಹಾರ ನೀಡುತ್ತೇವೆ. ನಿಮ್ಮ ಮನೆಯಲ್ಲಿರುವ ಬೆಳ್ಳಿ, ಚಿನ್ನಾಭರಣಗಳನ್ನು ಪೂಜೆಯಲ್ಲಿಡಬೇಕೆಂದು
ಪೂಜಾರ್ಥಿಗಳ ಸೋಗಿನಲ್ಲಿ ಬಂದು ತಿಳಿಸಿದ್ದಾರೆ. ಪೂಜೆಗಿಟ್ಟಿದ್ದ 1.44 ಲಕ್ಷ ರೂ. ಮೌಲ್ಯದ 2 ತೊಲ, 2 ಗ್ರಾಂ ಚಿನ್ನಾಭರಣ ದೋಚಿದ್ದಾರೆ ಎಂದು ಬನ್ನಿಕೋಡು ಗ್ರಾಮದ ಶಶಿಕಲಾ ರಮೇಶ್ ನೀಡಿದ ದೂರಿನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಹರಿಹರ ಗ್ರಾಮಾಂತರ ಠಾಣೆ-ಯ ಪೊಲೀಸರು, ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಸಂತೋಷ ಬಿ.ಮಂಜುನಾಥ್, ಗ್ರಾಮಾಂತರ ಡಿಎಸ್ಪಿ ಬಿ.ಎಸ್.ಬಸವರಾಜ ತನಿಖೆ ನಡೆಸಿದ್ದರು. ಮಾರ್ಗದರ್ಶನದಲ್ಲಿ
ಗ್ರಾಮಾಂತರ ಸಿಪಿಐ ಸುರೇಶ ಸಗರಿ ನೇತೃತ್ವದಲ್ಲಿ ಪಿಎಸ್‌ಐ ಮಂಜುನಾಥ ಎಸ್.ಕುಪ್ಪೇಲೂರು, ತನಿಖಾಧಿಕಾರಿ ಮಹದೇವ ಸಿದ್ದಪ್ಪ ಭತ್ತೆ 5 ದಿನ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳನ್ನು ಒಡಿಸ್ಸಾ ರಾಜ್ಯದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹರಿಹರ ಗ್ರಾಮಾಂತ ರದಲ್ಲಿ 2 ಪ್ರಕರಣ, ದಾವಣಗೆರೆ ಅಜಾದ್ ನಗರದಲ್ಲಿ 1 ಪ್ರಕರಣದಲ್ಲಿ ಇವರ ಹೆಸರು ಪತ್ತೆ
ಆಗಿದೆ.ವರದಿ : ಶಶಿಧರ್ ದಾವಣಗೆರೆ.