ವೀರಮಾರ್ಗ ನ್ಯೂಸ್ : ವಿಜಯಪುರ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದೆ. ಹಳೆಯ ಆಸ್ತಿ ವಿವಾದ ಹಾಗೂ ವೈಷಮ್ಯದ ಹಿನ್ನೆಲೆಯಲ್ಲಿ, ದುಷ್ಕರ್ಮಿಗಳ ತಂಡವೊಂದು ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಒಂದೇ ಕುಟುಂಬದ ಆರು ಜನರನ್ನು ಬರ್ಬರವಾಗಿ ಕೊಲೆ ಮಾಡಿದೆ. ಈ ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಭೀಮಾ ನದಿ ತೀರದ ಗೋವಿಂದಪುರ ಗ್ರಾಮದಲ್ಲಿ ನಡೆದಿದ್ದು, ಇಡೀ ಜಿಲ್ಲೆಯನ್ನು ನಡುಗಿಸಿದೆ.
ಚಡಚಣ ಪಟ್ಟಣದ ಒಂದೇ ಕುಟುಂಬಕ್ಕೆ ಸೇರಿದ ದುಂಡಪ್ಪ ನಿರಾಳೆ (65), ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ (55), ರಾಹುಲ್ ನಿರಾಳೆ (25), ಸಮರ್ಥ ನಿರಾಳೆ (23) ಮತ್ತು ಇವರ ಜತೆಗಿದ್ದ ಶಬ್ಭೀರ್ ಅತ್ತಾರ (45) ಕೊಲೆಯಾದ ದುರ್ದೈವಿಗಳು. ದಾಳಿಯಲ್ಲಿ ಅರವಿಂದ ಕಟಗಿ (72) ಮತ್ತು ಸಂದೀಪ ಮಾನೆ (23) ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಏನಿದು ವಿವಾದ? ಕೊಲೆಗೆ ಅಸಲಿ ಕಾರಣವೇನು?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಭೀಕರ ಕೃತ್ಯಕ್ಕೆ 25 ಎಕರೆ ವಿವಾದಿತ ಜಮೀನು ಖರೀದಿಯೇ ಮೂಲ ಕಾರಣ ಎನ್ನಲಾಗಿದೆ.
ಗೋವಿಂದಪುರ ಗ್ರಾಮದ ಶಶಿಕಾಂತ ತೇಲಿ ಎಂಬುವವರ ಕುಟುಂಬಕ್ಕೆ ಸೇರಿದ ಸುಮಾರು 25 ಎಕರೆ ಜಮೀನನ್ನು ಚಡಚಣದ ನಿರಾಳೆ ಕುಟುಂಬದವರು ಆರು ತಿಂಗಳ ಹಿಂದೆ ಖರೀದಿಸಿದ್ದರು. ಆದರೆ, ಈ ಜಮೀನಿನ ಮೇಲೆ ಕಣ್ಣಿಟ್ಟಿದ್ದ ಗೋವಿಂದಪುರದ ಕಲ್ಲನಗೌಡ ಈಶ್ವರಗೌಡ ಪಾಟೀಲ ಮತ್ತು ಆತನ ಕಡೆಯವರು, “ಈ ವಿವಾದಿತ ಜಮೀನನ್ನು ಖರೀದಿಸಬೇಡಿ” ಎಂದು ನಿರಾಳೆ ಕುಟುಂಬಕ್ಕೆ ಮೊದಲೇ ಎಚ್ಚರಿಕೆ ನೀಡಿದ್ದರು. ಆ ಬೆದರಿಕೆಯನ್ನು ಲೆಕ್ಕಿಸದೆ ನಿರಾಳೆ ಕುಟುಂಬ ಜಮೀನು ಖರೀದಿಸಿತ್ತು.
ಹೊಲ ಸ್ವಚ್ಛಗೊಳಿಸುವಾಗ ಮುಗಿಬಿದ್ದ 20 ಜನರ ಗ್ಯಾಂಗ್!
ಹಳೆಯ ಕೊಲೆ ಪ್ರಕರಣವೊಂದರ ಬಳಿಕ ತೇಲಿ ಕುಟುಂಬದವರು ಊರು ಬಿಟ್ಟು ಹೋಗಿದ್ದರಿಂದ, ಕಳೆದ 15 ವರ್ಷಗಳಿಂದ ಈ 25 ಎಕರೆ ಜಮೀನು ಉಳುಮೆ ಇಲ್ಲದೆ ಪಾಳು ಬಿದ್ದಿತ್ತು. ಜಮೀನು ಖರೀದಿಸಿದ್ದ ನಿರಾಳೆ ಕುಟುಂಬದವರು ಶುಕ್ರವಾರ ಟ್ರ್ಯಾಕ್ಟರ್ ಹಾಗೂ ಜೆಸಿಬಿ ಮೂಲಕ ಹೊಲವನ್ನು ಸ್ವಚ್ಛಗೊಳಿಸಿ, ಕೃಷಿಗೆ ಸಜ್ಜುಗೊಳಿಸುತ್ತಿದ್ದರು.
ಈ ವಿಷಯ ತಿಳಿದ ಆರೋಪಿ ಪಾಟೀಲನ ಕಡೆಯ 15 ರಿಂದ 20 ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ಹೊಲದ ಮೇಲೆ ದಾಳಿ ನಡೆಸಿದೆ. ತಕ್ಷಣವೇ ಕಣ್ಣಿಗೆ ಖಾರದ ಪುಡಿ ಎರಚಿ, ಕತ್ತಲಾವರಿಸುವಂತೆ ಮಾಡಿ, ಬಳಿಕ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಕೊಚ್ಚಿ ಆರು ಜನರನ್ನು ಸ್ಥಳದಲ್ಲೇ ಹೆಣ ಮುಗಿಸಿದ್ದಾರೆ.
ಇದರ ಹಿಂದೆ ಇದೆಯಾ ಹಳೇ ಹತ್ಯೆಯ ಲಿಂಕ್?
ಈ ಕೃತ್ಯದ ಹಿಂದೆ ದೊಡ್ಡದೊಂದು ಫ್ಲ್ಯಾಶ್‌ಬ್ಯಾಕ್ ಇದೆ. ಈ ಹಿಂದೆ ಗೋವಿಂದಪುರದ ಕಲ್ಲನಗೌಡ ಪಾಟೀಲ ಅವರ ಪುತ್ರ ಶಿವಾನಂದ ಎಂಬುವವರು ಅದೇ ಊರಿನ ಶಶಿಕಾಂತ ತೇಲಿ ಅವರ ಪುತ್ರಿಯನ್ನು ಅಪಹರಿಸಿದ್ದರು. ಇದರಿಂದ ಕೆರಳಿದ ತೇಲಿ ಕುಟುಂಬದವರು ಶಿವಾನಂದ ಅವರನ್ನು ಕೊಲೆ ಮಾಡಿದ್ದರು. ಈ ಕೊಲೆ ಕೇಸ್‌ನಲ್ಲಿ ತೇಲಿ ಕುಟುಂಬ ಸದ್ಯ ಶಿಕ್ಷೆ ಅನುಭವಿಸುತ್ತಿದೆ. ಅವರು ಊರು ಬಿಟ್ಟಿದ್ದರಿಂದ ಜಮೀನು ಖಾಲಿ ಇತ್ತು. ಅದನ್ನು ಬೇರೆ ಯಾರೂ ಕೊಳ್ಳದಂತೆ ಪಾಟೀಲ ಕುಟುಂಬ ತಡೆದಿತ್ತು. ಆದರೆ ನಿರಾಳೆ ಕುಟುಂಬ ಇದನ್ನು ಖರೀದಿಸಿದ್ದೇ ಇಷ್ಟೆಲ್ಲಾ ರಕ್ತಪಾತಕ್ಕೆ ಕಾರಣವಾಗಿದೆ.
“ಆರೋಪಿಗಳ ಪತ್ತೆಗಾಗಿ ಪೊಲೀಸರು ಈಗಾಗಲೇ ಜಾಲ ಬೀಸಿದ್ದು, ತನಿಖೆ ತೀವ್ರಗೊಂಡಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಸ್ಥಳದಲ್ಲಿ ಸದ್ಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಭೀಮಾತೀರದಲ್ಲಿ 6 ಜನರ ಹತ್ಯೆ: ಆಸ್ತಿ ವಿವಾದಕ್ಕೆ ಕಣ್ಣಿಗೆ ಖಾರದ ಪುಡಿ ಎರಚಿ ಒಂದೇ ಕುಟುಂಬದವರ ಬರ್ಬರ ಹತ್ಯೆ!
ಅನಾಥಾಶ್ರಮಗಳು ವೃದ್ದಾಶ್ರಮಗಳು ನಿರಾಶ್ರಿತರ ಆಶ್ರಯ ತಾಣಗಳು ಅಂದ್ರೇನೆ ದೇವಸ್ಥಾನಗಳಿಗಿಂತಲೂ ಹೆಚ್ಚು ಪ್ರಾಮುಖ್ಯತೆ ಕೊಡ್ತೀವಿ ಹಿಂದೆ ಮುಂದೆ ಯೋಚಿಸದೆ ಸಹಾಯಧನ ಮಾಡ್ತೀವಿ. ಇವುಗಳನ್ನ ನಡೆಸ್ತಿರೋರಿಗೂ ಅಷ್ಟೇ ಸಿಕ್ಕಾಪಟ್ಟೆ ರೆಸ್ಪೆಕ್ಟ್ ಕೊಡ್ತೀವಿ. ಇದು ನಮ್ಮ ಅಂದ್ರೆ ಪಬ್ಲಿಕ್ ನ ವೀಕ್ನೆಸ್ಸು… ನಂಬಿಕೆ ಎಲ್ಲವೂ ಕೂಡ…
ಇಂತಹ ಮನಸ್ಥಿತಿ ಇಟ್ಕೊಂಡಿರುವ ನಂಬಿಕೆಗೆ ದ್ರೋಹ ಬಗೆದರೆ ಆಗುವ ಕೋಪ ಚಿಕ್ಕದೇನಲ್ಲ…
ಮೊದಮೊದಲು ಆಸರೆ ಫೌಂಡೇಶನ್ ಬೆರಳೆಣಿಕೆಯ ವೃದ್ದರಿಂದ ಶುರುವಾದ ಈ ಆಸರೆ ಫೌಂಡೇಶನ್ ನ ಫೌಂಡರ್ ಲಯನ್ ಜಯರಾಜ್ ಎನ್ನುವವರು. ಈತನಿಗೆ ಒಂದು ಕಾಲು ಇಲ್ಲದ ಕಾರಣ ಈ ದಾರಿ ಹಿಡಿದಿರಬಹುದು ಹೋಗಲಿ ಬಿಡಿ ನಿರಾಶ್ರಿತರಿಗೆ ಆಶ್ರಯ ಕೊಡ್ತಿರೋದು ಒಳ್ಳೆಯ ಕೆಲಸವೆ ಅಂತ ಎಷ್ಟೋ ಜನರು ತಮ್ಮ ತಮ್ಮ ಕೈಲಾದಷ್ಟು ಸೇವೆ ಸಹಾಯ ಮಾಡಿದ್ದಾರೆ ಮಾಡುತ್ತಲೂ ಇದ್ದಾರೆ ಇದರಲ್ಲಿ ನೀವೂ ಕೂಡ ಒಬ್ಬರಾಗಿರಬಹುದು…
ಆದರೆ ಕೆಲ ತಿಂಗಳುಗಳ ಹಿಂದೆಯಷ್ಟೇ ಈ ಆಸರೆ ಫೌಂಡೇಶನ್ ನ ಮೇಲೆ “ಇದು ಕೇವಲ ವೃದ್ದಾಶ್ರಮ ಅಂತ ರಿಜಿಸ್ಟರ್ ಆಗಿದ್ರೂ ಇಲ್ಲಿ ಮಕ್ಕಳು ವಯಸ್ಕರು ಯಾಕೆ ಇದ್ದಾರೆ…” ಅಂತ ಒಂದು ಆರೋಪ ಬರುತ್ತೆ. ಹೌದು ನಿಜ ವಯಸ್ಕರು ಮಕ್ಕಳು ಕೂಡ ಇಲ್ಲಿರುವುದು ಸತ್ಯ ಆದರೂ ಆಶ್ರಯ ಲಭಿಸ್ತಿದೆಯಲ್ಲ ಒಳ್ಳೇದೆ ಅಂತ ಕೆಲವರ ಅಭಿಪ್ರಾಯ ಆಗಿತ್ತು ನಂದೂ ಕೂಡ ಸೇಮ್ ಥಿಂಕಿಂಗ್ ಆಗಿತ್ತು… ಇರಲಿ
ಆದರೆ ಮೊನ್ನೆ ಮೊನ್ನೆ ತಾನೆ ತಿಳಿದ ವಿಚಾರ ಏನಂದ್ರೆ ” ವಯಸ್ಕ ಮಹಿಳೆಯರು ವಯಸ್ಸಿನ ಹೆಣ್ಣು ಮಕ್ಕಳೊಂದಿಗಿನ ಈತನ GIVE and TAKE ಪಾಲಿಸಿ…
ಏನಪ್ಪಾ ಇವನ ಈ “give and take” ಪಾಲಿಸಿ ಅಂದ್ರೆ ನಾನು ನಿಮಗೆ ಆಶ್ರಯ ಕೊಟ್ರೆ ನೀವು ನನಗೇನ್ ಕೊಡ್ತಿರ ಅನ್ನೋದು ಅವನ ಬಾಯಿಯಿಂದಲೇ ಬಂದಿರುವುದು. ಅಂದ್ರೆ ನಾನು ನಿಮಗೆ ಆಶ್ರಯ ಕೊಟ್ರೆ ಇದರ ಬದಲಿ ನೀವು ನನಗೆ ಸಹಕರಿಸಬೇಕು ನಾನು ಯಾವಾಗ ಹೇಳ್ತಿನೋ ಆವಾಗ ಬಟ್ಟೆ ಬಿಚ್ಚಬೇಕು” ಅನ್ನೋದು ಇವನ ಪಾಲಿಸಿ ಅಂತೆ…
ಇದಕ್ಕೆ ಒಪ್ಪದ ಹೆಣ್ಣು ಮಕ್ಕಳನ್ನ ಆಶ್ರಮದಿಂದ ದೂರಲ್ಪಡ್ತಿದ್ದ. ಇದಕ್ಕೆ ಹೆದರಿ ಕೆಲವು ಹೆಣ್ಣು ಮಕ್ಕಳು ಇವನು ಹೇಳಿದಂತೆ ನಡ್ಕೊತಿದ್ರಂತೆ. ಬಲವಂತದ ಈ ಘಟನೆಯನ್ನ ಹೆಣ್ಣು ಮಕ್ಕಳಿಗೆ ತಿಳಿಯದಂತೆ ವಿಡಿಯೋ ರೆಕಾರ್ಡಿಂಗ್ ಮಾಡ್ಕೊಂಡು ಬ್ಲಾಕ್ ಮೇಲ್ ಮಾಡಿ ತನ್ನ ಹಲ್ಕಟ್ ಕೆಲಸಗಳನ್ನ ಈಡೇರಿಸಿಕೊಳ್ತಿದ್ದ ಈ ಧನಧಾಹಿ ಕಾಮುಕ ಲಯನ್ ಜಯರಾಜ…
ಅಲ್ಲದೆ ಇವನ ಮನೆಗೆ ಮನೆಕೆಲಸಕ್ಕೆ ಅಂತಾನೆ ಪ್ರತಿದಿನ ಒಂದಷ್ಟು ಹೆಣ್ಣು ಮಕ್ಕಳು ಹೋಗಬೇಕು ಅನ್ನೋ ಟೈಮ್ ಟೇಬಲ್ ಕೂಡ ಜಾರಿಯಲ್ಲಿ ಇತ್ತಂತೆ…(ಅದೆಷ್ಟು ಹೆಣ್ಣು ಮಕ್ಕಳ ಜೀವನ ಹಾಳಾಗಿದಿಯೋ ಏನೋ ದೇವರೆ ಬಲ್ಲ…)
ಅಲ್ಲದೆ ಆಶ್ರಯ ಕೋರಿ ಬಂದಂತ ವಯಸ್ಸಾದವರಿಗೆ ಆಶ್ರಯ ಕೊಟ್ಟು ಅವರ ಬಗ್ಗೆ ಕೂಲಂಕುಶವಾಗಿ ತಿಳಿದು ಅವರ ಹೆಸರಿನಲ್ಲಿ ಏನಿದೆಯೋ ಅದನ್ನೆಲ್ಲ ಫೇಕ್ ಕಾಗದ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಹಣ ಆಸ್ತಿ ಲಪಟಾಯ್ಸಿರೋ ಎಷ್ಟೋ ಆರೋಪಗಳು ಇವನ ಮೇಲಿರುವುದು ಕಂಡುಬಂದಿವೆ…
ವರದಿ: ಚನ್ನೇಶ್ ಕೆ ಎಂ
ಬೆಂಗಳೂರು.