ನಾಪತ್ತೆಯಾಗಿದ್ದ ತಾಯಿ-ಮಗು -ಕೇರಳದ,ಮದರಸವೊಂದರಲ್ಲಿ ಪತ್ತೆ !

ನಾಪತ್ತೆಯಾಗಿದ್ದ ಹಿಂದೂ ತಾಯಿ, ಮಗು -ಕೇರಳದ ಮದರಸವೊಂದರಲ್ಲಿ ಪತ್ತೆ !

ವೀರಮಾರ್ಗ ನ್ಯೂಸ್ : ಲೋಕದಲ್ಲಿ ಬೇರೆ ಎಲ್ಲೂ ಕೆಲಸವೇ ಸಿಗುವುದಿಲ್ಲ ಅನ್ನುವ ಹಾಗೆ ಮುಸ್ಲಿಮರ ಅಂಗಡಿಗಳಲ್ಲೇ ಕೆಲಸಕ್ಕೆ ಸೇರುವ ಹಿಂದುಗಳಿಗೆ ಒಂದು ಪಾಠ ಈ ಘಟನೆ!ಮಡಿಕೇರಿಯಲ್ಲಿ ನಾಪತ್ತೆಯಾಗಿದ್ದ ಹಿಂದೂ ತಾಯಿ, ಮಗು -ಕೇರಳದ ಮದರಸವೊಂದರಲ್ಲಿ ಪತ್ತೆ ! ಲವ್ ಜಿಹಾದ್ ಆರೋಪ.

ಒಂದೂವರೆ ತಿಂಗಳ ಹಿಂದೆ ಕೊಡಗಿನ ಕುಶಾಲನಗರದಿಂದ ನಾಪತ್ತೆಯಾಗಿದ್ದ ಸಚಿತಾ ಹಾಗೂ ಆಕೆಯ 9 ವರ್ಷದ ಮಗು ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ಮದರಸವೊಂದರಲ್ಲಿ ಪತ್ತೆಯಾಗಿದ್ದಾರೆ. ಇದು ಮತಾಂತರ ಹಾಗೂ ಲವ್ ಜಿಹಾದ್‌ನ ದೊಡ್ಡ ಸಂಚು ಎಂದು ಕುಶಾಲನಗರದ ಹಿಂದೂಪರ ಸಂಘಟನೆಗಳು ಆರೋಪಿಸಿವೆ. ಕುಶಾಲನಗರ ಬಳಿಯ ಎನ್‌ಟಿಸಿ ಕಾಂಪ್ಲೆಕ್ಸ್‌ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಚಿತಾ, ಅಂಗಡಿ ಮಾಲೀಕ ಸಲೀಂ ಸಂಪರ್ಕಕ್ಕೆ ಬಂದ ಬಳಿಕ ಗಂಡನನ್ನು ಬಿಟ್ಟು ಮಗುವಿನೊಂದಿಗೆ ತೆರಳಿದ್ದರು ಎಂದು ಆರೋಪಿಸಲಾಗಿದೆ. ಪತ್ನಿ ಕೆಲಸ ಮಾಡುತ್ತಿದ್ದ ಅಂಗಡಿ ಮೇಲೆ ಅನುಮಾನ ವ್ಯಕ್ತಪಡಿಸಿ, ಹಿಂದೂಪರ ಸಂಘಟನೆಗಳ ಸಹಕಾರದೊಂದಿಗೆ ಕುಶಾಲನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಮಹಿಳೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಅಷ್ಟೇ ಅಲ್ಲ ದೇ ಮಗನಿಗೂ ಸುನ್ನತ್ ಮಾಡಿಸಿ ಅವನನ್ನೂ ಮತಾಂತರಗೊಳಿಸಲಾಗಿತ್ತು!!!

ನಟ ವಿನೋಧ್ ಪ್ರಭಾಕರ್ ಗೆ ICU ನಲ್ಲಿ ಚಿಕಿತ್ಸೆ

ನಟ ವಿನೋದ್ ಪ್ರಭಾಕರ್ ಗೆ ಬಿಪಿ ಏರುಪೇರು ಆಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಗರಭಾವಿಯ ಖಾಸಗಿ ಅಸ್ಪತ್ರೆಯಲ್ಲಿ ವಿನೋಧ್ ಪ್ರಭಾಕರ್ ಗೆ ಚಿಕಿತ್ಸೆ ನೀಡಲಾಗ್ತಿದೆ.ಕಾರ್ಡಿಯಾ ಕೇರ್ ನಲ್ಲಿ ವಿನೋದ್ ಪ್ರಭಾಕರ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿನೋದ್ ಪ್ರಭಾಕರ್ ಅವರಿಗೆ ಮನೆಯಲ್ಲಿ ಇದ್ದಾಗಲೇ ವಿನೋದ್ ಪ್ರಭಾಕರ್ ಅರೋಗ್ಯದಲ್ಲಿ ಏರುಪೇರು ಕಾಣಿಸಿದೆ. ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊರಾರ್ಜಿ ವಸತಿ ಶಾಲೆಯ 9ನೇ ತರಗತಿಯ 14 ವರ್ಷದ ಬಾಲಕಿ ಮೂರು ತಿಂಗಳ ಗರ್ಭಿಣಿ…

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರಕ್ಕೊಳಗಾದ 14 ವರ್ಷದ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ.

ಮೊರಾರ್ಜಿ ವಸತಿ ಶಾಲೆಯ 9ನೇ ತರಗತಿಯ 14 ವರ್ಷದ ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ. ಶಿಟ್ಲಘಟ್ಟ ತಾಲೂಕಿನ ಮೊರಾರ್ಜಿ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಳೆ.23 ವರ್ಷದ ಚಂದ್ರು ಬಾಲಕಿ ಮೇಲೆ ಕಳೆದ ಒಂದು ವರ್ಷದಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. ಪೋಷಕರು ಕುರಿ ಮೇಯಿಸಲು ಹೋದಾಗ ಮನೆಗೆ ನುಗ್ಗಿದ ಚಂದ್ರು ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ವರದಿ: ಚನ್ನೇಶ್ ಕೆ ಎಂ
ಬೆಂಗಳೂರು