ಸರ್ಕಾರ ಮೋಡ ಬಿತ್ತನೆ ಕಾರ್ಯಕ್ಕೆ,ಮುಂದಾಗಲಿ,ಶಿಡ್ಲಾಪುರ..

ಸರ್ಕಾರ ಮೋಡ ಬಿತ್ತನೆ ಕಾರ್ಯಕ್ರಮಕ್ಕೆ ಮುಂದಾಗಲಿ: ಭುವನೇಶ್ವರ ಶಿಡ್ಲಾಪುರ

ವೀರಮಾರ್ಗ ನ್ಯೂಸ್ : ಹಾವೇರಿ : ಜೂನ್ ಆರಂಭದಲ್ಲಿ ಅಬ್ಬರಿಸಿದ ಮುಂಗಾರು ಮಳೆ ಎಲ್ ನಿನೋ ಎಫೆಕ್ಟ್ ಎಲ್ಲಿ ಹೋಯಿತು ಮಳೆ? ಮಳೆರಾಯ ಕಣ್ಮರೆಯಾಗಿದ್ದು ರೈತ ಮಳೆಗಾಗಿ ಆಕಾಶದತ್ತ ಮುಖ ಮಾಡಿ ಕುಳಿತಿದ್ದಾನೆ ಮುಂಗಾರು ಬಿತ್ತನೆಗಾಗಿ ಸಾಲ ಮಾಡಿ ಸಂಗ್ರಹಿಸಿ ಬಿತ್ತನೆ ಕಾರ್ಯ ಮಾಡಿದ್ದಾನೆ ಇದೀಗ ರೈತ ಸಂಕಷ್ಟದಲ್ಲಿ ಸಿಲುಕಿದ್ದಾನೆ ಜೂನ್ ತಿಂಗಳ ತಿಂಗಳಲ್ಲಿ ಮಳೆರಾಯ ಕಾಣೆಯಾಗಿದ್ದಾನೆ ಬಿತ್ತಿದ ಬೆಳೆಗಳು ಸೋಯಬಿನ್ ಮೆಕ್ಕೆಜೋಳ ಭತ್ತ ರಾಗಿ ತೊಗರಿ ಉದ್ದು ಹೆಸರು ಅಲಸಂದಿ ಶೇಂಗಾ ಸೂರ್ಯಕಾಂತಿ ಸೇರಿದಂತೆ ವಿವಿಧ ಬೀಜಗಳನ್ನು ಬಿತ್ತನೆ ಮಾಡಿ ರೈತ ಮಳೆಗಾಗಿ ಕಾಯುತ್ತಿದ್ದಾನೆ.

15 ದಿನಗಳಿಂದ ಮಳೆರಾಯ ಕೈಕೊಟ್ಟಿದ್ದಾನೆ ಹಲವಡೆ ಸಸಿಗಳು ಬಾಡಿ ಹೊರಟಿವಿ ರೈತರು ಮತ್ತೆ ಬೀಜ ಗೊಬ್ಬರ ಖರೀದಿ ಮಾಡಿ ಬಿತ್ತುವ ಪರಿಸ್ಥಿತಿ ಬರಬಾರದು ಎನ್ನುವುದಾದರೆ ತಕ್ಷಣವೇ ಸರ್ಕಾರ ಗಳು ಮೂಡಬಿತ್ತನೆ ಮಾಡಿ ಕೃತಕವಾಗಿ ಮಳೆ ಬರುವ ಹಾಗೆ ಮಾಡಬೇಕು ಜಿಲ್ಲೆಯಲ್ಲಿ ನದಿಗಳ ನೀರಿನ ಮಟ್ಟ ಕಾಲಿಯಾಗಿದ್ದು ಮುಂಗಾರುಮಳೆ ಕೈ ಕೊಟ್ಟರೆ ಪ್ರಾಣಿ ಪಕ್ಷಿಗಳಿಗೆ ದನಕರುಗಳಿಗೆ ಗುಂಡಿಯಲ್ಲಿರುವ ನೀರುಗಳು ಬತ್ತಿ ಹೋಗಿವೆ ಜನರಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದೆ ಬರಗಾಲ ಎದುರಾಗುವ ಬೀತಿ ರೈತರಲ್ಲಿ ಮೂಡಿದೆ ಸರ್ಕಾರ ಹಾಗೂ ಜಿಲ್ಲಾಡಳಿತ ಕೃಷಿ ಹಾಗೂ ಕಂದಾಯ ತೋಟಗಾರಿಕೆ ಇಲಾಖೆಗಳು ಪರಿಸ್ಥಿತಿಯನ್ನು ಎದುರಿಸಲು ಈಗಿನಿಂದಲೇ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಗ್ರಹವಾಗಿದೆ.

ಈ ಸಲ ಎಲ್ ನಿನೋ ಎಫೆಕ್ಟ್ ನಿಂದ ಮಳೆ ಕೊರತೆ ಸಾಧ್ಯತೆ ಇದೆ ಜೂನ್ 20ರ ನಂತರ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯವರು ಹೇಳಿದ್ದರು ಅದು ಯಾವ ಮುನ್ಸೂಚನೆಯೂ ಕಂಡುಬರುತ್ತಿಲ್ಲ ಹೀಗಾಗಿ ನೀರಾವರಿ ಲಭ್ಯ ಇರುವ ರೈತರು ಪಿಂಕ್ಲರ್ ಮೂಲಕ ಬೆಳೆಗಳಿಗೆ ನೀರು ಹಾಯಿಸಬೇಕೆಂದರೆ ಬೋರ್ವೆಲ್ ನಲ್ಲಿ ಅಂತರ್ಜಲ ಮಟ್ಟವು ಕಡಿಮೆಯಾಗಿದೆ ಕಬ್ಬಿನ ಬೆಳೆಗಳು ಒಣಗುತ್ತಿವೆ ನದಿಯಲ್ಲಿ ನೀರಿಲ್ಲ ಬೋರ್ವೆಲ್ ಗಳ ಅಂತರ್ಜಲ ಕಡಿಮೆಯಾಗಿ ನೀರು ಹಾಯಿಸುವುದು ಸಹ ಕಷ್ಟಕರವಾಗಿದೆ ಜಿಲ್ಲೆಯ ನದಿಗಳಲ್ಲಿ ನೀರು ಇರುವುದಿಲ್ಲ ತಕ್ಷಣವೇ ರಾಜ್ಯ ಸರ್ಕಾರ ಮೋಡ ಬಿತ್ತನೆಗೆ ಮುಂದಾಗ ಬೇಕೆಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ವಿನಂತಿ ಮಾಡಿಕೊಂಡಿದ್ದಾರೆ.