ವೀರಶೈವ ಲಿಂಗಾಯತರು ಕಾಂಗ್ರೆಸ್ ಬೆಂಬಲಿಸಿ ಲಕ್ಷ್ಮಿ ಹೆಬ್ಬಾಳ್ಕರ್…

ವೀರಶೈವ ಲಿಂಗಾಯತರು ಕಾಂಗ್ರೆಸ್ ಬೆಂಬಲಿಸಿ; ಲಕ್ಷ್ಮಿ ಹೆಬ್ಬಾಳ್ಕರ್

ವೀರಮಾರ್ಗ ನ್ಯೂಸ್ : ದಾವಣಗೆರೆ : ವೀರಶೈವ ಲಿಂಗಾಯತರು ಕಾಂಗ್ರೆಸ್ ಬೆಂಬಲಿಸಬೇಕು, ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆನೀಡಿದರು.
ನಗರದ ಚೇತನಾ ಹೋಟೆಲ್ ಸಭಾಂಗಣದಲ್ಲಿ ನಡೆದ ವೀರಶೈವ ಲಿಂಗಾಯತರ ಸಭೆಯಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಶಾಮನೂರು ಅವರ ಸೇವೆ ಎಂದೂ ಮರೆಯಲು ಸಾದ್ಯವಿಲ್ಲ. ಬೆಳಗಾಮ್ನ ದೇವಾಲಯಕ್ಕೂ ಶಾಮನೂರು ದೇಣಿಗೆ ನೀಡಿದ್ದಾರೆ. ಹಿರಿಯರ ಮಾರ್ಗದರ್ಶನ ಕಿರಿಯ ರಾಜಕಾರಣಿಗಳಿಗೆ ಬೇಕು. ವೀರಶೈವ ಲಿಂಗಾಯತ ಯುವಕರು ತಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕು. ಸಮರ್ಥ್ ತುಂಬಾ ತಿಳಿವಳಿಕೆಯುಳ್ಳವರು. ಅವರಿಗೆ ಎರಡು ವರ್ಷ ಅವಕಾಶ ನೀಡಲು ಎಲ್ಲರೂ ಶ್ರಮಿಸಬೇಕು. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಗ್ಯಾರಂಟಿಯಿಂದ ಎಲ್ಲರಿಗೂ ಅನುಕೂಲವಾಗಿದೆ.
ರಸ್ತೆ, ಸೇತುವೆ ಕಟ್ಟಡ ನಿರ್ಮಾಣದಂತೆ ಬಡ ಜನರ ಜೀವನ ಸುಧಾರಿಸುವುದೂ ಕೂಡ ಅಭಿವೃದ್ದಿ ಎಂದು ಕಾಂಗ್ರೆಸ್ ನಂಬಿದೆ. ಲಿಂಗಾಯತರ ಜತೆ ಕಾಂಗ್ರೆಸ್ ಇದೆ. ಬಸವಣ್ಣ ವಿಚಾರಧಾರೆಯಲ್ಲಿ ಕಾಂಗ್ರೆಸ್ ನಂಬಿಕೆಯಿಟ್ಟಿದ್ದು, ವೀರಶೈವ ಲಿಂಗಾಯತರು ಕಾಂಗ್ರೆಸ್ ಬೆಂಬಲಿಸಬೇಕು ಎಂದರು.
ರೋಣ ಶಾಸಕ ಜಿ.ಎಸ್. ಪಾಟೀಲ್, ಕಾಂಗ್ರೆಸ್ ಪಕ್ಷ ಸಮಾಜದ ನಿರ್ಗತಿಕರ ಬಗ್ಗೆ ವಿಶೇಷ ಕಾಳಜಿ ಹೊಂದಿದೆ. ಸಿದ್ದರಾಮಯ್ಯ ಬಸವಣ್ಣ ಅಭಿಮಾನಿಗಳು‌. ಕಚೇರಿಗಳಲ್ಲಿ ಬಸವಣ್ಣ ಭಾವಚಿತ್ರ ಹಾಕಿಸಿದ್ದು, ಅಕ್ಕ ಮಹದೇವಿ ಯುನಿವರ್ಸಿಟಿ ಮಾಡಿಸಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಬಡವರಿಗೆ ಮಲ್ಲಿಕಾರ್ಜುನ 15000 ಮನೆ ನಿರ್ಮಿಸಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕಾಳಜಿ ಮೆರೆದಿದ್ದಾರೆ ಎಂದು ಸ್ಮರಿಸಿದರು.


ಯುವ ಮುಖಂಡ ಎಚ್.ಎಸ್. ನಾಗರಾಜ್, ಶಿವಪ್ಪ ಮತ್ತು ಶಿವಶಂಕರಪ್ಪ ಜಾತ್ಯಾತೀತ ಭಾವನೆ ಹೊಂದಿದವರು. ಸಮರ್ಥ್ ಅವರು ಎಲ್ಲರನ್ನೂ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ. ಎಲ್ಲರೂ ಐದಾರು ದಿನ ಕೆಲಸ ಮಾಡಿ ಸಮರ್ಥ ಗೆಲ್ಲಿಸಬೇಕು. ಕಾರ್ಯಕರ್ತರು ಹಿಂರಿಯದೆ ಕೆಲಸ ಮಾಡಬೇಕು, ಎಂದರು.
ಅಭ್ಯರ್ಥಿ ಸಮರ್ಥ ಶಾಮನೂರು, ಅಜ್ಜನವರು ತುಂಬಾ ಗಟ್ಟಿಯಿದ್ದರು. ಎಲ್ಲರೂ ತೋರುತ್ತಿರುವ ಪ್ರೀತಿಯಿಂದ ಎಲೆಕ್ಷನ್ ನನಗೆ ಕಷ್ಟ ಎನಿಸಿಲ್ಲ. ನನಗೂ ಒಂದು ಅವಕಾಶ ನೀಡಿದರೆ ನಿಮ್ಮ ಋಣ ತೀರಿಸುವೆ ಎಂದು ಕೋರಿದರ,

ಮಾಜಿ ಶಾಸಕ ಗಡ್ಡದೇವರ ಮಠ,ವಕೀಲರಾದ ಹನುಮಂತಪ್ಪ, ಪ್ರಕಾಶ್ ಪಾಟೀಲ್ ಮಾಜಿ ಉಪ ಮೇಯರ್ ಶಾಂತಕುಮಾರ್, ಮುಖಂಡ ಅರಸೀಕೆರೆ ಕೊಟ್ರೇಶ್ ಮಾತನಾಡಿದರು.

ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಣ್ಣ, ಗೋಪನಾಳ್ ಅಶೋಕ್, ಚಿಕ್ಕ ಮ್ಯಾಗಳಗೇರೆ ಚನ್ನಬಸಪ್ಪ, ಕರ್ನಾಟಕ‌ ಎಕ್ಸ್‌ಪ್ರೆಸ್ ಚಂದ್ರಣ್ಣ, ಬಿ.ಎಚ್ ವೀರಭದ್ರಪ್ಪ,
ವರ್ತಕ ಶಂಕರ್, ಹುಲ್ಮನಿ‌ ಠಾಕೂರ್, ಅಭಿ ಕಾಟನ್ ಬಕ್ಕಣ್ಣ, ಮಲ್ಲಿಕಾರ್ಜುನ ಬಾದಾಮಿ, ಕಾಯಿಪೇಟೆ ಹಾಲೇಶ್, ಅಕ್ಕಿ ರಾಮಚಂದ್ರ,, ಮಟ್ಡಿಕಲ್ ಸ್ವಾಮಿ, ಕ್ಯಾರಕಟ್ಟೆ ಗೌಡರು ಮತ್ತಿತರರು ಇದ್ದರು.