ಮನೆಮನೆಗೆ ಸಿಸಿ ಟಿವಿ – ಮನೆ ಮನೆಗೆ ಸುರಕ್ಷತೆ “

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೆಬೆನ್ನೂರು : ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಇಂದಿನ ಅಗತ್ಯವಿದೆ. ಆಧುನಿಕ ವ್ಯವಸ್ಥೆಯಲ್ಲಿ ಸಾಗುತ್ತಿರುವ ಇಂದಿನ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಮನುಷ್ಯನು ತಮ್ಮ ತಮ್ಮ ವ್ಯಾಪ್ತಿಯಲ್ಲಿ ತಮ್ಮ ಮನೆ ಮಠ ಆಸ್ತಿ ಬಂಗಾರ ಒಡವೆ ಹಣ ರಕ್ಷಿಸಿಕೊಳ್ಳುವುದು ಅಗತ್ಯವಿದೆ ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಮನೆ ವ್ಯಾಪ್ತಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಕಣ್ಣುಗಾವಲು ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಅವರು ಮಂಗಳವಾರ ಇಲ್ಲಿನ ಎಪಿಎಂಸಿ ಸಮುದಾಯ ಭವನದಲ್ಲಿ ನಡೆದ ” ಮನೆ ಮನೆಗೆ ಸಿ ಸಿ ಟಿವಿ – ಮನೆ ಮನೆಗೆ ಸುರಕ್ಷತೆ ” ವಿನೂತನ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ವಿಶೇಷವಾಗಿ ಹಾವೇರಿ ಜಿಲ್ಲೆಯಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ, ಮತ್ತು ಬೆಳವಣಿಗೆ ಕಂಡಿರುವ ಏಕೈಕನಗರ ರಾಣಿಬೆನ್ನೂರು. ಯಾವುದೇ ಜಾತಿ ಮತ ಭೇದ ಭಾವ ಇಲ್ಲಿಲ್ಲ ಇದೊಂದು ಭಾವೈಕ್ಯತೆಯ ಕೇಂದ್ರ ಸ್ಥಾನವಾಗಿದೆ ಇದರಿಂದಾಗಿ ರಾಜ್ಯದ ಬೇರೆ ಬೇರೆ ಮೂಲೆಯಲ್ಲಿದ್ದರೂ ವಾಣಿಜ್ಯ ನಗರದಲ್ಲಿ ಮನೆ ಮಾಡಬೇಕು ಎನ್ನುವ ಹಂಬಲ ನಾಡಿನ ಜನರಲ್ಲಿ ಒಡಮೂಡಿದೆ ಇದು ನಮ್ಮ ನಗರಕ್ಕೆ ಹೆಮ್ಮೆ ಎಂದರು. ಎಂದು ಹರ್ಷ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಅವರು, ಇಲಾಖೆಯ ಆದೇಶ, ಜೊತೆಗೆ ಬಹುಜನರ ಅಪೇಕ್ಷೆ ಹಾಗೂ ನಗರ ಮತ್ತು ತಾಲೂಕಿನ ನಾಗರಿಕರ ಪರಿಪೂರ್ಣ ಸಂರಕ್ಷಣೆಯ ದೃಷ್ಟಿಯನ್ನು ಇಟ್ಟುಕೊಂಡು ಈ ವಿನೂತನ ಯೋಜನೆ ಜಾರಿಗೆ ತರಲಾಗಿದೆ ಇದು ಹಾವೇರಿ ಜಿಲ್ಲೆಯಲ್ಲಿ ಮೊಟ್ಟ ಮೊದಲನೆಯದಾಗಿದೆ ಎಂದರು.


ಡಿ ವೈ ಎಸ್ ಪಿ ಲೋಕೇಶ್ ಜೆ. ಎನ್ ಅವರು ಮಾತನಾಡಿ, ವಾಣಿಜ್ಯ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದವು. ಮನೆಗಳ್ಳತನ, ಚೈನ್ ಕಳ್ಳತನ ಸೇರಿದಂತೆ ಅಕ್ರಮ ಗಾಂಜಾ ಸರಬರಾಜು, ಹಾಗೂ ಮಾರಾಟ ಜಾಲ ಪತ್ತೆ ಮಾಡಿದ್ದೇವೆ. ಅಷ್ಟೇ ವೇಗವಾಗಿ ವಶಪಡಿಸಿಕೊಂಡಿದ್ದೇವೆ.
ಬಹುದೂರ ದೃಷ್ಟಿ ಇಟ್ಟುಕೊಂಡು, ಬಹಳಷ್ಟು ಚರ್ಚೆ ಮಾಡಿ ಈ ಅತ್ಯಂತ ಮಹತ್ವವಾದಂತಹ ಸಿಸಿಟಿವಿ, ಅಳವಡಿಸಿಕೊಳ್ಳಲು, ಸಾರ್ವಜನಿಕರಲ್ಲಿ ಅರಿವು ಜಾಗೃತಿ ಮೂಡಿಸಲು ಮುಂದಾಗಿದ್ದೇವೆ ಪೊಲೀಸ್ ಇಲಾಖೆಯೊಂದಿಗೆ ನಾಗರಿಕರು ಸಹಕರಿಸಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಪಿಎಸ್ಐ, ಎ ಎಸ್ ಐ ಮತ್ತು ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಪೊಲೀಸರು ಉಪಸ್ಥಿತರಿದ್ದರು. ಅರಿವು ಜಾಗೃತಿಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಸಿಸಿ ಟಿವಿ ಕ್ಯಾಮೆರಾ ಉಪಯುಕ್ತ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ಮಾಡಲಾಯಿತು
.