ವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಹೊರಗುತ್ತಿಗೆ ವಾಹನ ಚಾಲಕರು, ಲೋಡರ್ಸ ಹಾಗು ಕಾವಲುಗಾರರು, 3 ತಿಂಗಳ ವೇತನ, ಇ.ಎಸ್.ಐ, ಪಿ.ಎಫ್ ಪಾವತಿಸುವಂತೆ ಒತ್ತಾಯಿಸಿ ಪುರಸಭೆ ಎದರು ಪ್ರತಿಭಟನೆ ನಡೆಸಿದರು.
ನಾವು ಕಂಬ್ಯಾಕ್ ಸೆಕ್ಯೂರಿಟಿ ಪೋರ್ಸ (ಆಸಿಕ್ ನದಾಫ್) ಆಶ್ರಯದಲ್ಲಿ ಹೊರಗುತ್ತಿಗೆ ಪುಸಭೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದು, ನಮಗೆ 3 ತಿಂಗಳ ವೇತನ, 8 ತಿಂಗಳ ಇ.ಎಸ್.ಐ, ಪಿ.ಎಫ್ ಪಾವತಿಸಿರುವುದಿಲ್ಲ. ಈ ವಿಷಯವಾಗಿ ಸಾಕಷ್ಟುಬಾರಿ, ಗುತ್ತಿಗೆದಾರರಲ್ಲಿ, ಹಾಗು ಪುರಸಭೆ ಮುಖ್ಯಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ನಾವು ಆರ್ಥಿಕವಾಗಿ ಅತೀ ಹಿಂದುಳಿದವರಾಗಿದ್ದು, ಕುಟುಂಬ ನಿರ್ವಹಣೆ ಕಷ್ಟಸಾದ್ಯವಾಗಿದೆ. ಪ್ರತಿ ತಿಂಗಳ ಇ.ಎಸ್.ಐ, ಪಿ.ಎಫ್ ಹಣ ಗುತ್ತಿಗೆದಾದರೇ ಭರಿಸಬೇಕಾಗಿದ್ದು, ಎಂಟು ತಿಂಗಳಿಂದ ಇ.ಎಸ್.ಐ, ಪಿ.ಎಫ್ ಹಣ ಪಾವತಿಸಿರುವುದೇ ಇರುವುದರಿಂದ ಪೇನಾಲ್ಟಿ ಸಮೇತ ಇ.ಎಸ್.ಐ, ಪಿ.ಎಫ್ ಹಣವನ್ನು ಗುತ್ತಿಗೆದಾರರು ಭರಿಸಿ, ಮೂರುತಿಂಗಳ ವೇತನವನ್ನು ಕೂಡಲೇ ಬಿಡುಗಡೆಗೋಳಿಸಬೇಕು. ಇಲ್ಲದೇ ಹೋದರೆ ಕೇಲಸವನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟಾವದಿ ಪುರಸಭೆ ಎದರು ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾ ನಿರತರು ತಮ್ಮ ಅಳಲನ್ನು ಪತ್ರಿಕೆ ಎದುರು ತೋಡಿಕೊಂಡರು.

ಈ ಸಂದರ್ಭದಲ್ಲಿ ಸಂಗಪ್ಪ ಮಾದರ, ನಿಂಗಪ್ಪ ಮಾದರ, ಮೈಲಾರಪ್ಪ ಹರಿಜನ, ನೀಲಪ್ಪ ಮಾದರ, ಬಸವರಾಜ ತಳವಾರ, ಮಾಲತೆಶ ಗಿಡ್ಡಣ್ಣನವರ, ಮಾಲತೆಶ ಕಟಗಿ, ಹೊನಕೇರಪ್ಪ ಹಾರೊಗೇರಿ, ಪ್ರಶಾಂತಗೌಡ ಮೂಲಿಗೌಡ್ರ, ದರ್ಮೇಂದ್ರ ಅಸೂಂಡಿ, ನವೀನ ಕಟ್ಟಿಮನಿ, ರಾಜು ಕಟ್ಟಿಮನಿ, ಗುಡ್ಡಪ್ಪ ಕಟ್ಟಿಮನಿ, ಶಿವಪ್ಪ ಕಟ್ಟಿಮನಿ ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು.
ಕೋಟ್ : ಹೊರಗುತ್ತಿಗೆದಾರರ ಹಾಜರಾತಿಯನ್ನು ಕಳುಹಿಸಿಕೊಡಲಾಗಿದೆ. ವೇತನ ಪಾವತಿಸುವ ಜವಾಬ್ದಾರಿ ಗುತ್ತಿಗೆದಾರನದು. ಪ್ರತಿಭಟನೆ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಹೊರಗುತ್ತಿಗೆದಾರರ ಸಮಸ್ಯಯನ್ನು ಪರಿಹರಿಸಲಾಗುವುದು.
- ಶಿವಾನಂದ ಅಜ್ಜಣ್ಣವರ ಪುರಸಭೆ ಮುಖ್ಯಾಧಿಕಾರಿ