ರಾಮತೀರ್ಥ,ಗ್ರಾಮದಲ್ಲಿ, ಕಾರ್ಮಿಕರ ಸಂಘ ಉದ್ಘಾಟನೆ

ರಟ್ಟೀಹಳ್ಳಿ ತಾಲೂಕ ರಾಮತೀರ್ಥ ಗ್ರಾಮದಲ್ಲಿ ಶ್ರೀ ಮಾಯಮ್ಮ ದೇವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಡಾ. ಬಿ.ಆರ್. ಅಂಬೇಡ್ಕರ್ ಗ್ರಾಮ ಸಮಿತಿ ರಾಮತೀರ್ಥ ಗ್ರಾಮದಲ್ಲಿ ಮಾನ್ಯ ಜನಪ್ರಿಯ ಶಾಸಕರು ಶ್ರೀ ಯು ಬಿ ಬಣಕಾರ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಟ್ಟೀಹಳ್ಳಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ಶ್ರೀ ಮಾಯಮ್ಮ ದೇವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ರಿ) ಡಾ. ಬಿ.ಆರ್. ಅಂಬೇಡ್ಕರ್ ಗ್ರಾಮ ಸಮಿತಿ ಯ ನೂತನ ಸಮಿತಿಯ ಉದ್ಘಾಟನಾ ಸಮಾರಂಭ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರೇಕೆರೂರ ಜನಪ್ರಿಯ ಶಾಸಕರು ಶ್ರೀ ಯು ಬಿ ಬಣಕಾರ ಹಾಗೂ ಮಾಜಿ ಶಾಸಕರು ಶ್ರೀ ಬಿ ಎಚ್ ಬನ್ನಿಕೋಡು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರು ಶ್ರೀ ನಿತ್ಯಾನಂದ ಕುಂದಾಪುರ ಗ್ರಾಮದ ಹಿರಿಯ ಮುಖಂಡರು ಹಾಗೂ ಸಮಸ್ತ ಕಾರ್ಮಿಕರೊಂದಿಗೆ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಯಿತು.

ಹಿರೇಕೆರೂರ ಶಾಸಕರು ಯು ಬಿ ಬಣಕಾರ ಮಾತನಾಡಿದ ಅವರು, “ಡಾ. ಬಿ.ಆರ್. ಅಂಬೇಡ್ಕರ್ ಅವರು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ನಾಯಕರು. ಅವರ ಹೆಸರಿನಲ್ಲಿ ಈ ಗ್ರಾಮ ಸಮಿತಿ ರಚಿಸಿರುವುದು ನಮಗೆ ಹೆಮ್ಮೆ. ಕಟ್ಟಡ ಕಾರ್ಮಿಕರೇ ದೇಶದ ನಿಜವಾದ ಶಿಲ್ಪಿಗಳು. ಸರ್ಕಾರದ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಿಗುವ ಕಾರ್ಮಿಕ ಕಾರ್ಡ್, ಇ-ಶ್ರಮ್ ಕಾರ್ಡ್, ಮಕ್ಕಳ ವಿದ್ಯಾಭ್ಯಾಸ ಸಹಾಯಧನ, ಮದುವೆ ಸಹಾಯಧನ, ಹೆರಿಗೆ ಸೌಲಭ್ಯ, ಅಪಘಾತ ಪರಿಹಾರ, ಪಿಂಚಣಿ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಪ್ರತಿ ಕಾರ್ಮಿಕರ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸುವುದೇ ನಮ್ಮ ಮುಖ್ಯ ಉದ್ದೇಶ” ಎಂದು ತಿಳಿಸಿದರು.

ರಾಣೆಬೆನ್ನೂರು ನಗರದ ಊರ ಗ್ರಾಮ ದೇವತೆಯ ಶ್ರೀ ಚೌಡೇಶ್ವರಿ ದೇವಿಯ ಶ್ರೀಮಹಾಲಕ್ಷ್ಮಿಯ ಅವತಾರದಲ್ಲಿ.

ಇದೇ ವೇಳೆ ನೂತನ ಗ್ರಾಮ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಐಡಿ ಕಾರ್ಡ್ ವಿತರಿಸಿ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಗ್ರಾಮದ ನೂರಾರು ಕಟ್ಟಡ ಕಾರ್ಮಿಕರು, ಮಹಿಳಾ ಕಾರ್ಮಿಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಯು ಬಿ ಬಣಕಾರ ಮಾಜಿ ಶಾಸಕರು ಬಿ ಎಚ್ ಬನ್ನಿಕೋಡ ಸ್ವಾಕರವೇ ರಾಜ್ಯಾಧ್ಯಕ್ಷರಾದ ನಿತ್ಯಾನಂದ ಕುಂದಾಪುರ ಸಂಘದ ಜಿಲ್ಲಾ ಅಧ್ಯಕ್ಷರು ಮರಡೆಪ್ಪ ಚಳಗೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೋಭಾ ಮುದೇನೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪರಶುರಾಮ ಕುರುವತ್ತಿ ಜಿಲ್ಲಾ ಖಜಾಂಚಿ ಚಂದ್ರಪ್ಪ ಬಣಕಾರ ಎ ಕೆ ಪಾಟೀಲ ಕಾರ್ಜುನ್ ಬುರುಡುಕಟ್ಟಿ ಗಂಗನಗೌಡ ಪಾಟೀಲ್ ಆನಂದ ಲಮಾಣಿ ಕೃಷ್ಣ ವೇಷಗಾರ ರೇವಣಸಿದ್ದಪ್ಪ ಪಾಟೀಲ್ ಗ್ರಾಮ ಪಂಚಾಯತಿ ಸಮಸ್ತ ಮುಖಂಡರು ಕಾರ್ಮಿಕರ ಸದಸ್ಯರು ಜಮೀರಾಹ್ಮದ ಬಡಗಿ ಜಪರ್ ಸಾದಿಕ್ ಬುಕಿಟಗಾರ ಇಂಗಾದ ರಟ್ಟೀಹಳ್ಳಿ ಜಾಹಾರುದ್ದಿನ ಜಾಮ್ಕಾನಿ ಕಲಿಲಹ್ಮದ್ ಜಾಮ್ಕಾನಿ ಇರ್ಪನ್ ಬಟ್ಟಿ ತಹಿರ್ ಜಂಬೂ ಜಬಿವುಲ್ಲಾ ಬಡಗಿ ಬಷೀರ್ಹಮದ ಹುಸೂರ್ ಮದರಖಾನ ಬಡಗಿ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.