ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ ವೆಡಿಯೋ ವೈರಲ್: 7 ಮಂದಿ ಕಾಮಪಿಶಾಚಿಗಳ ವಿಕೃತಿ, ಆರೋಪಿಗಳ ಬಂಧನ,,,!
ವೀರಮಾರ್ಗ ನ್ಯೂಸ್ : ಕೊಪ್ಪಳ : ಪ್ರೀತಿಸುವ ನಾಟಕವಾಡಿ ಅಮಾಯಕ ಶಾಲಾ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೃತ್ಯದ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳಿಂದ ಬಾಲಕಿಗೆ ನರಕಯಾತನೆ ನೀಡುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಕೊಪ್ಪಳ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತರನ್ನು ಕಿರಣ್ ಕುಮಾರ್ ತೊಂಡಿಹಾಳ, ಹರ್ಷ ಪೊಲೀಸ್ ಪಾಟೀಲ್, ರಮೇಶ್ ಚಿಪ್ಪವರ, ಮಲ್ಲಪ್ಪ ಹರಿಜನ, ಸಿದ್ದಲಿಂಗಪ್ಪ ವಾಲ್ಮೀಕಿ, ಕಿರಣ ಕುಮಾರ ಆಧೋನಿ ಹಾಗೂ ಫಕೀರಪ್ಪ ಧರ್ಮಾಪುರ ಎಂದು ಗುರುತಿಸಲಾಗಿದೆ.
ಬಾಲಕಿಯು ಕೊಪ್ಪಳದ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಗ ಪ್ರೀತಿಸುವುದಾಗಿ ನಂಬಿಸಿದ ಯುವಕನೊಬ್ಬ ದೈಹಿಕ ಸಂಬಂಧ ಬೆಳೆಸಿ, ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದನು. ನಂತರ ಆ ವಿಡಿಯೋವನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದನು. ಬಳಿಕ 2025ರ ಅಕ್ಟೋಬರ್ 10ರಂದು ಬಾಲಕಿ ಬಸ್ ಸ್ಟ್ಯಾಂಡ್‌ನಲ್ಲಿ ನಿಂತ ಆರೋಪಿ ಹರ್ಷಾ ಬೈಕ್‌ನಲ್ಲಿ ಬಂದು ಮಾತನಾಡಿಸಿ ಜೂಸ್ ಕುಡಿಸಿದ್ದಾನೆ.
ಆರೋಪಿ ಹರ್ಷಾ ಬೈಕ್‌ನಲ್ಲಿ ಬಂದು ಮಾತನಾಡಿಸಿ ಜೂಸ್ ಕುಡಿಸಿದ್ದಾನೆ. ಜೂಸ್‌ನಲ್ಲಿದ್ದ ಅಮಲಿನಿಂದ ಬಾಲಕಿ ಪ್ರಜ್ಞೆ ತಪ್ಪುತ್ತಿದ್ದಂತೆ, ಮಂಗಳಾಪೂರ ಕ್ರಾಸ್ ಹತ್ತಿರದ ನಿರ್ಜನ ಕಂಟಿಯ ಬಳಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಮಾಡಿಕೊಂಡಿದ್ದನು.
ಸರಣಿ ಬ್ಲ್ಯಾಕ್‌ಮೇಲ್ ಹಾಗೂ ವಿಕೃತಿ ಮೆರೆಯತಿದ್ದ ಆರೋಪಿಗಳು :
ಆರೋಪಿಗಳ ಗುಂಪು ಈ ವಿಡಿಯೋಗಳನ್ನು ಇಟ್ಟುಕೊಂಡು ಬಾಲಕಿಗೆ ಬೆದರಿಕೆ ಹಾಕಲು ಶುರುಮಾಡಿದ್ದರು. “ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುತ್ತೇವೆ” ಎಂದು ಹೆದರಿಸಿ, ವಾಟ್ಸಪ್ ವಿಡಿಯೋ ಕಾಲ್ ಮೂಲಕವೂ ಬಾಲಕಿಯ ವಿಕೃತ ದೃಶ್ಯಗಳನ್ನು ಪ್ರೀ-ರೆಕಾರ್ಡ್ ಮಾಡಿಕೊಂಡಿದ್ದರು. ಬಾಲಕಿಗೆ ನಿರಂತರವಾಗಿ ಬೆದರಿಕೆ ಹಾಕಿ ಸರಣಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಕಿಚಕರ ಅಟ್ಟಹಾಸಕ್ಕೆ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ಶಾಲೆಯನ್ನು ಅರ್ಧಕ್ಕೆ ಮೊಟಕುಗೊಳಿಸುವಂತಾಯಿತು. ಕೊನೆಗೆ ಆರೋಪಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.
ಬೆಳಕಿಗೆ ಬಂದಿದ್ದು ಹೇಗೆ,,,?
ಆರೋಪಿಗಳು ಹರಿಬಿಟ್ಟ ವಿಡಿಯೋ ಬಾಲಕಿಯ ಕುಟುಂಬಸ್ಥರ ಮೊಬೈಲ್‌ಗೆ ಬಂದಿದೆ. ಇದರಿಂದ ಆಘಾತಕ್ಕೊಳಗಾದ ಪೋಷಕರು ಬಾಲಕಿಯನ್ನು ವಿಚಾರಿಸಿದಾಗ ಆರೋಪಿಗಳು ಎಸಗಿದ ದೌರ್ಜನ್ಯ ಹಾಗೂ ನರಕಯಾತನೆ ಬೆಳಕಿಗೆ ಬಂದಿದೆ. ಸಂತ್ರಸ್ತೆಯನ್ನು ಪ್ರಸ್ತುತ ಕೊಪ್ಪಳದ ಬಾಲ ಮಂದಿರದಲ್ಲಿ ಇರಿಸಲಾಗಿದ್ದು, ಸೂಕ್ತ ರಕ್ಷಣೆ ನೀಡಲಾಗಿದೆ.
ಖಾಕಿ ಪಡೆ ತೀವ್ರ ಕಾರ್ಯಾಚರಣೆ : ಸಂತ್ರಸ್ತೆಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕೊಪ್ಪಳ ಪೊಲೀಸರು ಬಿ.ಎನ್.ಎಸ್-2023ರ ವಿವಿಧ ಕಲಂಗಳು, ಪೋಕೋ ಕಾಯ್ದೆ ಹಾಗೂ ಐ.ಟಿ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖಾಧಿಕಾರಿಗಳ ತಂಡ ತೀವ್ರ ಕಾರ್ಯಾಚರಣೆ ನಡೆಸಿ, ಪ್ರಕರಣದಲ್ಲಿ ಭಾಗಿಯಾಗಿದ್ದ 7 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.