ವೀಣಾ ವಿಜಯಾನಂದ ಕಾಶಪ್ಪನವರ ಜನ್ಮದಿನ ಆಚರಣೆ: ಪೂಜೆ, ಕೇಕ್ ಕತ್ತರಿಸಿ ಸಂಭ್ರಮ
ವೀರಮಾರ್ಗ ನ್ಯೂಸ್ : ಧಾರವಾಡ : ಹುಬ್ಬಳ್ಳಿ : ಬಾಗಲಕೋಟೆ ಜಿಲ್ಲೆಯ ಹೆಮ್ಮೆಯ ಮನೆ ಮಗಳು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ವೀಣಾ ವಿಜಯಾನಂದ ಕಾಶಪ್ಪನವರ ಅವರ ಜನ್ಮದಿನವನ್ನು ಹುಬ್ಬಳ್ಳಿಯಲ್ಲಿ ಪಂಚಮಸಾಲಿ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು.
ಜನ್ಮದಿನದ ಅಂಗವಾಗಿ ಉಣಕಲ್ನ ಶ್ರೀ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ವೀಣಾ ಕಾಶಪ್ಪನವರ ಅವರ ಆರೋಗ್ಯ, ಆಯುಷ್ಯ ಹಾಗೂ ಜನಸೇವಾ ಕಾರ್ಯಗಳಿಗೆ ಇನ್ನಷ್ಟು ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಲಾಯಿತು. ನಂತರ ಕೇಕ್ ಕತ್ತರಿಸಿ, ಸಿಹಿ ಹಂಚಿ ಜನ್ಮದಿನದ ಸಂಭ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಂಚಮಸಾಲಿ ಮುಖಂಡರಾದ ಸಂಗನಗೌಡ ಹೂವನ್ನವರ, ಪಂಚಮಸಾಲಿ ಹುಬ್ಬಳ್ಳಿ–ಧಾರವಾಡ ನಗರ ಅಧ್ಯಕ್ಷರಾದ ರಾಜು ಕೊಟಗಿ, ಪಂಚಮಸಾಲಿ ಮುಖಂಡರಾದ ಶಿವಾನಂದ ಸಾತನ್ನವರ, ಪ್ರಕಾಶ ಮಾಯಕಾರ, ಕಾಂಗ್ರೆಸ್ ಮುಖಂಡರಾದ ಶಂಕರ ಮಲ್ಕನ್ನವರ, ದಾವಲಸಾಬ್ ಗೋಕುಲ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.