ವೀರಮಾರ್ಗ ನ್ಯೂಜ್ ಶಿಗ್ಗಾವಿ : ನಗರದಲ್ಲಿ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಸ್.ಬಿ.ಲಕ್ಕಣ್ಣವರ ಉಪಾಧ್ಯಕ್ಷರಾಗಿ ಎಸ್.ಜಿ. ಟೊಪಣ್ಣವರ, ಕಾರ್ಯದರ್ಶಿಯಾಗಿ ವಿವೇಕ ರಾಮಗೇರಿ ಸಹಕಾರ್ಯದರ್ಶಿಯಾಗಿ ಸಿ.ಬಿ. ವಾಲ್ಮೀಕಿ ಖಜಾಂಚಿಯಾಗಿ ಎಂ.ಎಲ್.ಕಳಸ ಆಯ್ಕೆಯಾದರು.
ಕಾರ್ಯಕಾರ್ಯಮಂಡಳಿ ಸದಸ್ಯರಾಗಿ ಸಿ.ಬಿ.ಪಾಟೀಲ, ಎ.ಎ.ಗಂಜೇನವರ, ಸಿ.ಎಫ್.ಅಂಗಡಿ, ಎಸ್.ಎಂ.ಗಾಣಗೇರ, ಪಿ.ಪಿ.ಹೊಂಡದಕಟ್ಟಿ, ಪಿ.ಎಂ.ಗೊಂದಕರ, ಮಹಿಳಾ ಪ್ರತಿನಿಧಿಯಾಗಿ ವ್ಹಿ.ಪಿ.ಬಾಗೂರ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಕಣ್ಣವರ ಮಾತನಾಡಿ, ಜಾತಿ, ಧರ್ಮ, ಗುಂಪುಗಾರಿಕೆ ಮೀರಿ, ಸಾಮಾಜಿಕ ಪರಿಕಲ್ಪನೆ ಆದಾರದ ಮೇಲೆ ಈ ಚುನಾವಣೆ ನಡೆದಿದ್ದು, ೩ ವರ್ಷದ ಅಧಿಕಾರದ ಅವದಿಯಲ್ಲಿ ಯಾರಿಗೂ ನೋವಾಗದಂತೆ ವಕೀಲರ ನ್ಯಾಯಯುತವಾದ ಬೇಡಿಕೆಗೆ, ಅವರ ಕಷ್ಟ ಸುಖಗಳಲ್ಲಿ ಬಾಗಿಯಾಗಿ ಪ್ರಾಮಾಣಿಕ ಸೇವೆ ಮಾಡುವುದಾಗಿ ಹೇಳಿದರು.
ಕಾರ್ಯದಶಿಯಾಗಿ ಆಯ್ಕೆಯಾದ ವಿವೇಕ ರಾಮಗೇರಿ ಮಾತನಾಡಿದರು. ಈ ಸಂದರ್ಬದಲ್ಲಿ ನಿಕಟಪೂರ್ವ ಅಧ್ಯಕ್ಷ ಪದಾಧಿಕಾರಿಗಳು ಹಿರಿಯ ಕಿರಿಯ ವಕೀಲರು ಉಪಸ್ಥಿತರಿದ್ದರು.
ವಕೀಲರ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಲಕ್ಕಣ್ಣವರ, ಉಪಾಧ್ಯಕ್ಷರಾಗಿ ಟೊಪಣ್ಣವರ ಆಯ್ಕೆ
