ವೀರಮಾರ್ಗ ನ್ಯೂಜ್ ಶಿಗ್ಗಾವಿ : ಸಣ್ಣ, ಸಣ್ಣ ಸಮಾಜವನ್ನು ಮುಖ್ಯ ವಾಹಿನಿಗೆ ತರುವುದೇ ಕಾಂಗ್ರೆಸ್ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಯಾಸೀರಹಮ್ಮದ ಖಾನ ಪಠಾಣ ಹೇಳಿದರು.
ಪಟ್ಟಣದ ದೈವಜ್ಞ ಸಮಾಜವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಣ್ಣ, ಸಣ್ಣ ಸಮಾಜದ ಜನರ ಆಶೀರ್ವಾದದಿಂದ ನನಗೆ ಈ ಬಾರಿ ಶಾಸಕನಾಗುವ ಅವಕಾಶ ಸಿಕ್ಕಿದೆ. ಅವಕಾಶ ಕಲ್ಪಿಸಿದ ಜನರ ಸೇವೆಗಾಗಿ ನಾನು ಸದಾಸಿದ್ಧನಿರುವೆ. ತಮ್ಮ ಸಮಾಜದ ಬೇಡಿಕೆಗಳಾದ ಗಣಪತಿ ದೇವಸ್ಥಾನದ ನಿರ್ಮಾಣ, ಸಭಾಭವನ, ಹಾಸ್ಟೇಲ್ ವ್ಯವಸ್ಥೆಯನ್ನು ಕಲ್ಪಿಸಲು ಶ್ರಮಿಸುವುದಾಗಿ ಹೇಳಿದರು.

ದೈವಜ್ಞ ಸಮಾಜದ ತಾಲೂಕಾ ಅಧ್ಯಕ್ಷ ಸುಧಾಕರ ದೈವಜ್ಞ ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳು ಓಟಿಗಾಗಿ ನಮ್ಮ ಸಮಾಜವನ್ನು ಬಳೆಸಿಕೊಂಡು ದೈವಜ್ಞ ಸಮಾಜವನ್ನು ಕಡೆಗಣಿಸಿಕೊಂಡು ಬಂದಿದ್ದಾರೆ. ಆದರೆ ಶಾಸಕ ಯಾಸೀರಹಮ್ಮದಖಾನ ಪಠಾಣ ರವರು ನಮ್ಮ ಸಮಾಜದ ನ್ಯಾಯಯುತವಾದ ಬೇಡಿಕೆಗಳನ್ನು ಇಡೇರಿಸುವ ಬರವಸೆ ನೀಡಿರುವುದು ನಮ್ಮ ಸಮಾಜದ ಜನತೆಗೆ ಆನೆ ಬಲ ಬಂದಂತಾಗಿದೆ ಎಂದು ಹೇಳಿದರು.
ಸರಾಫ ಸಂಘದ ತಾಲೂಕಾ ಅಧ್ಯಕ್ಷ ಚಂದ್ರಕಾಂತ ಪಾಲನವರ ಮಾತನಾಡಿದರು.
ಪುರಸಭೆ ಸದಸ್ಯ ಗೌಸ್‌ಖಾನ ಮುನಸಿ, ವಿನಾಯಕ ರಾಯ್ಕರ, ಪ್ರಕಾಶ ಪಾಲನವರ, ಸಂಕೇತ ರಾಯ್ಕರ, ರವಿ ರಾಯ್ಕರ, ಮಂಜುನಾಥ ವೇರ್ಣೇಕರ, ಆನಂದ ವೇರ್ಣೇಕರ, ಭೂಷಣ ರೇಔಣಕರ, ಸಂತೋಷ ರಾಯ್ಕರ, ಮುನ್ನಾ ಮಾಲ್ದಾರ, ಸಾಧಿಕ ಮಲ್ಲೂರ ಸೇರಿದಂತೆ ಇತರರು ಇದ್ದರು.