ಕಟ್ಟಕಡೆಯ ವ್ಯಕ್ತಿಯ ಚಿಂತನೆಯೇ ನಿಜವಾದ ಸಂಸ್ಥೆ ನಿರ್ಮಾಣ.

ಕಟ್ಟಕಡೆಯ ವ್ಯಕ್ತಿಯ ಚಿಂತನೆಯೇ ನಿಜವಾದ ಸಂಸ್ಥೆ ನಿರ್ಮಾಣ : ನಾಗರಾಜ ಬಂಡಿವಡ್ಡರ

ವೀರಮಾರ್ಗ ನ್ಯೂಸ್ : ಹಾವೇರಿ : ಸಾಮಾಜಿಕ ಕಳಕಳಿ, ಚಿಂತನೆ ಹೊಂದಿರುವವರು ಮಾತ್ರ ಸಂಸ್ಥೆಯ ನಿರ್ಮಾಣದೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕುರಿತು ಚಿಂತಿಸಲು ಸಾಧ್ಯವಾಗಲಿದೆ ಎಂದು ಶಿಕ್ಷಣ ಇಲಾಖೆ ಸಿಆರ್‌ಪಿ ನಾಗರಾಜ ಬಂಡಿವಡ್ಡರ ತಿಳಿಸಿದರು.

ಸವಣೂರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಭುದೀಕ್ಷಾ ಸೇವಾ ಸಂಸ್ಥೆ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳಿಗೆ ಶಾಲಾ ಪರಿಕರ ವಿತರಣೆ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರನ್ನು ಗೌರವಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸುತ್ತಿರುವದು ಸಂತಸ ತಂದಿದೆ ಎಂದರು.

ಬಂಕಾಪೂರ ಗ್ರಾಮದ ಡಿಪಿಪಿ ಸಹಕಾರ ಸಂಘದ ಅಧ್ಯಕ್ಷ ಮೇಘರಾಜ್ ಕೂಲಿ ಮಾತನಾಡಿ, ಭುದೀಕ್ಷಾ ಸಂಸ್ಥೆ ಉತ್ತಮ ಉದ್ದೇಶದಿಂದ ನಿರ್ಮಾಣಗೊಂಡಿದೆ. ಪದಾಧಿಕಾರಿಗಳು ಈ ಮೊದಲು ಸಹ ಸಾಮಾಜಿಕ ಕಾರ್ಯದಲ್ಲಿ ನಿರಂತರ ತೊಡಗಿದ್ದು, ಇಂದಿನಿAದ ಇನ್ನಷ್ಟು ಸಾಮಾಜಿಕ ಕಾರ್ಯಕ್ಕೆ ಬಲ ಬಂದಿದೆ ಎಂದರು.

ಭುದೀಕ್ಷಾ ಸೇವಾ ಸಂಸ್ಥೆಯ ಕಾರ್ಯದರ್ಶಿ ವೀಣಾ ವೀರನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಭುದೀಕ್ಷಾ ಸೇವಾ ಸಂಸ್ಥೆಯ ಅಧ್ಯಕ್ಷೆ ಸುಮಾ ನಿರಂಜನ ಹಾವಣಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆ ರಚನೆಯ ಉದ್ದೇಶ ಹಾಗೂ ಮುಂದಿನ ಕಾರ್ಯ ವೈಕರಿ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ಕಳಲಕೊಂಡ ಗ್ರಾಮದ ಸ್ಫೂರ್ತಿ ಎಫ್‌ಪಿಒ ಸಿಇಒ ಖಂಡೆಪ್ಪ ನೆಗಳೂರ, ಬಿಜೆಪಿ ಪ್ರಮುಖರಾದ ಮಹಾಂತೇಶ ಹಾವಣಗಿ, ನಿರಂಜನ ಹಾವಣಗಿ, ಮಂಜುನಾಥ ಬೆಣ್ಣಿ, ಗಂಗಮ್ಮ ಗೌಡಣ್ಣವರ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಗುಂಜಳ, ಮುಖ್ಯಗುರು ವಿ.ಎಸ್.ಮಾಡಳ್ಳಿ ಹಾಗೂ ಇತರರು ಪಾಲ್ಗೊಂಡಿದ್ದರು. ಇನ್ನರ್ ವೀಲ್ ಕ್ಲಬ್ ಉಪಾಧ್ಯಕ್ಷೆ ಸರೋಜಾ ರಾಯ್ಕರ್ ಹಾಗೂ ಶಿಕ್ಷಕಿ ಎಲ್.ವೈ.ರಸಾಳಕರ ಕಾರ್ಯಕ್ರಮ ನಿರ್ವಹಿಸಿದರು.


ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಕರ್ತರಾದ ಶಂಕ್ರಯ್ಯ ಹಿರೇಮಠ, ಅಶೋಕ ಕಾಳಶೆಟ್ಟಿ, ಯೋಗೇಂದ್ರ ಜಂಬಗಿ, ರಾಜಶೇಖಯ್ಯ ಗುರುಸ್ವಾಮಿಮಠ, ಅಶೋಕ ಉಳ್ಳಟ್ಟಿ, ಅನಿಲಕುಮಾರ ಹೊಂಬಳದ, ಪರಶುರಾಮ ಹೊಳಲ, ಆನಂದ ಮತ್ತಿಗಟ್ಟಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.