ಶಿಗ್ಗಾಂವಿ : ನವಜಾತ ಶಿಶುವನ್ನ ಬಿಸಾಡಿದ ಅಮಾನವೀಯ ಘಟನೆ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ಪಟ್ಟಣದ ಜಯನಗರ ಚಾಳದ ಹಿಂದಿನ ರಸ್ತೆಯ ಕಸ ಎಸೆಯುವ ಜಾಗದಲ್ಲಿ ಹೆಣ್ಣು ನವಜಾತ ಶಿಶುವನ್ನು ಬಿಸಾಡಿಹೋದ ಅಮಾನವೀಯ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಪಟ್ಟಣದ ಶಂಕರಗೌಡ್ರ ಚಾಳದ ಹಿಂಬದಿ ರಸ್ತೆಯ ಕಸಹಾಕು ಜಾಗೆಯಲ್ಲಿ,

ಆಗತಾನೆ ಜನಿಸಿದ ಮಗುವನ್ನು ಯಾರೋ ದುರಿಳರು ಎಸೆದು ಹೋಗಿದ್ದು, ಅದನ್ನು ನೋಡಿದ ಸಾರ್ವಜನಿಕರು ಶಿಗ್ಗಾವಿ ಸರಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಶಿಶು ಮರಣ ಹೋಂದಿರುವುದಾಗಿ ತಿಳಿದುಬಂದಿದೆ. ಈ ಕುರಿತು ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
