ಅಧಿಕಾರಿಗಳ ಮನವಿಗೆ ಸ್ಫಂದಿಸಿ ಹೋರಾಟವನ್ನು ಹಿಂಪಡೆದ ಹೊರಗುತ್ತಿಗೆ ಪೌರ ಕಾರ್ಮಿಕರು

ವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಹೊರಗುತ್ತಿಗೆ ವಾಹನ ಚಾಲಕರು, ಲೋಡರ್ಸ ಹಾಗು ಕಾವಲು ಗಾರರು, ವೇತನ, ಇ.ಎಸ್.ಐ, ಪಿ.ಎಫ್ ಪಾವತಿಸುವಂತೆ ಒತ್ತಾಯಿಸಿ ಮೂರುದಿನಗಳಿಂದ ಮಾಡುತ್ತಿರುವ ಪ್ರತಿಬಟನೆಯನ್ನು ಶನಿವಾರ ಹಿಂಪಡೆದರು.

ಕಳೆದ ಎರಡು ದಿನಗಳಿಂದ ಪಟ್ಟಣದಾತ್ಯಂತ ಸ್ವಚ್ಛತೆ, ಕಸ ವಿಲೇವಾರಿಯನ್ನು ಸ್ಥಗಿತಗೋಳಿಸಿ, ವೇತನಕ್ಕಾಗಿ ಹೋರಾಟದ ಹಾದಿ ಹಿಡಿದಿದ್ದ, ಹೋರಗುತ್ತಿಗೆ ವಾಹನ ಚಾಲಕರು, ಲೋಡರ್ಸ, ಕಾವಲುಗಾರರುಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರು ಹಾಗು ಪುರಸಭೆ ಅಧಿಕಾರಿಗಳ ಮನವಿ ಮೇರೆಗೆ ಪ್ರತಿಬಟನೆಯನ್ನು ಹಿಂಪಡೆದರು. ಪಟ್ಟಣದಾಧ್ಯಂತ ಹಿಂದು ಹಾಗು ಮುಸ್ಲಿಂ ಸಮೂದಾಯದವರು ಹಬ್ಬದ ಸಂಭ್ರಮದಲ್ಲಿದ್ದಾರೆ.

ಈ ಸಂದರ್ಬದಲ್ಲಿ ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಈ ಹಬ್ಬದ ಸಂದರ್ಭದಲ್ಲಿ ತಾವು ಕೇಲಸ ಸ್ಥಗಿತಗೋಳಿಸಿ ಹೋರಾಟಮಾಡುತ್ತಿರುವುದು ಪಟ್ಟಣದ ಅ ಸ್ವಚ್ಛತೆಗೆ ಕಾರಣವಾಗಲಿದೆ. ಒಂದು ತಿಂಗಳ ಒಳಗಾಗಿ ನಿಮಗೆ ಬರಬೇಕಾದ ವೇತನ ಪಿ.ಎಫ್, ಇ.ಎಸ್.ಐ ಹಣವನ್ನು ಕೊಡಿಸುವ ಜವಾಬ್ದಾರಿ ನಮ್ಮದಾಗಿದ್ದು. ಹೋರಾಟವನ್ನು ಕೈಬಿಟ್ಟು ಪಟ್ಟಣದ ಸ್ವಚ್ಛತೆಗೆ ಮುಂದಾಗಬೇಕೇಂದು ಮನವಿ ಮಾಡಿದರು. ಮನವಿಗೆ ಸ್ಫಂದಿಸಿದ ಹೊರಗುತ್ತಿಗೆ ನೌಕರರು ಹೋರಾಟವನ್ನು ಸ್ಥಗೊತಗೋಳಿಸಿ ಪಟ್ಟಣದ ಸ್ವಚ್ಛತೆಗೆ ಮುಂದಾದರು.
ಹೊರಗುತ್ತಿಗೆ ದಾರರಾದ ಮಾಲತೆಶ ಕಟಗಿ, ಹೊನಕೇರಪ್ಪ ಹಾರೊಗೇರಿ, ಮಾಲತೇಶ ಗಿಡ್ಡಣ್ಣನವರ, ಪ್ರಶಾಂತಗೌಡ ಮೂಲಿಗೌಡ್ರ, ದರ್ಮೇಂದ್ರ ಅಸೂಂಡಿ, ಸಂಗಪ್ಪ ಮಾದರ, ನಿಂಗಪ್ಪ ಮಾದರ, ಮೈಲಾರಪ್ಪ ಹರಿಜನ, ನೀಲಪ್ಪ ಮಾದರ, ಬಸವರಾಜ ತಳವಾರ, ನವೀನ ಕಟ್ಟಿಮನಿ, ರಾಜು ಕಟ್ಟಿಮನಿ, ಗುಡ್ಡಪ್ಪ ಕಟ್ಟಿಮನಿ, ಶಿವಪ್ಪ ಕಟ್ಟಿಮನಿ ಸೇರಿದಂತೆ ಪುರಸಭೆ ಅಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *