ಯುಗಾದಿ-ರಂಜಾನ ಹಬ್ಬದ ಉತ್ಸಾಹ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

ವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನಾಧ್ಯಂತ ಹಿಂದು, ಮುಸಲ್ಮಾನ ಬಾಂಧವರಲ್ಲಿ ಹಬ್ಬದ ಉತ್ಸಾಹ ಮನೆಮಾಡಿದ್ದು, ಭಾನುವಾರ ಆಚರಿಸುವ ಯುಗಾದಿ, ಸೋಮವಾರ ಆಚರಿಸುವ ರಂಜಾನ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಮುಗಿಬಿದ್ದು ಖರೀದಿಸುತ್ತಿರುವುದು ಕಂಡುಬಂದಿತು.

ಹಿಂದುಗಳಿಗೆ ಯುಗಾದಿ ಹೊಸವರ್ಷದ ಸಂಭ್ರಮವಾದರೆ, ಮುಸಲ್ಮಾನ ಬಾಂಧವರಿಗೆ ರಂಜಾನ ತಿಂಗಳು ಫವಿತ್ರ ತಿಂಳವಾಗಿ ಹೊರಹೊಮ್ಮಿದೆ. ಹಿಂದುಗಳು ಹೊಸವರ್ಷಕ್ಕೆ ಬೇಕಾದ ಹೊಸಬಟ್ಟೆ, ಪೂಜೆಗೆ ಬೇಕಾದ ಹಣ್ಣು, ಹೂ, ಕಿರಾಣಿ ಸಾಮಗ್ರಿ, ಅಲಂಕಾರಿವಸ್ತುಗಳು ಸೇರಿದಂತೆ ಇತರೇ ಸಾಮಗ್ರಿಗಳನ್ನು ಮಾರುಕಟ್ಟೆಗೆ ಲಗ್ಗೆಯಿಟ್ಟು ಖರೀದಿಯಲ್ಲಿ ತೋಡಗಿದರೇ, ಮುಸಲ್ಮಾನ ಬಾಂಧವರು ಕೂಡಾ ತಿಂಗಳ ಪರ‍್ಯಂತರ ಉಪವಾಸ ವ್ರತ ಕೈಗೋಂಡು ಅಲ್ಲಾನಿಗೆ ಭಕ್ತಿನಮನ ಸಲ್ಲಿಸಿದ ಮುಸ್ಲಿಮರು, ಸೋಮವಾರ ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಪ್ರಾರ್ಥನೆಗೆ ಬೇಕಾದ ಹೊಸಬಟ್ಟೆ, ಟೋಪಿ, ಸಿಹಿತಿನಿಸು, ಹಣ್ಣು ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಮಾರುಕಟ್ಟೆಯ ವಿವಿಧ ಅಂಗಡಿಗಳಿಗೆ ಲಗ್ಗೆ ಇಟ್ಟು ಖರೀದಿಯಲ್ಲಿ ತೋಡಗಿರುವುದು ಸಾಮಾನ್ಯವಾಗಿ ಕಂಡುಬಂದಿತು.

Leave a Reply

Your email address will not be published. Required fields are marked *